ಮೈಸೂರು: ದಸರಾ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಅವರೇ ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಗೂ ಬಿಜೆಪಿ ಜೊತೆ ಕುಮಾರಸ್ವಾಮಿ ಅವರೇ ಕಳುಹಿಸಿದ್ದು, ಅವರು ನೀಡಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗಲೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಜಿಟಿಡಿ ನಮ್ಮ ಹಿರಿಯ ನಾಯಕರು ಅವರನ್ನು ಬಿಟ್ಟರೆ ಅವರ ಮಗ ಜಿ.ಡಿ ಹರೀಶ್ ಚುನಾವಣೆಗೆ ನಿಲ್ಲುಸುತ್ತೇವೆ ಎಂಬ ಸಾರಾ ಮಹೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹರೀಶ್ ಮೇಲೆ ಪ್ರೀತಿ ಇದ್ದರೆ ಸಾ.ರಾ ಮಹೇಶ್ ಅವರೇ ನೇರವಾಗಿ ಅವನ ಜೊತೆ ಮಾತನಾಡಲಿ. ಹರೀಶ್ ಮೇಲೆ ಸಾ.ರಾ ಮಹೇಶ್‍ಗೆ ಎಷ್ಟು ಪ್ರೀತಿ ಇದೆ ಅನ್ನೋದು ದೇವರಿಗೆ ಗೊತ್ತಿದೆ. ಹರೀಶ್ ಮೇಲೆ ಸಾ.ರಾ ಮಹೇಶ್‍ಗೆ ಎಷ್ಟು ಪ್ರೀತಿ ಇದೆ ಅನ್ನೋದು ನನಗೆ ಗೊತ್ತಿದೆ. ಖುದ್ದು ಸಾ.ರಾ ಮಹೇಶ್‍ಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.