ಮೈಸೂರು: ಗ್ರಾಮ ಪಂಚಾಯತಿ (Gram Panchayat) ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ (Election) ಅಧ್ಯಕ್ಷ ಆಕಾಂಕ್ಷಿಯೊಬ್ಬರು ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿ ಕೈ ಸುಟ್ಟುಕೊಂಡ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ನಡೆದಿದೆ.
ಒಟ್ಟಿಗೆ ಪ್ರವಾಸಕ್ಕೆ 9 ಮಂದಿ ಸದಸ್ಯರು ಹೋಗಿದ್ದಾರೆ. ಆದರೆ ಪ್ರವಾಸಕ್ಕೆ ಕಳುಹಿಸದವರ ಪರವಾಗಿ ಬಂದಿದ್ದು 6 ಮತಗಳು ಮಾತ್ರ. ಸದಸ್ಯರು ಮಾತ್ರ ನಾವೆಲ್ಲಾ ನಿಮಗೆ ಮತ ಹಾಕಿದ್ದೇವೆ ಎಂದು ಕಪ್ಪಡಿ ರಾಜಪ್ಪಾಜಿ ಗದ್ದುಗೆಯಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಇದನ್ನೂ ಓದಿ: 5 ಡಜನ್ಗೂ ಹೆಚ್ಚು ಇನ್ಸ್ಪೆಕ್ಟರ್ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್ ತಡೆ ಹಿಡಿದಿದ್ದು ಯಾಕೆ?
Advertisement
Advertisement
ಕೆ.ಆರ್ ನಗರ ಕ್ಷೇತ್ರದ ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ (JDS) ಬೆಂಬಲಿತ ಭಾರತಿ ವಿಶ್ವನಾಥ್ ಕಣದಲ್ಲಿ ಇದ್ದರು. ಭಾರತಿ ವಿಶ್ವನಾಥ್ ತಮ್ಮ 9 ಜನ ಬೆಂಬಲಿಗರ ಜೊತೆ ಮಾತು ಕತೆ ನಡೆಸಿ ಕೆ.ಆರ್ ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಲಯದಲ್ಲಿ ಆಣೆ ಮಾಡಿಸಿ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದರು. ಪ್ರವಾಸ ಮುಗಿಸಿ ನೇರವಾಗಿ ಮತದಾನ ಪ್ರಕ್ರಿಯೆಗೆ 9 ಜನ ಆಗಮಿಸಿ ಮತದಾನ ಮಾಡಿದ್ದರು. ಆದರೆ ಭಾರತಿ ಅವರಿಗೆ ಈ ಒಂಭತ್ತು ಮತದ ಬದಲು ಕೇವಲ 6 ಮತ ಬಂದಿವೆ.
Advertisement
Advertisement
3 ಮತಗಳಿಂದ ಕಾಂಗ್ರೆಸ್ ಬೆಂಬಲಿತ ರಾಮಕೃಷ್ಟೇಗೌಡ ಗೆಲುವು ಸಾಧಿಸಿದ್ದಾರೆ. ಆದರೆ ಸದಸ್ಯರು ಭಾರತಿ ವಿಶ್ವನಾಥ್ ಅವರಿಗೆ ಮತ ಹಾಕಿದ್ದೇವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ ಸತ್ಯಕ್ಕೆ ಹೆಸರುವಾಸಿಯಾಗಿರುವ ಕಪ್ಪಡಿ ರಾಜಪ್ಪಾಜಿ ಗದ್ದುಗೆ ಮುಂದೆ ನಿಂತು ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಕಾಲೇಜು ಆರಂಭ ಮಾಡದಿದ್ರೆ ಉಪವಾಸ ಸತ್ಯಾಗ್ರಹ ಮಾಡ್ತೇನೆ: ಸುಧಾಕರ್
Web Stories