ಮಂಗಳೂರು: ಮೈಸೂರು ದಸರಾದಲ್ಲಿ ಗೊಂಬೆಗಳ ಪ್ರದರ್ಶನಕ್ಕೆ ವಿಶಿಷ್ಟ ಆದ್ಯತೆ ಇದೆ. ಆದ್ರೆ ಹಳೆ ಮೈಸೂರಿನ ಭಾಗದ ಸಂಸ್ಕೃತಿಯ ಪ್ರತೀಕವಾದ ಬೊಂಬೆ ಪ್ರದರ್ಶನವನ್ನು ಮಂಗಳೂರು ನಗರದಲ್ಲಿ ಏರ್ಪಡಿಸಲಾಗಿತ್ತು.
Advertisement
ಹಳೆ ಮೈಸೂರಿನಿಂದ ಮಂಗಳೂರಿಗೆ ಬಂದ ವಿಪ್ರ ಸಮುದಾಯದವರು ಒಗ್ಗೂಡಿ “ನಮ್ಮವರು” ಸಂಘ ಬೊಂಬೆ ಪ್ರದರ್ಶನವನ್ನ ಆಯೋಜಿಸಿದ್ರು. ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಕಳೆದ 11 ವರ್ಷಗಳಿಂದ ನವರಾತ್ರಿ ವೇಳೆ ಈ ದಸರಾ ಬೊಂಬೆ ಪ್ರದರ್ಶನ ನಡೆಯುತ್ತಿದೆ. ಈ ಬಾರಿ ಮಂಗಳೂರು ಜನರಿಗೆ ಭೂವೈಕುಂಠದ ತಿರುಪತಿ ಶ್ರೀನಿವಾಸ ದೇವರ ಗುಡಿ, ಅದರೊಳಗೆ 8 ಅಡಿ ಎತ್ತರದ ಸರ್ವ ಅಲಂಕಾರದ ದೇವರ ವಿಗ್ರಹ, 6 ಅಡಿ ಎತ್ತರದ ರಾಧಾ ಕೃಷ್ಣರ ಬೊಂಬೆಗಳ ಅನಾವರಣ ಮಾಡಲಾಗಿತ್ತು.
Advertisement
Advertisement
ಹರಿದಾಸರ ಸಾಹಿತ್ಯ ಮೂಲಕ ತತ್ವವಾದದ ಸಿದ್ಧಾಂತ – ವೇದಾಂತಗಳನ್ನು ತಲುಪಿಸಲು ಹರಿದಾಸರ ಪರಂಪರೆಯನ್ನ ಬೊಂಬೆ ಮೂಲಕ ಪ್ರಸ್ತುತಪಡಿಸಲಾಯ್ತು. ಮತ್ತೊಂದೆಡೆ ಮೆಟ್ಟಿಲುಗಳಲ್ಲಿ ದಶಾವತಾರ, ಅಷ್ಟ ಲಕ್ಷ್ಮಿಯರು, ಕಾಳಿಂಗ ಮರ್ಧನ, ಶ್ರೀನಿವಾಸ ಕಲ್ಯಾಣೋತ್ಸವ ಹೀಗೆ ವಿವಿಧ ಬೊಂಬೆಗಳನ್ನ ಜೋಡಿಸಲಾಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv