ಮೈಸೂರು: `ಆಪರೇಷನ್ ಕಮಲ’ ಮೂಲಕ ತಮ್ಮ ಕಿರಿ ಮಗನ ಸರ್ಕಾರವನ್ನು ಕೆಡವಲು ಯತ್ನಿಸಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ದೇವೇಗೌಡರು ಶಾಕ್ ಕೊಟ್ಟಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಇತಿಶ್ರೀ ಹಾಡಿರುವ ಗೌಡರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಗೆ ನಿರ್ಧರಿಸಿದ್ದಾರೆ. ಈ ಮೂಲಕ ಕೈಗೆ ಬಂದ ಅಧಿಕಾರದ ತುತ್ತು ಬಿಜೆಪಿ ಬಾಯಿಯಿಂದ ತಪ್ಪಿದೆ. ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ, ಕಾಂಗ್ರೆಸ್‍ಗೆ ಉಪಾಧ್ಯಕ್ಷ ಸ್ಥಾನ ದಕ್ಕಲಿದ್ದು, ಇಂದು ಚುನಾವಣೆ ನಡೆಯಲಿದೆ.
Advertisement
Advertisement
ವಿಧಾನಸೌಧದಲ್ಲಿರುವ ಮೈತ್ರಿ ಧರ್ಮವನ್ನು ಸಿದ್ದರಾಮಯ್ಯ ಊರಲ್ಲೂ ಪಾಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಮತ್ತು ಸಚಿವ ಸಾರಾ ಮಹೇಶ್‍ಗೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ
Advertisement
ಮೈಸೂರು ಜಿ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಬಿಜೆಪಿಯವರಿಗೆ ಮಾತು ಕೊಟ್ಟಿದ್ದೇವೆ. ಅದಕ್ಕಾಗಿ ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ಜಿಲ್ಲಾಪಂಚಾಯ್ತಿ ಹೊಂದಾಣಿಕೆ ಬಗ್ಗೆ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದರು.
Advertisement
ನಾನು ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಮಾತನಾಡಿದ್ದೇನೆ. ಸ್ಥಳೀಯ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಈ ಸಂದರ್ಭದಲ್ಲಿ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಸದಸ್ಯರ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಅಂದು ಕಾಂಗ್ರೆಸ್ ಜೊತೆಗಿನ ಸಂಬಂಧ ಹಾಳಾಗಿದ್ದ ಸಂಧರ್ಬದಲ್ಲಿ ತೆಗೆದುಕೊಂಡ ನಿರ್ಧಾರ ಮಾಡಿರೋದು. ಯಾರು ಅಧ್ಯಕ್ಷ ಉಪಾಧ್ಯಕ್ಷ ಅದು ಸಹ ನಿರ್ಣಯ ಆಗಿದೆ ಎಂದು ಸಚಿವರು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv