ಮೈಸೂರು: ವಿಶ್ವವಿಖ್ಯಾತ ದಸರಾ ಗಜಪಡೆಯ (Mysuru Dasara Elephants) ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ.
ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. ‘ಮಹೇಂದ್ರ’ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.
ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತನು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯು ರಾತ್ರಿ 8ರ ಸುಮಾರು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್- ಹಿಜ್ಬುಲ್ಲಾ ಟಾಪ್ ಕಮಾಂಡರ್ ಹತ್ಯೆ
ವೀಡಿಯೋ ಮಾಡಿದ ಪ್ರತ್ಯಕ್ಷದರ್ಶಿ ಏನಂತಾರೆ?
ಅರಮನೆ ಆವರಣದ ಒಳಗೆ ಇದ್ದ ದಸರಾ ಆನೆ ಧನಂಜಯ ಏಕಾಏಕಿ ಮತ್ತೊಂದು ಆನೆ ಕಂಜನ್ ಮೇಲೆ ದಾಳಿ ಮಾಡಿ ಅಟ್ಟಾಡಿಸುವ ವೀಡಿಯೋ ತೆಗೆದಿದ್ದು ಅರಮನೆಯ ಗೈಡ್ ಯೋಗೇಶ್. ಇನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ
ದಸರಾದಲ್ಲಿ 18 ಆನೆಗಳು ಭಾಗಿ:
ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಇನ್ನೂ ಓದಿ: 6 ರನ್ ಹೊಡೆದು ಭಾರತದ ಪರ ವಿಶಿಷ್ಟ ಸಾಧನೆ ನಿರ್ಮಿಸಿ ಸಚಿನ್, ಪಾಂಟಿಂಗ್ ಕ್ಲಬ್ ಸೇರಿದ ಕೊಹ್ಲಿ