ಮೈಸೂರು: ನಮ್ಮ ಮೇಲೆ ದೌರ್ಜನ್ಯ ನಡೆಸಿ ಜಮೀನು ಕಿತ್ತು ಕೊಳ್ಳುವ ಬದಲು ವಿಷ ಕೊಟ್ಟು ಬಿಡಿ ಇಲ್ಲೆ ಎಲ್ಲಾ ಸತ್ತು ಹೋಗುತ್ತೇವೆ ಎಂದು ಡಾ. ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಗುರುತಿಸಿರುವ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತ ಮಹಿಳೆ ಜಯಮ್ಮ ಹೇಳಿದ್ದಾರೆ.
ಮೈಸೂರಿನ ಹೊರವಲಯದ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಸರ್ಕಾರದ ನಿರ್ಧಾರಕ್ಕೆ ಈ ಜಾಗದಲ್ಲಿ ಕಳೆದ 4 ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜಯಮ್ಮ ಕುಟುಂಬ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ.
Advertisement
Advertisement
ವಿಷ್ಣು ಸ್ಮಾರಕ ವಿವಾದಕ್ಕೆ ಅಭಿಮಾನಿಗಳು ಆಗ್ರಹಿಸಿದ ಅಭಿಮಾನಿಗಳ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ ಜಯಮ್ಮ, ನಮಗೆ ಸೂಕ್ತವಾದ ಪರಿಹಾರ ಕೊಟ್ಟು ಜಮೀನು ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಜಮೀನು ಕಿತ್ತು ಕೊಳ್ಳುವುದಾರೆ ವಿಷ ಕೊಡಿ. ನಮ್ಮ ಸಮಾಧಿಯೂ ಇಲ್ಲೇ ಮಾಡಿ ಎಂದರು.
Advertisement
ಭಾರತಿ ವಿಷ್ಣುವರ್ಧನ್ ಅವರು ನಮ್ಮ ಜೊತೆ ಸರಿಯಾಗಿ ಮಾತನಾಡಿಲ್ಲ. ಇಲ್ಲಿಗೆ ಬರುವ ಎಲ್ಲರೂ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ನಾಳೆಯಿಂದ ಈ ಜಮೀನಿಗೆ ಯಾರಿಗೂ ಕಾಲಿಡುವುದಕ್ಕೂ ಬಿಡಲ್ಲ. ನಮಗೇ ಸೂಕ್ತ ಪರಿಹಾರ ನೀಡದೆ 4 ತಲೆ ಮಾರುಗಳಿಂದ ಇದೇ ಭೂಮಿಯನ್ನು ನಂಬಿ ಜೀವನ ನಡೆಸುವ ನಮ್ಮ ಅನ್ನಕ್ಕೆ ಕಲ್ಲು ಹಾಕಬೇಡಿ. ನಿಮಗೇ ಇದೇ ಜಾಮೀನು ಬೇಕೆಂದರೆ ಸೂಕ್ತ ಪರಿಹಾರ ನೀಡಿ. ಈ ವಿಚಾರದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಅಸಹಾಯಕರಾಗಿದ್ದಾರೆ. ಈ ಹಿಂದೆ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಹಣ ನೀಡಲ್ಲ ಎಂದು ಹೇಳಿ, ಸ್ವತಃ ಅವರೇ ಹಣ ನೀಡುತ್ತೇನೆ ಎಂದು ಮಾಹಿತಿ ನೀಡಿದ್ದರು. ಆದರೆ ಅವರು ನೀಡುವ 20 ಲಕ್ಷ ರೂ. ಮಾತ್ರ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಸರ್ಕಾರ ಗೋಮಾಳ ಎಂದು ಹೇಳುತ್ತೆ. ಅದಕ್ಕೆ ನಾವು ಪರಿಹಾರಕ್ಕಾಗಿ ನ್ಯಾಯಾಲಯ ಮೋರೆ ಹೋಗಿದ್ದೇವೆ ಎಂದರು. ಇದನ್ನು ಓದಿ : ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ
Advertisement
ಎಷ್ಟು ಪರಿಹಾರ ಬೇಕು ಎಂದು ಕೇಳಿದ್ದಕ್ಕೆ, 20 ಲಕ್ಷ ಬೇಡ. ನಮ್ಮ ಮನೆಯಲ್ಲಿ 5 ಮಂದಿ ಇದ್ದಾರೆ. ಒಂದೊಂದು ತಲೆಗೆ 30 ಲಕ್ಷ ಕೊಡಬೇಕು. ನಮ್ಮ ಬೇಡಿಕೆಗೆ ಭಾರತಿ ವಿಷ್ಣುವರ್ಧನ್ ಒಪ್ಪಿಗೆ ನೀಡಲಿಲ್ಲ ಎಂದು ಹೇಳಿದರು.
ಕಲಾವದರಿಗೂ ಕಷ್ಟ ಸುಖ ಗೊತ್ತಿರುತ್ತದೆ. ನಮಗೆ ಮಾತುಕತೆ ಮೂಲವೇ ಚರ್ಚೆ ನಡೆಸಿ ಪರಿಹಾರ ನೀಡಲು ಮುಂದಾದರೆ ಸಿದ್ಧರಾಗಿದ್ದೇವೆ. ಈ ಕುರಿತು ಸರ್ಕಾರದ ಅಧಿಕಾರಿಗಳಿಗೂ ಕೂಡ ನಮ್ಮ ಬೇಡಿಕೆ ತಿಳಿಸಿದ್ದೇವೆ. ಈ ಭೂಮಿಯನ್ನು ನಂಬಿಯೇ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv