ಮೈಸೂರು: ತಟ್ಟೆಗಾಗಿ ಮತದಾರರು ಮುಗಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಂದು ಮೈಸೂರಿನ ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಇತ್ತು. ಅಭ್ಯರ್ಥಿಗಳು ತಮ್ಮ ಚುನಾವಣಾ ಗುರುತುಗಳನ್ನೇ ಉಡುಗೊರೆಯಾಗಿ ಹಂಚಿದ್ದಾರೆ.
ಮತದಾರರನ್ನು ಸೆಳೆಯಲು ಬಹಿರಂಗವಾಗಿ ರಸ್ತೆಯಲ್ಲೇ ತಟ್ಟೆ, ಬಲ್ಪ್, ಕಾಯಿ ಹಂಚಿಕೆ ಮಾಡಿದ್ದಾರೆ. ಮೈಸೂರು ವಸ್ತುಪ್ರದರ್ಶನದ ಆವರಣದ ಒಳಗೆ ಮತದಾನ ನಡೆಯುತ್ತಿದೆ. ಹೀಗಾಗಿ ಹೊರಗಡೆ ಅಭ್ಯರ್ಥಿಗಳು ಮತದಾರರಿಗೆ ರಾಜರೋಷವಾಗಿ ಉಡುಗೊರೆ ಹಂಚಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಂದ ಮತದಾರರು ಉಡುಗೊರೆ ಪಡೆದು ಮತ ಹಾಕಲು ಹೋಗಿದ್ದಾರೆ.
ನಡು ರಸ್ತೆಯಲ್ಲೇ ಈ ಚುನಾವಣಾ ಅಕ್ರಮಗಳು ನಡೆಯುತ್ತಿದ್ದು, ಬ್ಯಾಂಕ್ ಚುನಾವಣೆ ಅಂತ ಯಾರೂ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.