ಬೆಳಗಾವಿ: ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಈಗಿನ ಮುಡಾ ರದ್ದಾಗಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅವಕಾಶ ಕೊಡುವ ವಿಧೇಯಕ ಇದಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿದೇಯಕವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರಕ್ಕೂ ಮುನ್ನ ಚರ್ಚೆ ನಡೆಯಿತು. ವಿಧೇಯಕವನ್ನು ಶಾಸಕ ಎಸ್.ಟಿ.ಸೋಮಶೇಖರ್ ಸ್ವಾಗತಿಸಿದರು. ಬೈರತಿ ಸುರೇಶ್ ಮಾತನಾಡಿ, ಈ ವಿಧೇಯಕ ಸಮಂಜಸವಾಗಿದೆ ಎಂದರು.
ಜಿ.ಟಿ.ದೇವೇಗೌಡ ಮಾತನಾಡಿ, ಮುಡಾದಲ್ಲಿ ಹೆಚ್ಚು ಶಾಸಕರು ಇಲ್ಲ. ಹೊಸ ಪ್ರಾಧಿಕಾರದಲ್ಲಿ ಶಾಸಕರನ್ನು ಸದಸ್ಯರಾಗಿ ಮಾಡಿ. ತಜ್ಞರ ಸಮಿತಿ ಮಾಡಿ. ಮೈಸೂರು ನಗರಾಭಿವೃದ್ಧಿ ಪ್ಲಾನಿಂಗ್ ಅಧೋಗತಿಗೆ ಹೋಗಿದೆ. ತಜ್ಞರ ಸಮಿತಿ ಮಾಡಿ ವಿಧೇಯಕದಲ್ಲಿ ಸೇರಿಸಿ ಎಂದು ಸಲಹೆ ನೀಡಿದರು.
ಆಡಳಿತಾತ್ಮಕ ವಿವರಣೆ ಇಲ್ಲ, ಆರ್ಥಿಕ ವೆಚ್ಚ ಎಷ್ಟಾಗುತ್ತೆ ಅಂತ ಇದರಲ್ಲಿ ಇಲ್ಲ. ಅದರ ಬಗ್ಗೆ ತಿಳಿಸಿ ಎಂದು ಸುನೀಲ್ ಕುಮಾರ್ ಕೇಳಿದ್ದರು.