ಮೈಸೂರು: ನಗರದಲ್ಲಿ ಕ್ವಾರಂಟೈನ್ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಗರಂ ಆಗಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಡ್ಜ್ ಗಳಲ್ಲಿ ಕ್ವಾರೆಂಟೈನ್ ಮಾಡಲು ವಿರೋಧ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ನಾವೇನು ಪಿಕ್ ನಿಕ್‍ಗೆ ಹೊರಗಡೆ ಓಡಾಡುತ್ತಿಲ್ಲ. ನಿಮ್ಮ ಪ್ರಾಣ ಊಳೀಸಲು ಹೊರಗಡೆ ಹೋರಾಡುತ್ತಿದ್ದೇವೆ. ಕ್ವಾರೆಂಟೈನ್ ಆಗುವವರಿಗೂ ಕುಟುಂಬ, ಮಕ್ಕಳಿದ್ದಾರೆ. ಅವರನ್ನು ಮಾನವೀಯತೆಯಿಂದ ನೋಡಿ ಎಂದು ತಿಳಿಸಿದ್ದಾರೆ.
Advertisement
Advertisement
ಒಂದು ಪ್ರಕರಣ ಸ್ಥಳೀಯರ ವಿರೋಧ ಸಹಿಸಬಹುದು. ಆದರೆ ಮುಂದೆ ಇನ್ನೂ ಹೆಚ್ಚಾದರೆ ಸ್ಥಳೀಯರು ಸಹಕಾರ ಕೊಡಲೇಬೇಕು. ಕ್ವಾರಂಟೈನ್ ಆದವರು ಉದ್ದೇಶಪೂರ್ವಕವಾಗಿ ಹೊರಗಿಲ್ಲ. ಅವರೆಲ್ಲ ಬದುಕಬೇಕು ಅಂತಾನೆ ಕ್ವಾರೆಂಟೈನ್ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
ಜನರು ವಿರೋಧ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು. ನಿಮಗಾಗಿ ನಾವು ಹೊರಗಿದ್ದು ಕೆಲಸ ಮಾಡ್ತಿದ್ದೀವಿ. ಅದನ್ನ ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.