ಮೈಸೂರು: ಮುಡಾದಲ್ಲಿ (Muda) 50:50 ಅನುಪಾತ ನಿವೇಶನ ಹಂಚಿಕೆ ಅವ್ಯವಹಾರ ವಿಚಾರಕ್ಕೆ ಇದೀಗ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ.
ಈ ಹಿಂದೆಯೇ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ (DC K.V Rajendra) ಅವರು ಮುಡಾ ಆಯುಕ್ತರಿಗೆ 15 ಪತ್ರ ಬರೆದಿದ್ದರು. ಪತ್ರದಲ್ಲಿ ತುರ್ತು ಕ್ರಮಕ್ಕೆ ಸಮಿತಿ ರಚಿಸಲು ಶಿಫಾರಸು ಮಾಡಿದ್ದರು.
Advertisement
ಫೆ.8 ರಿಂದ ಮುಡಾ ಆಯುಕ್ತರಿಗೆ ಸ್ಪಷ್ಟನೆ ಕೇಳಿ ನಿರಂತರವಾಗಿ ಪತ್ರ ಬರೆಯಲಾಗಿತ್ತು. ಅದರಲ್ಲಿ ಸಾಕಷ್ಟು ಅಂಶಗಳನ್ನು ತಿಳಿಸಿ ನಗರಾಭಿವೃದ್ಧಿ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಆಯುಕ್ತರು ಈ ಪತ್ರಕ್ಕೆ ಯಾವುದೇ ಉತ್ತರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
Advertisement
Advertisement
ಪತ್ರದ ಪ್ರಮುಖ ಅಂಶಗಳು:
– 50:50 ಅನುಪಾತದಲ್ಲಿ ನಿವೇಶನ ನೀಡಲು ಕೈಗೊಂಡ ನಿರ್ಣಯ ನಿಯಮಬಾಹಿರವೆಂದು ರದ್ದುಪಡಿಸಿರುವುದರಿಂದ 50:50ರ ಅನುಪಾತದಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಕ್ರಯ ಪತ್ರಗಳ ನೋಂದಣಿಯನ್ನು ತಕ್ಷಣದಿಂದಲ್ಲೇ ಸ್ಥಗಿತಗೊಳಿಸಿ.
– ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅನುಷ್ಠಾನಗೊಳಿಸುವ ಪೂರ್ವ ಸರ್ಕಾರದ ಅನುಮೋದನೆ ಪಡೆದು ಕಾರ್ಯಗತಗೊಳಿಸಬೇಕಾಗಿದ್ದು, ಆಯುಕ್ತರು ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ.
– ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಂಡ ನಿಯಮಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನ್ವಯ ಮಾಡಿಕೊಳ್ಳಲು ಆಯುಕ್ತರಿಗೆ ಇರುವ ಅಧಿಕಾರದ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿರುವುದಿಲ್ಲ.
– ನ್ಯಾಯಾಲಯದ ಆದೇಶಗಳನ್ನು ಒಪ್ಪಲು ಬರದೇ ಇದ್ದ ಸಂದರ್ಭಗಳಲ್ಲಿ ಅದನ್ನು ಪ್ರಶ್ನಿಸಲು ಅವಕಾಶಗಳಿದ್ದರೂ ಪ್ರಶ್ನೆ ಮಾಡಿಲ್ಲ.
– ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ, ಬದಲಿ ನಿವೇಶನ ಮಂಜೂರಾತಿ, ತುಂಡು ಜಾಗ ಹಂಚಿಕೆ ಮತ್ತು ಭೂ ಪರಿಹಾರವಾಗಿ ಜಾಗಗಳನ್ನು ನೀಡಿರುತ್ತಾರೆ ಎಂಬ ಆರೋಪಕ್ಕೆ ಆಯುಕ್ತರು ಯಾವುದೇ ವಿವರಣೆಯನ್ನು ನೀಡಿಲ್ಲ.
– ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದರ ಬಗ್ಗೆ ದೂರು ಅರ್ಜಿದಾರರು ಹಲವಾರು ನಿದರ್ಶನಗಳನ್ನು ನೀಡಿದ್ದು, ಇದರ ಬಗ್ಗೆ ವಿವರಣೆಗಳಿರುವುದಿಲ್ಲ.