ಕಲರ್ ಫುಲ್ ಯುವ ದಸರಾ-ಸಂಚಿತ್ ಹೆಗ್ಗಡೆ ಹಾಡುಗಳಿಗೆ ಫಿದಾ

Public TV
1 Min Read
Yuva dasara

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಯುವಸ್ತೋಮವನ್ನು ಹುಚ್ಚೆದ್ದು ಕುಣಿಸುವ ಯುವ ದಸರಾ ವೇದಿಕೆ ಮಾತ್ರ ಅಕ್ಷರಶಃ ಫುಲ್ ಕಲರ್ ಫುಲ್ ಆಗಿದೆ.

ಸದ್ಯ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಲ್ಲಿ ಒಂದು ಯುವ ದಸರಾ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ಯುವಸ್ತೋಮವನ್ನು ಹುಚ್ಚೆದ್ದು ಕುಣಿಸುತ್ತಿದೆ. ಶುಕ್ರವಾರ ರಾತ್ರಿ ಕಾರ್ಯಕ್ರಮದ ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳ ನೃತ್ಯ ಎಲ್ಲರ ಗಮನ ಸೆಳೆಯಿತು. ಎಲಿಕ್ಸರ್ ಹಾಗೂ ಡ್ರೀಮ್ಸ್ ಫ್ಯಾಷನ್ಸ್ ಅವರಿಂದ ಮೂಡಿ ಬಂದ ಫ್ಯಾಷನ್ ಶೋನಲ್ಲಿ ಕನ್ಯಾಮಣಿಯರ ಬೆಕ್ಕಿನ ನಡಿಗೆ ಮೋಡಿ ಮಾಡಿತು.

Yuva dasara 1

ವೇದಿಕೆಯ ಮೇಲೆ ಗಾಯಕ ಸಂಚಿತ್ ಹೆಗ್ಗಡೆ ವಿಭಿನ್ನ ಸಂಗೀತದ ಮೂಲಕ ವೇದಿಕೆಯಲ್ಲಿ ಧೂಳ್ ಎಬ್ಬಿಸಿ ಫುಲ್ ಕಮಾಲ್ ಮಾಡಿದರು. ತದನಂತರ ಸ್ಟೇಜ್‍ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಧಮ್ ಪವರೇ ಧಮದ ಪವರೇ ಎಂಬ ಸಾಂಗ್ ಮೂಲಕ ಎಂಟ್ರಿ ಕೊಟ್ಟ ಗಾಯಕ ಚಂದನ್ ಶೆಟ್ಟಿ ಅಕ್ಷರಶಃ ಯುವ ದಸರಾ ವೇದಿಕೆಯ ಮುಂಭಾಗ ಇದ್ದ ಯುವಸ್ತೋಮವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಆರಂಭದಿಂದ ಕೊನೆಯವರೆಗೂ ಚಂದನ್ ಶೆಟ್ಟಿ ತಮ್ಮ ಗಾಯನದ ಮೂಲಕ ರಂಜಿಸಿದರು.

ಒಟ್ಟಾರೆ ನಾಲ್ಕನೇ ದಿನದ ಯುವ ದಸರಾ ಕನ್ನಡ ಹಾಡು ನೃತ್ಯಗಳ ಮೂಲಕ ಯುವಸ್ತೋಮವನ್ನು ಕುಣಿಸುವಂತೆ ಮಾಡಿತು. ಇಂದು ಸ್ಯಾಂಡಲ್‍ವುಡ್ ನೈಟ್ ಇದ್ದು, ಸಾಂಡಲ್‍ವುಡ್ ಸ್ಟಾರ್‍ಗಳನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *