– ಮದ್ಯದಿಂದ ಸರ್ಕಾರಕ್ಕೆ ಆದಾಯ ಬರುವಂತಾಗಿದ್ದು ಕೃಷ್ಣರಿಂದ
ಮೈಸೂರು: ಮುಂದಿನ ವರ್ಷ 2023ರಲ್ಲೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಸರಾ ಉದ್ಘಾಟಿಸಲಿದ್ದಾರೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಭವಿಷ್ಯ ನುಡಿದಿದ್ದಾರೆ.
Advertisement
ಮೈಸೂರು ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರಂಥ ಯೋಗ್ಯ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಕರೆಸಿದ ಸಿಎಂ ಬೊಮ್ಮಾಯಿ ಅವರಿಗೆ ವಂದನೆ. ಎಸ್.ಎಂ. ಕೃಷ್ಣ ಅವರಂಥ ನಡೆ ನುಡಿಯನ್ನು ಇಟ್ಟು ಕೊಂಡು ಅವರ ರೀತಿಯಲ್ಲೇ ಆಡಳಿತವನ್ನು ನಡೆಸಲು ಈಗಿನ ಸಿಎಂ ಮುಂದಾಗಿದ್ದಾರೆ. ಎಸ್.ಎಂ. ಕೃಷ್ಣ ಅವರು ದೂರದರ್ಶಿತ್ವ ಇದ್ದ ಮಹಾ ಆಡಳಿತಗಾರ ಆಗಿದ್ದರು. ಆಡಳಿತದಲ್ಲಿ ಆರ್ಥಿಕ ಶಿಸ್ತು ತಂದ ಕೀರ್ತಿ ಅವರಿಗೆ ಮೊದಲು ಸಲ್ಲುತ್ತದೆ ಎಂದರು. ಇದನ್ನೂ ಓದಿ: ಯಾವ ಜನ್ಮದ ಪುಣ್ಯವೋ ಇಂತಹ ದೊಡ್ಡ ಗೌರವ ಸಿಕ್ಕಿದೆ, ಸಿಎಂಗೆ ಧನ್ಯವಾದ: ಎಸ್.ಎಂ ಕೃಷ್ಣ
Advertisement
Advertisement
ಮದ್ಯದ ಲಾಬಿಯನ್ನು ಹೊಡೆದು ಹಾಕಿದ್ದು ಕೃಷ್ಣ ಅವರ ಸರ್ಕಾರ. ಮದ್ಯದಿಂದ ದೊಡ್ಡ ಮಟ್ಟದ ಆದಾಯ ಸರ್ಕಾರಕ್ಕೆ ಬರುವಂತಾಗಿದ್ದು ಕೃಷ್ಣ ಅವರ ಆಡಳಿತದಿಂದ ಅವರು ದೊಡ್ಡ ದೊಡ್ಡ ಸಮಸ್ಯೆ ಗಳನ್ನು ಎದುರಿಸಿ ಉತ್ತಮ ಆಡಳಿತ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಹಾದಿಯಲ್ಲೇ ಬೊಮ್ಮಾಯಿ ಸಾಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. 2023ರಲ್ಲೂ ಬೊಮ್ಮಾಯಿ ಅವರೆ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
Advertisement
ರಾಜ್ಯದ ಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಜನಕ್ಕೆ ಹತ್ತಿರವಾಗುವ ರೀತಿ ಸಿಎಂ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಸಮಸ್ಯೆ ಬಂದರು ವಿಚಲಿತರಾಗದೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಆಡಳಿತದೊಂದಿಗೆ ಕೌಟುಂಬಿಕ ವಿಚಾರದಲ್ಲೂ ಅವರು ಮಾದರಿಯಾಗಿದ್ದಾರೆ ಎಂದು ಬೊಮ್ಮಾಯಿ ನಡೆ ನುಡಿಯನ್ನು ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ