ಮೈಸೂರು: ಈ ಬಾರಿ ದಸರಾ (Mysuru Dasara) ಜಂಬೂ ಸವಾರಿಯಲ್ಲಿ (Dasara Procession) ಗತಕಾಲದ ವೈಭವ ಮರುಕಳಿಸಲಿದೆ. ಈ ಬಾರಿ ದಸರಾದಲ್ಲಿ ರಾಜ ಪೋಷಾಕಿನಲ್ಲಿ ಪೊಲೀಸರು (Police) ಮಿಂಚಲಿದ್ದಾರೆ. ಇದೇ ವಸ್ತ್ರದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.
414 ವರ್ಷಗಳ ಇತಿಹಾಸವುಳ್ಳ ದಸರಾದಲ್ಲಿ ಈ ಬಾರಿ ರಾಜಪರಂಪರೆಯ ಜಂಬೂ ಸವಾರಿ ನಡೆಯಲಿದೆ. ಮರೆಯಾಗಿದ್ದ ಪರಂಪರೆಯ ಸೊಗಡು ಈ ಬಾರಿ ದಸರಾದಲ್ಲಿ ಮತ್ತೆ ಮರುಕಳಿಸಲಿದೆ. ಜಂಬೂ ಸವಾರಿ ವೇಳೆ ಅಂಬಾರಿ ಸುತ್ತ ರಾಜಪರಂಪರೆಯ ಪೋಷಾಕುಗಳಲ್ಲಿ ಪೊಲೀಸರು ಮಿಂಚಲಿದ್ದಾರೆ. ಕೇವಲ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ಜಂಬೂ ಸವಾರಿಯ ಗತವೈಭವವನ್ನು ಇದೀಗಾ ಅದೇ ಮಾದರಿಯಲ್ಲಿ ನಡೆಸಲು ತಯಾರಿ ನಡೆಸಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್, ಕೋರ್ಸ್ ವಿವರ ತಿಳಿದುಕೊಳ್ಳಿ
ಅಂಬಾರಿ ಆನೆಯ ಸುತ್ತ ಭದ್ರತೆಗಾಗಿ ನಿಯೋಜಿಸುವ ಪೊಲೀಸ್ ಸಿಬ್ಬಂದಿ ಪಾರಂಪರಿಕ ಪೋಷಾಕು ತೊಟ್ಟುಕೊಂಡೆ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಪಾರಂಪರಿಕ ಪೋಷಾಕುಗಳು ಸಿದ್ಧವಾಗಿವೆ.
ಅದೇ ರೀತಿ ರಾಜ ಬಿರುದುಗಳನ್ನು ಹಿಡಿದು ಕಲಾ ತಂಡಗಳು ಸಾಗಲಿವೆ. ಸುಮಾರು 200 ಜನರು ರಾಜರ ಕಾಲದಲ್ಲಿ ತೊಡುತ್ತಿದ್ದ ಉಡುಗೆಗಳನ್ನು ತೊಡಲಿದ್ದಾರೆ. ಈ ಹಿಂದೆ ಇದ್ದ ಹಸಿರು ಲ್ಯಾನ್ಸರ್, ಕೆಂಪು ಬಣ್ಣದ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್ ಹಾಗೂ ಅರಮನೆಯ ಜಿಲೋ ಪೋಷಾಕುಗಳು ಇದಕ್ಕಾಗಿ ತಯಾರಾಗಿವೆ. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]