ಮೈಸೂರು: ವಿಶ್ವ ವಿಖ್ಯಾತ ಮೈಸೂರು (Mysuru) ದಸರಾ (Dasara) ಮಹೋತ್ಸವದ ಹಿನ್ನೆಲೆಯಲ್ಲಿ ಕಾಡಿನಿಂದ ಅರಮನೆಯ ಆವರಣಕ್ಕೆ ಬಂದಿರುವ ಗಜಪಡೆಯ ತೂಕ ಪರೀಕ್ಷೆ ಮಾಡಲಾಯಿತು. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ಒಳ ಪಡಿಸಲಾಯಿತು. ಈ ವೇಳೆ ಆನೆಗಳ ತೂಕ ಆರೋಗ್ಯಕರವಾಗಿರುವುದು ಕಂಡು ಬಂದಿದೆ.
ಮೈಸೂರು ಅರಮನೆಯಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಗಜಪಡೆಗೆಯನ್ನು ಕರೆತರಲಾಯಿತು. ಈ ವೇಳೆ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು (Abhimanyu) 5,160 ಕೆಜಿ ತೂಗಿದ್ದಾನೆ. ಈ ಮೂಲಕ ಆರೋಗ್ಯವಂತ ತೂಕವನ್ನು ಹೊಂದಿದ್ದಾನೆ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್‍ನ ಅತೀ ದೊಡ್ಡ ನಗರಕ್ಕೆ ಆರ್ಥಿಕ ಸಂಕಷ್ಟ – ತುರ್ತು ಪರಿಸ್ಥಿತಿ ಘೋಷಣೆ
Advertisement
Advertisement
ಆನೆಗಳ (Elephant) ತೂಕದ ಆಧಾರದ ಮೇಲೆ ಅವುಗಳ ಆಹಾರ ಮತ್ತು ತರಬೇತಿ ನಿಗದಿಯಾಗುತ್ತದೆ. ಆನೆಗಳು ಆರೋಗ್ಯವಂತ ತೂಕವನ್ನು ಹೊಂದಿದ್ದು, ಅವುಗಳಿಗೆ ಸೂಕ್ತ ಆಹಾರ ಹಾಗೂ ತರಬೇತಿಗೆ ಸಜ್ಜುಗೊಳಿಸಲು ಕ್ರಮ ವಹಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಯುರೋಪ್ ಪ್ರವಾಸ
Advertisement
ದಸರಾ ಗಜಪಡೆಯ ತೂಕದ ವಿವರ:
Advertisement
ವಿಜಯ – 2,830 ಕೆಜಿ
ಭೀಮ – 4,370 ಕೆಜಿ
ವರಲಕ್ಷ್ಮಿ – 3,020 ಕೆಜಿ
ಮಹೇಂದ್ರ – 4,530 ಕೆಜಿ
ಧನಂಜಯ – 4,940 ಕೆಜಿ
ಕಂಜನ್ – 4,240 ಕೆಜಿ
ಗೋಪಿ – 5,080 ಕೆಜಿ
Web Stories