ಮೈಸೂರು: ದಸರಾಗೆ(Dasara) ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಷಣದ ಕೊನೆಯಲ್ಲಿ ಇನ್ನೊಂದು ವರ್ಷ ಒಳ್ಳೆಯ ಕೆಲಸ ಮಾಡಲು ದೇವಿ ಆಶೀರ್ವಾದ ಇರಲಿ ಎಂದು ಭಾವನಾತ್ಮಕ ನುಡಿಯನ್ನು ಆಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇನ್ನೈದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹಿಂದೆ ಹೇಳುತ್ತಿದ್ದರು. ಆದರೆ ಈ ಬಾರಿ ಇನ್ನು ಒಂದು ವರ್ಷ ಎಂದು ನಿರ್ದಿಷ್ಟವಾಗಿ ಪ್ರಸ್ತಾಪಿಸುವ ಮೂಲಕ ಅಧಿಕಾರ ಹಂಚಿಕೆ ಒಪ್ಪಂದದ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
Advertisement
ತಮ್ಮ ಭಾಷಣದಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಇರುವವರೆಗೂ ಜನರ ಸೇವೆ ಮಾಡುತ್ತೇನೆ. ಎಲ್ಲರೂ ಮೊದಲ ಮನುಷ್ಯರಾಗೋಣ. ಪರಸ್ಪರ ಪ್ರೀತಿಸೋಣ. ಪರಸ್ಪರ ದ್ವೇಷಿಸಿಕೊಳ್ಳುವುದು ಬೇಡ. ಇನ್ನೊಂದು ವರ್ಷ ಒಳ್ಳೆಯ ಕೆಲಸ ಮಾಡಲು ದೇವಿ ಆಶೀರ್ವಾದ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎನ್ನುತ್ತಾ ಸಿಎಂ ತಮ್ಮ ಭಾಷಣವನ್ನು ಮುಗಿಸಿದರು.
Advertisement
Advertisement
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಮಧ್ಯೆ ಅಧಿಕಾರ ಹಂಚಿಕೆ ಸೂತ್ರಗಳು ನಡೆದಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಪಕ್ಷದ ಹೈಕಮಾಂಡ್ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸಿದ್ದೇವೆ ಎಂದು ಹೇಳಿತ್ತು. ನಂತರ ಅಧಿಕಾರ ಹಂಚಿಕೆಯ ಬಗ್ಗೆ ಯಾವುದ ಪ್ರಸ್ತಾಪ ಆಗಿರಲಿಲ್ಲ.
Advertisement
ಮಧ್ಯೆ ಮಧ್ಯೆ ಡಿಕೆಶಿ ಆಪ್ತ ಶಾಸಕರು ಡಿಸಿಎಂ ಪರ ಬ್ಯಾಟ್ ಬೀಸುತ್ತಿದ್ದರು. ಈ ಹೇಳಿಕೆಗಳು ಪ್ರಕಟವಾದ ಕೂಡಲೇ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಆಗುತ್ತಿತ್ತು. ಈಗ ಸಿದ್ದರಾಮಯ್ಯ ಅವರೇ ಇನ್ನೊಂದು ವರ್ಷ ಕೆಲಸ ಮಾಡಲು ದೇವಿ ಆಶೀರ್ವಾದ ಇರಲಿ ಎಂದು ಹೇಳಿದ್ದರಿಂದ ಮತ್ತೆ ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಶಿವಕುಮಾರ್ ಪಾತ್ರ ಬಹಳಷ್ಟು ದೊಡ್ಡದಿದೆ. ಹಿತ್ತಲ ಬಾಗಿಲಿನಿಂದ ಯಾರ‍್ಯಾರೊ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ನಮ್ಮೂರು ಮನೆಮಗ. ಹಾಗಾಗಿ ಅವರು ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸುತ್ತೇನೆ. ಮುಖ್ಯಮಂತ್ರಿಯನ್ನಾಗಿ ಮಾಡುವುದು ಹೈಕಮಾಂಡ್ ತೀರ್ಮಾನ. ನೂರಕ್ಕೆ ನೂರರಷ್ಟು ಡಿಕೆಶಿ ಸಿಎಂ ಆಗುತ್ತಾರೆ ಎಂದು ಈ ಹಿಂದೆ ಪರಿಷತ್ ಸದಸ್ಯ ಪುಟ್ಟಣ್ಣ (Puttanna) ಹೇಳಿಕೆ ನೀಡಿದ್ದರು.