ಬೆಂಗಳೂರು: ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ (Banu Mushtaq) ದಸರಾದಲ್ಲಿ (Dasara) ಭಾಗವಹಿಸಲು ನಮ್ಮ ಅಡ್ಡಿಯಿಲ್ಲ. ಆದರೆ ದೇವಿಗೆ ಪೂಜೆ ಮಾಡಿದರೆ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ (Fatwa Institution) ಅನುಮತಿ ತೆಗೆದುಕೊಳ್ಳಬೇಕು ಎಂದು ಜಾಮೀಯಾ ಮಸೀದಿ ಮೌಲನಾ ಡಾ.ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿದ ಚುಟುಕು ಸಂದರ್ಶನದಲ್ಲಿ ಮಾತನಾಡಿದ ಜಾಮೀಯಾ ಮಸೀದಿ ಮೌಲನಾ ಡಾ ಮಕ್ಸೂದ್ ಇಮ್ರಾನ್, ಪೂಜೆಯಲ್ಲಿ ನಿಂತರೆ ತಪ್ಪಿಲ್ಲ. ಅರ್ಚಕ ಅಥವಾ ಬೇರೆಯವರು ಪೂಜೆ ಮಾಡುತ್ತಿದ್ದರೆ ಇವರು ಭಾಗವಹಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ:ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್
ಚಾಮುಂಡಿಗೆ ಪೂಜಾ ವಿಧಿ ವಿಧಾನ ಅಥವಾ ಆರತಿ ಬೆಳಗೋದು, ಹೀಗೆ ಪೂಜಾ ಕೈಂಕರ್ಯದಲ್ಲಿ ತಾವೇ ಸ್ವಂತ ಭಾಗಿಯಾದರೆ ಭಾನು ಮುಷ್ತಾಕ್ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ ಅನುಮತಿ ತೆಗೆದುಕೊಳ್ಳಬೇಕು. ಇದಕ್ಕೆ ಫತ್ವಾ ಇನ್‌ಸ್ಟಿಟ್ಯೂಷನ್ ಅವರು ಏನು ಹೇಳುತ್ತಾರೋ ನೋಡಬೇಕು. ಅದು ಅವರಿಗೆ ಬಿಟ್ಟ ವಿಚಾರ. ನಾನು ಬಾನು ಮುಷ್ತಾಕ್ ಅವರಿಗೆ ಸಲಹೆ ಮಾತ್ರ ಕೊಡಬಹುದು ಎಂದು ಹೇಳಿದರು. ಇದನ್ನೂ ಓದಿ: ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ
ಬಿಜೆಪಿ ಶಾಸಕ ಗರುಡಾಚಾರ್ ಇಲ್ಲಿ ಬರುತ್ತಾರೆ. ಪ್ರಾರ್ಥನೆ ಮಾಡುತ್ತಾರೆ. ಅವರು ಮುಸ್ಲಿಮ್ ಆಗ್ತಾರಾ? ನನ್ನನ್ನು ದೇವಸ್ಥಾನಕ್ಕೆ ಕರೆಯುತ್ತಾರೆ. ನಾನು ಹಿಂದು ಆಗಿಬಿಡುತ್ತೀನಾ? ಪ್ರಧಾನಿಯವರು ದರ್ಗಾಗೆ ಚಾದರ ಕಳುಹಿಸುತ್ತಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಹೋದರೆ ವಿರೋಧ ಯಾಕೆ ಎಂದು ಪ್ರಶ್ನಿಸಿದರು.