ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ನಾಳೆ ದಸರಾ ಗಜಪಡೆ ಕಾಡಿನಿಂದ ನಾಡಿಗೆ ಪಯಣ ಆರಂಭಿಸಲಿವೆ.
ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ (Mysuru) ಆಗಮಿಸಲಿವೆ. ಇದನ್ನೂ ಓದಿ: ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ
ಎರಡನೇ ತಂಡದಲ್ಲಿ 5 ಆನೆಗಳು ಬರಲಿದೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತು ಕೂಡ ಮಾಡಲಾಗಿದೆ. ನಾಡಿಗೆ ಬರುವ ಈ ಗಜಪಡೆಗೆ ಆ.23 ರಂದು ಮೈಸೂರು ಅರಮನೆಯಲ್ಲಿ ಅದ್ಧೂರಿಯಿಂದ ಸ್ವಾಗತಿಸಲಾಗುತ್ತದೆ. ಇದನ್ನೂ ಓದಿ: ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ
ವೈಭವೋಪೇತ ಜಂಬೂಸವಾರಿಯಲ್ಲಿ ಪಾಳ್ಗೊಳ್ಳುವ ಆನೆಗಳು ಅರಮನೆ ನಗರಿಯತ್ತ ಹೊರಟುನಿಂತಿವೆ. ಕೊಡಗು ಜಿಲ್ಲೆ (Kodagu) ದುಬಾರೆ ಸಾಕಾನೆ ಶಿಬಿರದಿಂದ ಕಂಜನ್, ಧನಂಜಯ, ಗೋಪಿ, ಅನೆಗಳು ಒಂದು ತಿಂಗಳ ಭರ್ಜರಿ ಪೂರ್ವಸಿದ್ಧತೆಯೊಂದಿಗೆ ನಾಳೆ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ
ಆನೆಗಳಿಗೆ ಸಾಕಾನೆ ಶಿಬಿರದಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಪೂಜೆಯನ್ನು ನೆರವೇರಿಸಿದ ಸಾಕಾನೆಗಳ ಮಾವುತ, ಕಾವಾಡಿಗಳು ಯಾವುದೇ ವಿಘ್ನ ಬರದಂತೆ ಪೂಜೆ ಸಲ್ಲಿಸಿದರು. ಒಂದು ತಿಂಗಳು ಮೈಸೂರಿನಲ್ಲಿ ವಿಶೇಷ ಆಹಾರ ಹಾಗೂ ತರಬೇತಿ ನಡೆಸಲಿರುವ ದಸರಾ ಆನೆಗಳು ಮೈಸೂರಿಗೆ ಹೊರಟಿವೆ. ಇದನ್ನೂ ಓದಿ: ರಾಜ್ಯಪಾಲರನ್ನು ನಮ್ಮ ನಾಯಕರು ನಿಂದನೆ ಮಾಡಿಲ್ಲ, ಇರೋದನ್ನೆ ಹೇಳಿದ್ದಾರೆ: ಸಿದ್ದರಾಮಯ್ಯ
ಇನ್ನೂ ದುಬಾರೆ ಸಾಕಾನೆ ಶಿಬಿರದಿಂದ ದಸರಾ ಆನೆಗಳು ವೀರನಹೊಸಹಳ್ಳಿಗೆ ಕಳುಹಿಸುವ ಸಲುವಾಗಿ ಲಾರಿಗಳಿಗೆ ಹತ್ತಿಸಲಾಯಿತು. ನಾಡದೇವತೆಯ ಹಬ್ಬದಲ್ಲಿ ಪಾಲ್ಗೊಳ್ಳುವ ಮಾವುತ ಕಾವಾಡಿಗಳು ಮಾತಾನಾಡಿ, ದೇವಿಯ ಹಬ್ಬದಲ್ಲಿ ಭಾಗಿಯಾಗಲು ನಿಜವಾಗಿಯೂ ನಾವು ಪುಣ್ಯ ಮಾಡಿದ್ದೇವೆ. ಸಾಕು ಪ್ರಾಣಿಗಳ ಮೂಲಕ ದೇವಿಯ ಸೇವೆಗೆ ಹೋಗುವುದೇ ನಮಗೆ ತುಂಬಾ ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು- ಸಿದ್ದರಾಮಯ್ಯ
ಮೊದಲ ಹಂತವಾಗಿ ದುಬಾರೆಯಿಂದ ಮೂರು ಆನೆಗಳು ಹೊರಟಿವೆ. ಮುಂದಿನ ದಿನಗಳಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಅಯ್ಯಪ್ಪ, ಹರ್ಷ, ಸುಗ್ರೀವ, ಪ್ರಶಾಂತ ಅರಮನೆಯತ್ತ ಪ್ರಯಾಣ ಬೆಳೆಸಲಿದೆ. ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸ
ವಿಶ್ವವಿಖ್ಯಾತ ಮೈಸೂರು ದಸರಾದ (Mysuru Dasara) ಜಂಬೂಸವಾರಿಗಾಗಿ ಆನೆಗಳ ತಂಡ ದುಬಾರೆಯಿಂದ ವೀರನಹೊಸಹಳ್ಳಿ ಶಿಬಿರಕ್ಕೆ ತೆರಳಿ ಅಲ್ಲಿಂದ ನಾಳೆ ಬೆಳಿಗ್ಗೆ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದು, ಸಂಪ್ರದಾಯದಂತೆ ಅರಮನೆಗೆ ಗಜಪಯಣ ನಡೆಯಲಿದೆ. ಇದನ್ನೂ ಓದಿ: ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ