ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ 2018ಕ್ಕೆ ತಯಾರಿಗಳು ಜೋರಾಗಿ ಜರುಗುತ್ತಿದ್ದು, ಕ್ರೀಡಾ ಚಟುವಟಿಕೆಗಳು, ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಕಾರು ರೇಸ್ ಆಯೋಜನೆ ಮಾಡಲಾಗಿದೆ.
ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಕ್ರೀಡಾ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಮೊದಲ ಬಾರಿಗೆ ಟ್ರಯಥ್ಲಾನ್ ಆಯೋಜನೆ ಮಾಡಿದ್ದು, ಅದು ಈಜು, ಸೈಕ್ಲಿಂಗ್, ಓಟ ಒಳಗೊಂಡಿದೆ. ಸರಸ್ವತಿಪುರಂ ಈಜುಕೊಳ ಸಮೀಪ ಟ್ರಯಥ್ಲಾನ್‍ಗೆ ಚಾಲನೆ ನೀಡಲಾಗಿದ್ದು, ಸೂಪರ್ ಸ್ಪ್ರಿಂಟ್(ವೇಗದ ನಡಿಗೆ), ಸ್ಪ್ರಿಂಟ್ ವಿಭಾಗಗಳಲ್ಲಿ ನಡೆಯುತ್ತಿದೆ. ಸೂಪರ್ ಸ್ಪ್ರಿಂಟ್ ವಿಭಾಗದಲ್ಲಿ 400 ಮೀ. ಈಜು, 10 ಕಿ.ಮೀ. ಸೈಕ್ಲಿಂಗ್, 2.5 ಕಿ.ಮೀ. ಓಟ ಒಳಗೊಂಡಿದೆ. ಸ್ಪ್ರಿಂಟ್ ವಿಭಾಗದಲ್ಲಿ 750 ಮೀ. ಈಜು, 20 ಕಿ.ಮೀ. ಸೈಕ್ಲಿಂಗ್, 5 ಕಿ.ಮೀ. ಓಟ ಒಳಗೊಂಡಿದೆ.
Advertisement
Advertisement
ಟ್ರಯಥ್ಲಾನ್‍ನಲ್ಲಿ ಒಟ್ಟು 98 ಸ್ಪರ್ಧಿಗಳು ಭಾಗಿಯಾಗಿದ್ದು, ಶಾಲಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲ ವಯೋಮಾನದವರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.
Advertisement
ದಸರಾ ಹಿನ್ನೆಲೆ ಮೈಸೂರಿನಲ್ಲಿ ಗ್ರಾವಲ್ ಫೆಸ್ಟ್ ಆಯೋಜನೆ ಮಾಡಿದ್ದು, ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಕಾರು ರೇಸ್ ಆಯೋಜಿಸಿದೆ. ಕಾರ್ ರೇಸ್ ನಲ್ಲಿ ಕಾರುಗಳು ಮೈ ನವಿರೆಳಿಸುವಂತೆ ಧೂಳೆಬ್ಬಿಸಿವೆ. 1.8 ಕಿ.ಮೀ ವ್ಯಾಪ್ತಿಯ ಟ್ರ್ಯಾಕ್ ನಲ್ಲಿ ನಡೆಯುತ್ತಿರೋ ಕಾರ್ ರೇಸ್, 168 ಸ್ಪರ್ಧಿಗಳು ಗ್ರಾವಲ್ ಫೆಸ್ಟ್ ನಲ್ಲಿ ಭಾಗಿಯಾಗಿದ್ದಾರೆ.
Advertisement
ಇಂಡಿಯನ್ ಓಪನ್ ಕ್ಲಾಸ್ ಮೈಸೂರ್ ಲೋಕಲ್ ನಾವಿಸ್ ಓಪನ್, ಎಸ್.ಯು.ವಿ ಕ್ಲಾಸ್, ಅನ್ ರಿಸ್ಟ್ರಿಕ್ಟೆಡ್ ಕ್ಲಾಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಗ್ರಾವಲ್ ಫೆಸ್ಟ್ ಆಯೋಜನೆ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv