ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕಾಗಿ ಗಜಪಡೆಯ ತಾಲೀಮು ಪ್ರಾರಂಭವಾಗಿದೆ. ನಗರದ ರಾಜಬೀದಿಗಳಲ್ಲಿ ಕ್ಯಾಪ್ಟನ್ ಅರ್ಜುನ ಪಡೆಯು ಗಾಂಭೀರ್ಯದ ನಡಿಗೆ ಆರಂಭಿಸಿವೆ.
ಅರಮನೆಯಿಂದ ಹೊರಟು ತಾಲೀಮಿನಲ್ಲಿ 8 ಆನೆಗಳು ಭಾಗಿಯಾಗಿದ್ದವು. ದಸರಾ ಮೆರವಣಿಗೆ ಸಾಗುವ ಆಲ್ಬರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ರಸ್ತೆಯಲಿ ಸಾಗಿ ಆಯುರ್ವೇದಿಕ್ ವೃತ್ತದಲ್ಲಿ ತಾಲೀಮು ಮುಕ್ತಾಯವಾಗಿದೆ. ಬರಿ ಮೈಯಲ್ಲಿ ದಸರಾ ಆನೆಗಳ ತಾಲೀಮು ಈಗ ಶುರುವಾಗಿದ್ದು, ಇನ್ನು ಕೆಲವೇ ದಿನದಲ್ಲಿ ಆನೆಗಳ ಮೇಲೆ ಮಣ್ಣಿನ ಮೂಟೆಯ ಭಾರ ಹೊರೆಸಿ ತಾಲೀಮು ಪ್ರಾರಂಭಿಸಲಾಗುತ್ತದೆ ಎಂಬುವುದಾಗಿ ತಿಳಿದುಬಂದಿದೆ.
Advertisement
ನಗರದ ರಸ್ತೆಗಳಲ್ಲಿ ವಾಹನಗಳ ಶಬ್ಧಕ್ಕೆ ಆನೆಗಳನ್ನು ಒಗ್ಗಿಸುವ ಸಲುವಾಗಿ ನಡಿಗೆ ತಾಲೀಮು ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ವೇಳೆ ಅರ್ಜುನನ ಹಿಂದೆ ಅಭಿಮನ್ಯು, ಬಲರಾಮ, ಭೀಮ, ಗಜೇಂದ್ರ, ವಿಜಯ, ಕಾವೇರಿ, ವರಲಕ್ಷೀ ಆನೆಗಳು ಹೆಜ್ಜೆ ಹಾಕಿದವು.
Advertisement
Advertisement
Advertisement