ಹೆಸರು – ಅಭಿಮನ್ಯು (ಗಂಡಾನೆ)
ತೂಕ – 4700-5000 ಕೆಜಿ
ಶಿಬಿರ – ಮತ್ತಿಗೋಡು ಆನೆ ಶಿಬಿರ
ಮಾವುತ – ವಸಂತ ಜೆ.ಎಸ್
ಕಾವಾಡಿ – ರಾಜು ಜೆ.ಕೆ
ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಅಭಿಮನ್ಯುವಿನ ವಿಶೇಷ ಗುಣವೆಂದರೆ, ಕಾಡಾನೆಗಳನ್ನು ಸೆರೆ ಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಭಿಮನ್ಯು ಈವರೆಗೆ ಸುಮಾರು 140 ರಿಂದ 150 ಕಾಡಾನೆಗಳನ್ನು, 40 ರಿಂದ 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015ರ ವರೆಗೂ ನಾಡಹಬ್ಬ ಮೈಸೂರು ದಸರಾದಲ್ಲಿ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿವರ್ಹಿಸಿದ್ದಾನೆ. ಕಳೆದ 4 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊಂದಿರುವ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾನೆ ಅಭಿಮನ್ಯು.
Advertisement
Advertisement
ಹೆಸರು: ಧನಂಜಯ (ಗಂಡಾನೆ)
ತೂಕ: 4800-4900 ಕೆಜಿ
ಶಿಬಿರ: ದುಬಾರೆ ಆನೆ ಶಿಬಿರ
ಮಾವುತ – ಭಾಸ್ಕರ್ ಜೆ.ಸಿ
ಕಾವಾಡಿ – ರಾಜಣ್ಣ ಜೆ.ಎಸ್
ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯವಲಯ ವ್ಯಾಪ್ತಿಯಲ್ಲಿ ಸೆರೆಹಿಡಿಡಿಯಲಾದ ಈ ಆನೆಯು ಅತ್ಯಂತ ಬಲಿಷ್ಠ ಗಜ ಎಂದೇ ಗುರುತಿಸಿಕೊಂಡಿತ್ತು. ಇದೀಗ ಯಶಸ್ವಿಯಾಗಿ ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ 6 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಟ್ಟದ ಆನೆಯಾಗಿ ಪಾಲ್ಗೊಳ್ಳುತ್ತಿದೆ.
Advertisement
Advertisement
ಹೆಸರು: ರೋಹಿತ್ (ಗಂಡಾನೆ)
ತೂಕ: 3000-3200 3.29.
ಶಿಬಿರ: ರಾಮಪುರ ಆನೆ ಶಿಬಿರ
ಮಾವುತ: ಸೈಯದ್ ಉಸ್ಮಾನ್
ಕಾವಾಡಿ: ಮಾದು
ರೋಹಿತ್ ಆನೆಯನ್ನು 2001 ರಲ್ಲಿ ಹೆಡಿಯಾಲ ಅರಣ್ಯ ಪ್ರದೇಶದಲ್ಲಿ 6 ತಿಂಗಳ ಮರಿಯಾಗಿದ್ದಾಗ ಸೆರೆ ಹಿಡಿಯಲಾಯಿತು. ಪ್ರಸ್ತುತ ಆರೋಗ್ಯವಾಗಿದ್ದು, ಕಳೆದ ವರ್ಷದಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2019ರಲ್ಲಿ ರೋಹಿತ್ ಹೆಚ್ಚುವರಿ ಆನೆಯಾಗಿ, 2ನೇ ತಂಡದಲ್ಲಿ ಆಗಮಿಸಬೇಕಿತ್ತು. ಆದ್ರೆ ಕಾರಣಾಂತರಗಳಿಂದ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತವಾಯಿತು. ಇದಾದ 4 ವರ್ಷಗಳ ನಂತರ ಅಂದ್ರೆ 2023ರಿಂದ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು.
ಹೆಸರು: ಹಿರಣ್ಯ (ಹೆಣ್ಣಾನೆ)
ತೂಕ: 2800-3000 ಕೆಜಿ
ಶಿಬಿರ: ರಾಮಪುರ ಆನೆ ಶಿಬಿರ
ಮಾವುತ: ಶಫಿವುಲ್ಲಾ
ಕಾವಾಡಿ: ಮನ್ಸೂರ್
ಹಿರಣ್ಯ ಆನೆಯನ್ನು 2021 ರಲ್ಲಿ ಕೊಡಗಿನ ಆನೆ ಮನೆ ಫೌಂಡೇಶನ್ ಇವರಿಂದ ಇಲಾಖಾ ವಶಕ್ಕೆ ಪಡೆದಿದ್ದು ರಾಮಪುರ ಆನೆ ಶಿಬಿರದಲ್ಲಿರುತ್ತದೆ. ಕಳೆದ ವರ್ಷದ ದಸರಾ ಮಹೋತ್ಸವದಲ್ಲಿ ಗುರುತಿಸಿಕೊಂಡಿದ್ದ ಹಿರಣ್ಯ, ಈ ಬಾರಿಯೂ ದಸರಾ ಉತ್ಸವದಲ್ಲಿ ಪಾಲ್ಗೊಂಡಿದೆ.
ಹೆಸರು: ದೊಡ್ಡಹರವೆ ಲಕ್ಷ್ಮೀ
ತೂಕ: 3000-3500 ಕೆಜಿ
ಶಿಬಿರ: ದೊಡ್ಡಹರವೆ ಆನೆ ಶಿಬಿರ
ಮಾವುತ: ರವಿ
ಕಾವಾಡಿ: ಮಂಜುನಾಥ್
ಈ ಆನೆಯು ದೊಡ್ಡಹರವೆ ಆನೆ ಶಿಬಿರದಲ್ಲಿದ್ದು, ಕಳೆದ 2 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಹೆಸರು: ಏಕಲವ್ಯ (ಗಂಡಾನೆ)
ತೂಕ: 4000-4200 ಕೆಜಿ
ಶಿಬಿರ: ಮತ್ತಿಗೋಡು ಆನೆ ಶಿಬಿರ
ಮಾವುತ: ಸೃಜನ್
ಕಾವಾಡಿ: ಇದಾಯತ್
ಏಕಲವ್ಯ ಆನೆಯನ್ನು 2022 ರಲ್ಲಿ ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಸರೆಹಿಡಿಯಲಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಗಳಿಗೆ ಅಂಜುವುದಿಲ್ಲ. ಮೊದಲನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಹೆಸರು: ಸುಗ್ರೀವ (ಗಂಡಾನೆ)
ತೂಕ: 4800-5000
ಶಿಬಿರ: ದುಬಾರೆ ಆನೆ ಶಿಬಿರ
ಮಾವುತ: ಜೆ.ಜಿ ಶಂಕರ್
ಕಾವಾಡಿ: ಅನಿಲ್ ಜೆ.ಆರ್
ಸುಗ್ರೀವ ಆನೆಯನ್ನು 2016 ರಲ್ಲಿ ಕೊಡಗಿನ ಕುಶಲಾನಗರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಪ್ರಸ್ತುತ ಆರೋಗ್ಯವಾಗಿರುತ್ತದೆ. ಕಳೆದ ಎರಡು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ಪಾಲ್ಗೊಂಡಿದೆ.
ಹೆಸರು: ಪ್ರಶಾಂತ (ಗಂಡಾನೆ)
ತೂಕ: 4700-4900 ಕೆಜಿ
ಶಿಬಿರ: ದುಬಾರೆ
ಮಾವುತ: ಜೆ.ಎ ಬಿನ್ನಪ್ಪ
ಕಾವಾಡಿ: ಚಂದ್ರ
ಪ್ರಶಾಂತ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಹುಲಿ ಮತ್ತು ಆನೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಕಳೆದ 14 ವರ್ಷ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುತ್ತದೆ.
ಹೆಸರು: ಕಂಜನ್ (ಗಂಡಾನೆ)
ತೂಕ: 4000-4200
ಶಿಬಿರ: ದುಬಾರೆ
ಮಾವುತ: ಜೆ.ಡಿ ವಿಜಯ
ಕಾವಾಡಿ: ಕಿರಣ
ಕಂಜನ್ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹಾಸನದ ಹಾಲೂರು ಸೇರಿದಂತೆ ವಿವಿಧೆಡೆ ಉಪಟಳ ನೀಡುತ್ತಿದ್ದ ಆನೆಗಳಲ್ಲಿ ಕಂಜನ್ ಸಹ ಒಂದಾಗಿತ್ತು. 14-15ನೇ ವಯಸ್ಸಿಗೆ ಪುಂಡಾಟಿಕೆ ಮೆರೆಯುತ್ತಿದ್ದ ಗಂಡಾನೆಯನ್ನು ಸೆರೆ ಹಿಡಿದು ದುಬಾರೆ ಕ್ಯಾಂಪ್‌ನಲ್ಲಿಟ್ಟು ಪಳಗಿಸಲಾಯಿತು, 2ನೇ ವರ್ಷದಲ್ಲೇ ಮಾವುತ, ಕವಾಡಿಗಳ ಹಿಡಿತಕ್ಕೆ ಬಂದ ಕಂಜನ್, ಹುಲಿ ಮತ್ತು ಆನೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಸಾಲಿನ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.
ಹೆಸರು: ಭೀಮ (ಗಂಡಾನೆ)
ತೂಕ: 4300-4500 ಕೆಜಿ
ಶಿಬಿರ: ಮತ್ತಿಗೋಡು
ಮಾವುತ: ಗುಂಡ
ಕಾವಾಡಿ: ನಂಜುಂಡಸ್ವಾಮಿ
ಭೀಮ ಆನೆಯನ್ನು 2000ರಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಸದರಿ ಆನೆಯನ್ನು ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. 2017ನೇ ಸಾಲಿನ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹಾಗೂ 2022 ರಿಂದ ಪಟ್ಟದಾನೆಯಾಗಿ ಪಾಲ್ಗೊಂಡಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.
ಹೆಸರು: ಮಹೇಂದ್ರ (ಗಂಡಾನೆ)
ತೂಕ: 4000-4600 ಕೆಜಿ
ಶಿಬಿರ: ಮತ್ತಿಗೋಡು
ಮಾವುತ: ರಾಜಣ್ಣ
ಕಾವಾಡಿ: ಮಲ್ಲಿಕಾರ್ಜುನ
ಮಹೇಂದ್ರ ಆನೆಯನ್ನು 2018 ರಲ್ಲಿ ರಾಮನಗರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. ಕಳೆದ 2 ವರ್ಷಗಳಿಂದ ಶ್ರೀರಂಗಪಟ್ಟಣ ಗ್ರಾಮೀಣ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿ ಭಾಗಿಯಾಗಿರುತ್ತದೆ. ಈ ಬಾರಿಯೂ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಹೆಸರು: ಲಕ್ಷ್ಮಿ
ತೂಕ: 2400-2500 ಕೆಜಿ
ಶಿಬಿರ: ರಾಮಪುರ ಆನೆ ಶಿಬಿರ
ಮಾವುತ: ಚಂದ್ರ
ಕಾವಾಡಿ: ಕೃಷ್ಣಮೂರ್ತಿ
ತಾಯಿ ಆನೆಯಿಂದ ಬೇರ್ಪಟ್ಟ ಲಕ್ಷ್ಮಿ ಆನೆಯು 2002ನೇ ಇಸವಿಯಲ್ಲಿ ದೊರಕಿತು. ಇಲಾಖಾ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗಿರುತ್ತದೆ. ಕಳೆದ 3 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯ ದಸರಾ ಆನೆಯಲ್ಲಿ ಒಂದಾಗಿದೆ.
ಹೆಸರು: ಗೋಪಿ (ಗಂಡಾನೆ)
ತೂಕ: 4900-5000 ಕೆಜಿ
ಶಿಬಿರ: ದುಬಾರೆ
ಮಾವುತ: ಪಿ.ಬಿ ನವೀನ್
ಕಾವಾಡಿ: ಜೆ.ಆರ್ ಶಿವು
ಗೋಪಿ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿರುತ್ತದೆ. ಈ ಆನೆಯು ದುಬಾರೆ ಆನೆ ಶಿಬಿರದಲ್ಲಿದ್ದು, 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿದೆ. 2015 ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸುತ್ತಿದೆ.