Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

Mysuru Dasara: ಅದ್ದೂರಿ ಜಂಬೂಸವಾರಿಗೆ ಕ್ಷಣಗಣನೆ – ನಾಳೆ ಏನೆಲ್ಲಾ ವಿಶೇಷತೆ ಇರುತ್ತೆ?

Public TV
Last updated: October 11, 2024 4:36 pm
Public TV
Share
4 Min Read
Mysuru Dasara
SHARE

– 5ನೇ ಬಾರಿಗೆ ಚಿನ್ನದಂಬಾರಿ ಹೊರಲಿದ್ದಾನೆ ಅಭಿಮನ್ಯು
– ಜಂಬೂಸವಾರಿ ಮೆರವಣಿಗೆಯಲ್ಲಿ 52 ಕಲಾತಂಡಗಳು ಭಾಗಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದಂಬಾರಿಯಲ್ಲಿ ವಿರಾಜಮಾನವಾಗಿ ಮೆರವಣಿಗೆ ಸಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ಕಾತರರಾಗಿದ್ದಾರೆ. ಜೊತೆಗೆ ಜಂಬೂಸವಾರಿ (Jamboo Savari) ಮೆರವಣಿಗೆ ಸೊಬಗನ್ನು ನೋಡಲು ದೇಶ-ವಿದೇಶದ ಪ್ರವಾಸಿಗರು ಕಾದಿದ್ದಾರೆ.

ಶನಿವಾರ ಜರುಗುವ ಅದ್ದೂರಿ ಜಂಬೂಸವಾರಿ ಮೆರವಣಿಗೆ ಹೇಗಿರುತ್ತೆ? ವಿಶೇಷತೆಗಳೇನು? ವಿಜಯದಶಮಿಯ ಪ್ರಮುಖ ದಿನದಂದು ಏನೇನು ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.. ಇದನ್ನೂ ಓದಿ: Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

Mysuru Dasara 2

ನಂದಿಧ್ವಜ ಪೂಜೆ
ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡುವುದು ಪದ್ಧತಿ. ಅದರಂತೆ ಶನಿವಾರ ಮಧ್ಯಾಹ್ನ 1:41 ರಿಂದ 2:10 ರ ವರೆಗೆ ಸಲ್ಲುವ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆ ನೆರವೇರಿಸಿ ಚಾಲನೆ ಕೊಡಲಿದ್ದಾರೆ. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಕೆ ಆಗಲಿದೆ. ಬಳಿಕ ನಂದಿಧ್ವಜವನ್ನು ಹಿಡಿದು ಕಲಾವಿದರು ಜಂಬೂಸವಾರಿ ಮೆರವಣಿಗೆ ಜೊತೆಗೆ ಸಾಗಲಿದ್ದಾರೆ. ಜಂಬೂಸವಾರಿಗೆ ಮೆರವಣಿಗೆಯಲ್ಲಿ ಮೊದಲು ಸಾಗುವುದೇ ನಂದಿಧ್ವಜ ಕಲಾತಂಡ.

ಜಂಬೂಸವಾರಿ ಮೆರವಣಿಗೆ
ನಂದಿಧ್ವಜ ಪೂಜೆ ಬಳಿಕ ಇತ್ತ ಅರಮನೆ ಒಳಗಡೆ ಚಿನ್ನದಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಶನಿವಾರ ಸಂಜೆ 4 ರಿಂದ 4:30ರ ವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಅಭಿಮನ್ಯು ಹೊರುವ 750 ಕೆಜಿ ತೂಕದ ಚಿನ್ನದಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುವುದು. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರು ಹಾಗೂ ಮೈಸೂರು ಮಹಾನಗರ ಪಾಲಿಕೆ ಮೇಯರ್‌, ಮೈಸೂರು ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ. ಅರಮನೆ ಆವರಣದಲ್ಲಿ ಗಣ್ಯರು, ಆಹ್ವಾನಿತರು, ಗೋಲ್ಡ್‌ ಕಾರ್ಡ್‌, ಟಿಕೆಟ್‌ ಇರುವವರಿಗೆ ಆಸನ ವ್ಯವಸ್ಥೆ ಇರಲಿದೆ. ಅರಮನೆಯಿಂದ ಬನ್ನಿಮಂಟಪದ ವರೆಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಲಿದೆ. ಇದನ್ನೂ ಓದಿ: ದಸರಾ ಸಂಭ್ರಮದಲ್ಲಿದ್ದ ಮೈಸೂರು ರಾಜಪರಿವಾರಕ್ಕೆ ಹೊಸ ಅತಿಥಿಯ ಆಗಮನ – 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ

MYSURU DASARA 2022 5

52 ಕಲಾತಂಡ ಭಾಗಿ
ಜಂಬೂಸವಾರಿ ಮೆರವಣಿಗೆಯಲ್ಲಿ ನಾದಸ್ವರ, ವೀರಗಾಸೆ, ಕಂಸಾಳೆ, ಕೋಲಾಟ, ತಮಟೆ ನಗಾರಿ, ಯಕ್ಷಗಾನ, ಹಲಗೆ ಮೇಳ, ಕಣಿ ವಾದನ, ಹೂವಿನ ನೃತ್ಯ, ಹೆಜ್ಜೆ ಮೇಳ, ಚಿಟ್‌ ಮೇಳ, ಡೊಳ್ಳು ಕುಣಿತ, ಕೀಲು ಕುದುರೆ, ಬೊಂಬೆಗಳ ವೇಷ ಮೊದಲಾದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 52 ಕಲಾತಂಡಗಳು ಭಾಗಿಯಾಗಲಿವೆ. ಪೊಲೀಸ್‌ ತುಕಡಿಗಳು, ಸ್ತಬ್ದಚಿತ್ರಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಮೆರವಣಿಗೆಯು 5 ಕಿಮೀ ಸಾಗಿ ಬನ್ನಿಮಂಟಪಕ್ಕೆ ತಲುಪಲಿದೆ.

ಮೆರವಣಿಗೆ ಸಾಗುವ ಮಾರ್ಗ
ದಸರಾ ಜಂಬೂಸವಾರಿ ಮೆರವಣಿಗೆಯು ಅರಮನೆಯ ಬಲರಾಮ ದ್ವಾರದಿಂದ ಹೊರಟು ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆ, ಕೆ.ಆರ್‌.ಆಸ್ಪತ್ರೆ, ಬಂಬೂಬಜಾರ್‌, ಹೈವೇ ವೃತ್ತದ ಮೂಲಕ ಸಾಗುತ್ತದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಮೆರವಣಿಗೆ ಕೊನೆಗೊಳ್ಳಲಿದೆ. ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿರುತ್ತಾರೆ. ಕಲಾತಂಡಗಳು ಹಾಗೂ ಗಜಪಡೆ, ಚಿನ್ನದಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಇದನ್ನೂ ಓದಿ: ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

mysuru dasara 2022

ಜಂಬೂಸವಾರಿ ಮೆರವಣಿಗೆ ಮುನ್ನಡೆಸುತ್ತಾನೆ ‘ಧನಂಜಯ’
ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆ ಮುನ್ನಡೆಸುವ ಜವಾಬ್ದಾರಿಯನ್ನು ಧನಂಜಯ ಆನೆ ನಿಭಾಯಿಸಲಿದೆ. ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿ ಧನಂಜಯ ಸಾಗಲಿದ್ದಾನೆ. ಕಳೆದ ವರ್ಷ ದಸರಾದಲ್ಲಿ ನಿಶಾನೆ ಆನೆಯಾಗಿ ಅರ್ಜುನ ಮೆರವಣಿಗೆ ಮುನ್ನಡೆಸಿದ್ದ. ಆದರೆ ಅರ್ಜುನನ ಅಕಾಲಿಕ ಸಾವಿನಿಂದಾಗಿ, ಆ ಜವಾಬ್ದಾರಿಯನ್ನು ಈ ಬಾರಿ ಧನಂಜಯನಿಗೆ ಹೊರಲಿಸಲಾಗಿದೆ.

5ನೇ ಬಾರಿ ಚಿನ್ನದಂಬಾರಿ ಹೊರುತ್ತಾನೆ ಅಭಿಮನ್ಯು
ನಾಳೆ ನಡೆಯಲಿರುವ ವಿಜಯದಶಮಿ ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಹಿರಣ್ಯ ಹಾಗೂ ಲಕ್ಷ್ಮಿ ಕುಮ್ಕಿ ಆನೆಗಳಾಗಿ ಸಾಥ್‌ ನೀಡಲಿವೆ. ನೌಫತ್‌ ಆನೆಯಾಗಿ ಗೋಪಿ ಸಾಗಲಿದ್ದಾನೆ. ಇದನ್ನೂ ಓದಿ: ಮೈಸೂರು ದಸರಾ – ನಾಡದೇವಿ ಚಾಮುಂಡಿಯ ಅಂಬಾರಿಯ ಇತಿಹಾಸ

panjina kavayatthu 1

ಅಭಿಮನ್ಯು ಆನೆ ಬಗ್ಗೆ ಒಂದಷ್ಟು ಮಾಹಿತಿ
ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಅಭಿಮನ್ಯುವಿನ ವಿಶೇಷ ಗುಣವೆಂದರೆ, ಕಾಡಾನೆಗಳನ್ನು ಸೆರೆ ಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಭಿಮನ್ಯು ಈವರೆಗೆ ಸುಮಾರು 140 ರಿಂದ 150 ಕಾಡಾನೆಗಳನ್ನು, 40 ರಿಂದ 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015ರ ವರೆಗೂ ನಾಡಹಬ್ಬ ಮೈಸೂರು ದಸರಾದಲ್ಲಿ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿವರ್ಹಿಸಿದ್ದಾನೆ. ಕಳೆದ 4 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊಂದಿರುವ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾನೆ ಅಭಿಮನ್ಯು. ಈ ಬಾರಿಯ ದಸರಾದಲ್ಲಿ 5ನೇ ಸಲ ಚಿನ್ನದಂಬಾರಿ ಹೊರಲು ಅಭಿಮನ್ಯು ಸಜ್ಜಾಗಿದ್ದಾನೆ.

panjina kavayatthu 2

ಪಂಜಿನ ಕವಾಯತು ಆಕರ್ಷಣೆ
ಜಂಬೂಸವಾರಿ ಪೂರ್ಣಗೊಂಡ ಬಳಿಕ ಬನ್ನಿಮಂಟಪ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದೆ. ಪಂಜಿನ ಕವಾಯತಿನಲ್ಲಿ ಬೈಕ್‌ಗಳಲ್ಲಿ ವಿವಿಧ ಸ್ಟಂಟ್‌ಗಳ ಪ್ರದರ್ಶನ ಇರಲಿದೆ. ಬೈಕ್‌ ಸ್ಟಂಟ್‌ಗಳು ಮೈ ಜುಮ್ಮೆನಿಸುವಂತಿರುತ್ತದೆ. ಬೈಕ್‌ಗಳಲ್ಲಿ ಸಿಬ್ಬಂದಿ ನಿಂತು ಪಿರಮಿಡ್‌ ಮಾದರಿಯಲ್ಲಿ ಸಾಗುತ್ತಾರೆ. ಫೈರ್‌ ಜಂಪ್‌, ಶ್ವೇತ ಅಶ್ವ ಜಂಪ್‌, ಟ್ಯೂಬ್‌ ಲೈಟ್‌ ಜಂಪ್‌, ಸರ್ಕಲ್‌ ಎಕ್ಸ್‌ಸೈಜ್‌, ಓಪನಿಂಗ್‌ ಕ್ರಾಸಿಂಗ್‌, ಪ್ಯಾರಲ್‌ ಕ್ರಾಸಿಂಗ್‌, ಗ್ರೂಪ್‌ ಈವೆಂಟ್‌ ಸೇರಿದಂತೆ ವಿವಿಧ ಕಸರತ್ತು ಪ್ರದರ್ಶನ ಇರಲಿದೆ. ಇದನ್ನೂ ಓದಿ: ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್

ಮೈ ಜುಮ್ಮೆನಿಸೋ ಸ್ಟಂಟ್‌
ಬುಲೆಟ್‌ ಮೇಲೆ ನಿಂತು, ಮಲಗಿ ಸಾಗುವುದು, ಬೈಕ್‌ ಚಲಿಸುವಾಗಲೇ ಅದರ ಸೀಟ್‌ ಮೇಲೆ ಮಲಗಿ ಈಜಾಡುವಂತೆ ಮಾಡುವುದು, ಚಲಿಸುವ ಬೈಕ್‌ ಮೇಲೆ ನಿಂತು ಸೆಲ್ಯೂಟ್‌ ಹೊಡೆಯುವುದು, ಬೈಕ್‌ ಚಲಿಸುವಾಗಲೇ ಏಣಿ ಏರುವುದು ಹೀಗೆ ಹಲವಾರು ಸ್ಟಂಟ್‌ಗಳು ಇರಲಿವೆ. ಇದರ ಜೊತೆಗೆ ವಿವಿಧ ಕಲಾತಂಡಗಳಿಂದ ನೃತ್ಯ ಪ್ರದರ್ಶನ ಕೂಡ ನಡೆಯಲಿದೆ.

TAGGED:Dasara Jamboo Savarimysurumysuru dasaraದಸರಾ ಜಂಬೂಸವಾರಿಮೈಸೂರುಮೈಸೂರು ದಸರಾ
Share This Article
Facebook Whatsapp Whatsapp Telegram

Cinema Updates

War 2 Hrithik Roshan Jr NTR
ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್
Bollywood Cinema South cinema
Ram Charan Peddi
ಪೆದ್ದಿ ಚಿತ್ರಕ್ಕಾಗಿ ದೇಹ ಹುರಿಗೊಳಿಸಿದ ರಾಮ್ ಚರಣ್ : ಮತ್ತೆ ಶೂಟಿಂಗ್ ಶುರು
Cinema Latest Top Stories
Bhargavi LLB Nandagokula Colors kannada Mahasangama Today 1
ಭಾರ್ಗವಿ LL.B, ನಂದಗೋಕುಲ ಮಹಾ ಸಂಗಮ: ಮನಮಿಡಿಯುವ ಕಥೆ
Cinema TV Shows
darshan and kapil sibal
ದರ್ಶನ್‌ ಕೇಸ್‌ – ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಗೈರು
Bengaluru City Cinema Court Karnataka Latest Sandalwood States Top Stories
Actor Darshan
ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್‌ ಅರ್ಜಿ ವಿಚಾರಣೆ ಮುಂದೂಡಿಕೆ – ಗುರುವಾರ ಜಾಮೀನು ಭವಿಷ್ಯ
Cinema Court Latest Main Post Sandalwood

You Might Also Like

MurughaShri
Chitradurga

ಮುರುಘಾಶ್ರೀ ಕೇಸ್ ವಿಚಾರಣೆ ಆ.1ಕ್ಕೆ ಮುಂದೂಡಿಕೆ

Public TV
By Public TV
3 minutes ago
Money
Bengaluru City

ತಲಾ ಆದಾಯ ಶೇ.93.6ರಷ್ಟು ಹೆಚ್ಚಳ – ದೇಶದಲ್ಲೇ ಅಗ್ರ ಸ್ಥಾನಕ್ಕೇರಿದ ಕರ್ನಾಟಕ

Public TV
By Public TV
22 minutes ago
Dharmasthala Files
Crime

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಬುಧವಾರ SITಯಿಂದ ತನಿಖೆ ಆರಂಭ

Public TV
By Public TV
47 minutes ago
Biklu Shiva Murder Case Kolar Supari Killers arrest
Bengaluru City

ಬಿಕ್ಲು ಶಿವ ಮರ್ಡರ್ ಕೇಸ್ – ಕೋಲಾರ ಮೂಲದ ನಾಲ್ವರು ಸುಪಾರಿ ಕಿಲ್ಲರ್ಸ್ ಅರೆಸ್ಟ್

Public TV
By Public TV
55 minutes ago
donald trump 1
Latest

ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ

Public TV
By Public TV
1 hour ago
Biklu Shiva Murder Case A1 Jagga
Bengaluru City

ಬಿಕ್ಲು ಶಿವ ಕೊಲೆ ಕೇಸ್‌ನ ಪ್ರಮುಖ ಆರೋಪಿ ಎಸ್ಕೇಪ್ – ಲುಕೌಟ್ ನೋಟಿಸ್‌ಗೆ ಸಿದ್ಧತೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?