ಮೈಸೂರು: 414 ನೇ ನಾಡಹಬ್ಬ ದಸರಾ (Mysuru Dasara 2023) ಮೆರವಣಿಗೆ ಇಂದು ವೈಭವಯುತವಾಗಿ ನಡೆಯಲಿದೆ. ಇದಕ್ಕಾಗಿ ಇಡೀ ಮೈಸೂರು ಸಜ್ಜಾಗಿದೆ. ಇಡೀ ನಾಡಿನ ದೃಷ್ಟಿ ಇವತ್ತು ಮೈಸೂರಿನ ಮೇಲಿದೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮೆರವಣಿಗೆಗೆ ಕೆಲ ಗಂಟೆಗಳು ಬಾಕಿ ಉಳಿದಿದೆ. 414ನೇ ನಾಡಹಬ್ಬ ದಸರಾ ಮೆರವಣಿಗೆ ಇಂದು ವೈಭವಯುತವಾಗಿ ನಡೆಯಲಿದೆ. ಇದಕ್ಕಾಗಿ ಇಡೀ ಮೈಸೂರು ಸಜ್ಜಾಗಿದೆ. ಇಡೀ ನಾಡಿನ ದೃಷ್ಟಿ ಇವತ್ತು ಮೈಸೂರಿನ ಮೇಲಿದೆ. ಜಂಬೂಸವಾರಿ (Jambu Savari) ಕಣ್ತುಂಬಿಕೊಳ್ಳಲು ಕರುನಾಡು ಕಾತರದಿಂದ ಕಾಯ್ತಿದೆ. ಇದನ್ನೂ ಓದಿ: ಸಿಡಿಮದ್ದು ತಾಲೀಮು ವೇಳೆ ಅವಘಡ- ವ್ಯಕ್ತಿ ಆಸ್ಪತ್ರೆಗೆ ದಾಖಲು
Advertisement
Advertisement
ಐತಿಹಾಸಿಕ `ದಸರಾ’: ದಸರಾ ಮೆರವಣಿಗೆ ಆರಂಭಕ್ಕೂ ಮುನ್ನ ಮೈಸೂರಿನ ಅರಮನೆಯಲ್ಲಿ (Mysuru Darasa) ಖಾಸಗಿ ದರ್ಬಾರ್ ಭಾಗವಾಗಿ ವಿಜಯಯಾತ್ರೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಅರಮನೆಯ ಕಲ್ಯಾಣ ಮಂಟಪದ ಮುಂಭಾಗ ಜಟ್ಟಿ ಸಮುದಾಯದವರು ಜಟ್ಟಿ ಕಾಳಗ ನಡೆಸಿ ಮಹಾರಾಜರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲಿದ್ದಾರೆ. ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ನಡೆಯರ್ ವಿಜಯಾ ಯಾತ್ರೆ ನಡೆಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1.46ರಿಂದ 2.08ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜದ ಪೂಜೆ ನೆರವೇರಲಿದೆ. ನಂತರ ನಾಡಿನ ಕಲೆ ಸಂಸ್ಕೃತಿ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳು, ಕಲಾತಂಡಗಳ ಅದ್ದೂರಿ ಮೆರವಣಿಗೆ ಆರಂಭವಾಗಲಿದೆ. ಸಂಜೆ 4.40ರಿಂದ 5 ಗಂಟೆಯವರೆಗೆ ಸಲ್ಲುವ ಶುಭ ಮೀನ ಮಹೂರ್ತದಲ್ಲಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ.
Advertisement
Advertisement
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡಿ ಮೂರ್ತಿಯನ್ನು ಹೊತ್ತ ಅಭಿಮನ್ಯು ಆನೆ ರಾಜಬೀದಿಯಲ್ಲಿ ಸಾಗಲಿದೆ. ಕ್ಯಾಪ್ಟನ್ ಅಭಿಮನ್ಯುಗೆ 14 ಆನೆಗಳು ಸಾಥ್ ನೀಡಲಿವೆ. ಈ ಕ್ಷಣಕ್ಕೆ ಅಂದಾಜು 5 ಲಕ್ಷಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಲಿದ್ದಾರೆ.
ದಸರಾಗೆ ಖಾಕಿ ಕಣ್ಗಾವಲು ದೊಡ್ಡ ಮಟ್ಟದಲ್ಲಿ ಇದೆ. ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಜನ ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಬಂದಿದ್ದು ಸುರಕ್ಷಿತವಾಗಿ ದಸರಾ ನಡೆಸಲು ಪೊಲೀಸರ ಸಕಲ ರೀತಿಯಲ್ಲೂ ಸಿದ್ಧರಾಗಿದ್ದಾರೆ.
Web Stories