ಮೈಸೂರು: ನಾಡಹಬ್ಬ ದಸರಾ (Mysuru Dasara 2022) ಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದ ಅಂಬಾರಿಯಲ್ಲಿ ಕೂರುವ ತಾಯಿ ಚಾಮುಂಡಿ (Chamundi) ಯ ಉತ್ಸವ ಮೂರ್ತಿ ನೋಡಲು ಕೋಟ್ಯಂತರ ಜನ ಕಾಯುತ್ತಿದ್ದಾರೆ. ದಸರಾದ ಪ್ರಮುಖ ಆಕರ್ಷಣೆಯಾದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯ ಸ್ವಚ್ಛತಾ ಕಾರ್ಯ ಚಾಮುಂಡಿ ಬೆಟ್ಟದಲ್ಲಿ ಶುರುವಾಗಿದೆ.
Advertisement
ದಸರಾ ಮುಗಿದ ಮೇಲೆ ಈ ಉತ್ಸವ ಮೂರ್ತಿ ಅರಮನೆ (Mysuru palace) ಮಂಡಳಿಯ ಖಜಾನೆಯಲ್ಲಿ ಇರುತ್ತದೆ. ದಸರೆಗೆ ಎರಡು ದಿನ ಮುಂಚಿತವಾಗಿ ಚಾಮುಂಡಿ ಬೆಟ್ಟಕ್ಕೆ ಉತ್ಸವ ಮೂರ್ತಿ ತಂದು ಸ್ವಚ್ಛತಾ ಕಾರ್ಯ ನೆರವೇರಿಸಿ ಪೂಜೆ ಆರಂಭಿಸಲಾಗುತ್ತದೆ. ನವರಾತ್ರಿಯ 9 ದಿನವೂ ಈ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ.
Advertisement
Advertisement
ನಾಳೆ (ಸೋಮವಾರ) ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ (Droupadi Murmu) ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯ್ಲಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಚಿವ ಎಸ್.ಟಿ.ಸೋಮಶೇಖರ್ (S.T Somashekhar) ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ಭೇಟಿ ನೀಡಿ ಸಿದ್ಧತೆ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ನಾಳೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿನ ಪೂಜಾ ಕೈಂಕರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
Advertisement
ಚಾಮುಂಡಿ ಬೆಟ್ಟದಲ್ಲಿ ಬೃಹತ್ ವೇದಿಕೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ವೇದಿಕೆ ಇರಲಿದೆ. ವೇದಿಕೆ ಹಿಂಭಾಗದಲ್ಲಿ ಎಲ್‍ಇಡಿ ಪರದೆ ಇರಲಿದೆ. ವೇದಿಕೆಯಲ್ಲಿ ರಾಷ್ಟ್ರಪತಿ (President), ರಾಜ್ಯಪಾಲರು (Governor), ಸಿಎಂ (Chief Minister), ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೇಂದ್ರ 6 ಸಚಿವರು ಸೇರಿದಂತೆ 13 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಕೊರೋನಾ ಬಳಿಕ ಅದ್ದೂರಿ ದಸರಾ- ವಿದ್ಯುತ್ ದೀಪಾಲಂಕಾರದ ಬೆಳಕಲ್ಲಿ ಸಾಗಲಿದೆ ಅಂಬಾರಿ
ಸಾರ್ವಜನಿಕರಿಗೂ ದಸರಾ ಉದ್ಘಾಟನೆ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ತಾವರೆಕಟ್ಟೆ ಬಳಿ ಪೊಲೀಸರಿಂದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಬೆಟ್ಟಕ್ಕೆ ಹೋಗುವ ಪ್ರತಿಯೊಂದು ವಾಹನಗಳನ್ನು 20 ಕ್ಕೂ ಹೆಚ್ಚು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.