ಮೈಸೂರು: 2018 ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಯ ಹಿಂದಿನ ದಿನವಾದ ಗುರುವಾರ ರಾತ್ರಿ ದರ್ಗಾದಲ್ಲಿ ಗಜಪಡೆಗೆ ಪೂಜೆ ನಡೆಯಿತು. ಇದನ್ನೂ ಓದಿ: ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?
Advertisement
ಕೆವಿ ರಸ್ತೆಯಲ್ಲಿರುವ ಹಿಮಾಂಶ ವಾಲಿ ದರ್ಗಾದಲ್ಲಿ ಅರ್ಜುನ ಸೇರಿದಂತೆ 12 ಆನೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು. ದುಷ್ಟ ಶಕ್ತಿಯ ನಿವಾರಣೆಗಾಗಿ ಪೂಜೆ ಮಾಡಲಾಗಿದ್ದು, ಜಂಬೂಸವಾರಿಗೆ ಸಜ್ಜಾದ ಗಜಪಡೆಗಳಿಗೆ ಧರ್ಮ ಗುರು ನಕೀಬ್ ಅವರು ಆಶೀರ್ವಾದ ಮಾಡಿದ್ರು. ಅಲ್ಲದೇ ದಸರಾ ಗಜಪಡೆಗೆ ಎರಡನೇ ಬಾರಿ ತೂಕ ಪರೀಕ್ಷೆ ಮಾಡಲಾಯ್ತು. ಇದನ್ನೂ ಓದಿ: ಸೌಹಾರ್ದದ ಮೈಸೂರು ಜಂಬೂಸವಾರಿ – ಆನೆಗೆ ಅಂಬಾರಿ ಕಟ್ತಾರೆ ಮುಸ್ಲಿಮರು!
Advertisement
Advertisement
45 ದಿನಗಳಲ್ಲಿ ಹೊಸ ಆನೆ ಧನಂಜಯ ಬರೋಬ್ಬರಿ 530 ಕೆಜಿ ತೂಕ ಏರಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಧನಂಜಯ ಆನೆ ದಸರಾದಲ್ಲಿ ಭಾಗಿಯಾಗಲಿದ್ದಾನೆ. ಇನ್ನು ತೂಕ ಹೆಚ್ಚಿಸಿಕೊಂಡ ಆನೆಗಳ ಪೈಕಿ 2ನೇ ಸ್ಥಾನದಲ್ಲಿ 480 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಬಲರಾಮ ಆನೆ ಇದ್ದು, ಕೇವಲ 460 ಕೆಜಿ ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅರ್ಜುನ ಆನೆ ಮೂರನೇ ಸ್ಥಾನದಲ್ಲಿದೆ.ಇದನ್ನೂ ಓದಿ: ಚಿನ್ನದ ಅಂಬಾರಿ ಮೈಸೂರಿಗೆ ಬಂದಿದ್ದು ಹೇಗೆ? `ಮೈಸೂರು ದಸರಾ’ವಾಗಿ ವಿಶ್ವವಿಖ್ಯಾತಿ ಪಡೆದ ಕಥೆ ಓದಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಇದನ್ನೂ ಓದಿ: ಗಜಪಡೆಯ ತಾಲೀಮು ಹಾದಿಯಲ್ಲಿ ಮ್ಯಾಗ್ನೆಟಿಕ್ ರೋಲರ್ ಬಳಕೆ- ಯಾಕೆ?