ಮೈಸೂರು: ಮಹಾಮಾರಿ ಕೊರೊನಾ ವೈರಸ್‍ಗೆ ಈಡೀ ವಿಶ್ವವೇ ಬೆಚ್ಚಿಬಿದ್ದಿದೆ. ಅದರಲ್ಲೂ ಭಾರತದಲ್ಲಿ ಕೊರೊನಾ ಬಲಿ ಪಡೆದ ಪ್ರಕರಣ ಕರ್ನಾಟಕದ ಕಲಬುರಗಿಯಲ್ಲಿ ನಡೆದಿದ್ದರಿಂದ ರಾಜ್ಯದ ಜನರು ಆತಂಕಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಮೈಸೂರು ನಗರದಲ್ಲಿ ಜೋಡಿಯೊಂದು ಸರ್ಕಾರಕ್ಕೆ ಟಾಂಗ್ ಕೊಡುವ ರೀತಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ.
ಕೊರೊನಾ ವೈರಸ್‍ನಿಂದಾಗಿ ಜನರು ಮಾಸ್ಕ್ ಧರಿಸುತ್ತಿದ್ದಾರೆ. ಜೊತೆಗೆ ಸರ್ಕಾರವು ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆ ತಿಳಿಸಿದ್ದು, ಕೈ ಕುಲುಕಬೇಡಿ, ಒಬ್ಬರಿಂದ ಒಬ್ಬರು ಆರು ಅಡಿ ದೂರವಿರಿ ಎಂದು ಆದೇಶಿಸಿದೆ. ಈ ಮಧ್ಯೆ ಮೈಸೂರಿನ ಜೋಡಿಯೊಂದು ಅಣಕಿಸುವ ರೀತಿಯಲ್ಲಿ ಮಾಸ್ಕ್ ಧರಿಸಿ, ಕೈ ಕೈ ಹಿಡಿದು ಅತಿ ಸಮೀಪದಲ್ಲಿಯೇ ನಿಂತು ಮೈಸೂರಿನ ಹಲವೆಡೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
Advertisement
Advertisement
ಮೈಸೂರಿನ ಜೋಡಿ ಅರಮನೆ ಮುಂದೆ ನಿಂತು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೋಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Advertisement
ಕೊರೊನಾ ವೈರಸ್ ಎಫೆಕ್ಟ್ ನೇರವಾಗಿ ಮೈಸೂರು ಪ್ರವಾಸೋದ್ಯಮದ ಮೇಲೆ ಬಿದ್ದಿದೆ. ಹೋಟೆಲ್, ಲಾಡ್ಜಿಂಗ್‍ನಲ್ಲಿ ಬರೋಬ್ಬರಿ 50 ಕೋಟಿ ರೂ. ನಷ್ಟು ವಹಿವಾಟು ಸ್ಥಗಿತವಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಶೇ.85 ರಷ್ಟು ಕುಸಿತ ಕಂಡಿದ್ದು, ಹೋಟೆಲ್ ಬುಕ್ಕಿಂಗ್‍ಗಳು ಕ್ಯಾನ್ಸಲ್ ಆಗಿವೆ. ಅದರಲ್ಲೂ ಕೇರಳದ ಪ್ರವಾಸಿಗರು ಶೇಕಡ ಒಂದರಷ್ಟು ಕೂಡ ಮೈಸೂರಿಗೆ ಬರುತ್ತಿಲ್ಲ. ಇದರಿಂದ ಮೈಸೂರಿನ ಹೋಟೆಲ್‍ಗಳು, ಲಾಡ್ಜ್ ಗಳು ಖಾಲಿ ಹೊಡೆಯುತ್ತಿವೆ.