– ಇದರ ತಯಾರು ಹೇಗೆ..?
– ರೋಗಿಗಳಿಗೆ ಹೇಗೆ ನೀಡಲಾಗುತ್ತಿದೆ..?
ಮೈಸೂರು: ಜಗತ್ತಿನಾದ್ಯಂತ ಆತಂಕ ಹುಟ್ಟಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್ ಕಿಲ್ ಮಾಡೋಕೆ ಇದೀಗ ಕರ್ನಾಟಕದಲ್ಲಿ ಬ್ರಹ್ಮಾಸ್ತ್ರವೊಂದು ರೆಡಿಯಾಗಿದೆ.
Advertisement
ಹೌದು. ಕೊರೊನಾ ವೈರಸ್ ಒದ್ದೋಡಿಸಲು ಈಗಾಗಲೇ ರಾಜ್ಯದಲ್ಲಿ ಮೂರು ರಾಮಬಾಣ ರೆಡಿಯಾಗಿದೆ. ಈ ಮೂರು ಜೀವಾಮೃತದಿಂದಾಗಿ ರಾಜ್ಯದಲ್ಲಿ ಕೊರೊನಾ ರೋಗಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಗುಣಮುಖರಾಗುತ್ತಿದ್ದಾರೆ.
Advertisement
Advertisement
1. ಚಿಕ್ಕಿ ಚಮತ್ಕಾರ:
ಸಮುದ್ರದ ಪಾಚಿಯಿಂದ ಮಾಡುವ ಈ ಚಿಕ್ಕಿ ಕೊರೊನಾ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಸ್ಟೈರೊಲಿನ್ ಚಿಕ್ಕಿಯಲ್ಲಿ ವಿಟಮಿನ್ ಸಿ ಕಂಟೆಂಟ್ ಹೆಚ್ಚಿದೆ. ಇದು ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ. ಇದನ್ನು ಸಂಜೆಯ ಸ್ನಾಕ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ. ಕೇವಲ ರೋಗ ನಿರೋಧಕ ಶಕ್ತಿ ಮಾತ್ರವಲ್ಲ ಇಂದು ಉಸಿರಾಟದ ತೊಂದರೆಯನ್ನು ಕೂಡ ನಿವಾರಿಸುವ ವಿಶೇಷ ಶಕ್ತಿಯೂ ಇದ್ರಲ್ಲಿದೆಯಂತೆ.
Advertisement
ಗರ್ಭಿಣಿ, ಮಕ್ಕಳಿಗೆ ಹಾಗೂ ವಯಸ್ಸಾದ ಕೋವಿಡ್ ರೋಗಿಗಳಿಗೆ ಇದನ್ನು ಹೆಚ್ಚು ನೀಡಲಾಗುತ್ತದೆ. ಯಾಕೆಂದರೆ ಇದು ಅನಿಮೀಯಾದಂತಹ ತೊಂದರೆಯನ್ನು ನಿವಾಳಿಸುತ್ತಂತೆ. ಅಧಿಕ ರಕ್ತದ ಒತ್ತಡಕ್ಕೂ ಈ ಚಿಕ್ಕಿ ರಾಮಬಾಣವಾಗಿದೆ. ಅಲ್ಲದೆ ವೈರಸನ್ನು ದೇಹದಲ್ಲಿ ವ್ಯಾಪಕವಾಗಿ ಬೆಳೆಯದಂತೆ ತಡೆಗಟ್ಟುವ ಶಕ್ತಿ ಇದಕ್ಕಿದೆ.
ದೇಹದಲ್ಲಿ ಶಕ್ತಿ ತುಂಬುವ ಇದು ಅರಶಿನದ ಗುಣವನ್ನು ಕೂಡ ಹೊಂದಿದೆ. ಕ್ಯಾನ್ಸರ್ ರೋಗಿಗಳ ರೋಗನಿರೋಧಕಕ್ಕೂ ಇದನ್ನು ಬಳಕೆ ಮಾಡ್ತಾರಂತೆ. ಇದು ಕೋವಿಡ್ ರೋಗಿಗಳ ಶೀಘ್ರ ಚೇತರಿಕೆಗೆ ಕಾರಣವಾಗುತ್ತಿದೆ.
2. ಮಿಕ್ಸ್ ಪ್ರೂಟ್ ಹಲ್ವಾ
ಹಲ್ವದಂತಿರುವ ಮಿಕ್ಸ್ ಪ್ರೂಟ್ಸ್ ನ್ನು ಸಿಎಫ್ಟಿಆರ್ ಐ ಸಪ್ಲೈ ಮಾಡುತ್ತಿದೆ. ಇದು ಕೂಡ ಸಂಜೆಯ ಸ್ನಾಕ್ನ್ಸ್ ಜೊತೆಗೆ ಕೊಡಲಾಗುತ್ತಿದೆ.
3. ಪ್ರೊಟೀನ್ ಬಿಸ್ಕೆಟ್
ಮೊಟ್ಟೆ ತಿನ್ನದವರಿಗೆ ಹೈ ಪ್ರೊಟೀನ್ ಇರುವ ಬಿಸ್ಕೆಟ್ ಕೂಡ ರವಾನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಮೈಸೂರಿನ ಸಿಎಫ್ಟಿಆರ್ ಇಂತಹದೊಂದು ಕಡಲೆ ಮಿಠಾಯಿ(ಚಿಕ್ಕಿ) ಸಂಶೋಧಿಸಿ ಕೊರೊನಾ ಪಾಸಿಟಿವ್ ನವರಿಗೆ ಶಕ್ತಿ ವರ್ಧಕವಾಗಿ ನೀಡಿದೆ. ಸಮುದ್ರ ಪಾಚಿ ಬಳಸಿಕೊಂಡು ತಯಾರಿಸಿದ ಪಾಚಿ ಕಡಲೆಮಿಠಾಯಿ ಇದಾಗಿದೆ. ದೇಹದ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ. ಸಿಎಫ್ಟಿಆರೈ ಮೂಲಕ ಅಗತ್ಯ ಇರುವ ಕಡೆ ವಿತರಣೆಯಾಗಿದ್ದು, ಈಗಾಗಲೇ ಮೈಸೂರು, ಬೆಂಗಳೂರು, ಮಂಡ್ಯದಲ್ಲಿನ ಕೊರೊನಾ ಪಾಸಿಟಿವ್ ರೋಗಿಗಳಿಗೆ ನೀಡಲಾಗಿದೆ.
ಇದು ರೋಗಿಗಳು ಗುಣಮುಖರಾಗಲು ಬಹು ಸಹಾಯವಾದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಯೂ ಈ ಪಾಚಿ ಕಡ್ಲೇ ಚಿಕ್ಕಿಗೆ ಬೇಡಿಕೆ ಇಟ್ಟಿದೆ. ಸಿಎಫ್ಟಿಆರ್ ಬಂದ್ ಹಿನ್ನೆಲೆಯಲ್ಲಿ ಸರ್ಟಿಪೈಡ್ ಫ್ಯಾಕ್ಟರಿಯಲ್ಲಿ ಇದನ್ನು ಉತ್ಪಾದಿಸಲಾಗುತ್ತಿದೆ. ಸಮುದ್ರಪಾಚಿ ಉತ್ಪಾದನೆ ಮಾಡಿ ನಂತರ ಕಡಲೆ ಮಿಠಾಯಿಗೆ ಮಿಶ್ರಣ ಮಾಡಲಾಗುತ್ತದೆ. ಈಗಾಗಲೇ 1.7 ಟನ್ ಕಡ್ಲೆ ಚಿಕ್ಕಿ ತಯಾರಾಗಿದೆ. ಒಂದು ಪೀಸ್ ಪಾಚಿ ಕಡಲೆ ಮಿಠಾಯಿಂದ ಶೇ.15 ನ್ಯೂಟ್ರಿಷಿಯನ್ ಸಿಗುತ್ತೆ ಎಂದು ಕೊರೊನಾ ಸಿಹಿ ತಿನಿಸು ತಯಾರಕ ಕೃಷ್ಣಭಟ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.