ಬೆಳೆದ ತರಕಾರಿಯನ್ನು ಜಾನುವಾರುಗಳಿಗೆ ತಿನ್ನಿಸಿದ ರೈತ

Public TV
1 Min Read
MYS 10

– ಮೈಸೂರಿನ ಜನಕ್ಕೆ ಬುದ್ದಿಯೆ ಬರಲ್ವಾ?

ಮೈಸೂರು: ಕೊರೊನಾ ವೈರಸ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರು, ಬೆಳೆದ ಬೆಳೆಯನ್ನು ಜಾನುವಾರುಗಳಿಗೆ ತಿನ್ನಿಸಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಟಾವಿಗೆ ಬಂದಿದ್ದ ಹೂಕೋಸು ಸೇರಿದಂತೆ ಎಲ್ಲಾ ತರಕಾರಿಯನ್ನು ಕುರಿ, ಆಡುಗಳಿಗೆ ತಿನ್ನಿಸಿದ್ದಾರೆ. ಕೂಲಿಗೆ ಆಳು ಬರುತ್ತಿಲ್ಲ, ಸಾಗಿಸಲು ವಾಹನ ಇಲ್ಲ. ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲ. ಈ ಎಲ್ಲಾ ಕಾರಣಗಳಿಂದ ಕಂಗಾಲಾಗಿರುವ ರೈತರು. ಈ ರೀತಿ ಜಾನುವಾರುಗಳಿಗೆ ತಿನ್ನಿಸಿದ್ದಾರೆ.

MYS 2 3

ಇತ್ತ ನಗರದ ಎಂ.ಜಿ ರಸ್ತೆಯ ಮಾರುಕಟ್ಟೆಯ ಜನಜಂಗುಳಿ ತಗ್ಗಿಸಲು ಮುಂದಾದ ಜಿಲ್ಲಾಡಳಿತ, ಹೊಸದಾಗಿ ಮತ್ತೆ 6 ಮಾರುಕಟ್ಟೆಗಳನ್ನು ತೆರೆದಿದೆ. ಜಿಲ್ಲಾಡಳಿತ ಬಡಾವಣೆವಾರು ಮಾರುಕಟ್ಟೆ ಆರಂಭ ಮಾಡಿದೆ. ದಸರಾ ವಸ್ತು ಪ್ರದರ್ಶನ ಆವರಣ, ಲಲಿತ್ ಮಹಲ್ ಮುಂಭಾಗದ ಮೈದಾನ, ಶ್ರೀರಾಂಪುರ ಬಿಇಎಂಎಲ್ ಕೊನೆ ಬಸ್ ನಿಲ್ದಾಣದ ಬಳಿಯ ಮೈದಾನ, ದೇವನೂರು 1ನೇ ಹಂತದ ಮೈದಾನ, ಚಾಮುಂಡಿ ವಿಹಾರ ಕ್ರೀಡಾಂಗಣ, ವಿಜಯನಗರದ ಎರಡನೇ ಹಂತದ ಮಾರುಕಟ್ಟೆ, ಬನ್ನಿಮಂಟಪದ ಮೈದಾನದಲ್ಲಿ ಮಾರುಕಟ್ಟೆ ಆರಂಭ ಮಾಡಿದೆ. ಬಡಾವಣೆವಾರು ಮಾರುಕಟ್ಟೆ ಗಳು ಆರಂಭವಾದರೂ ಎಂಜಿ ರಸ್ತೆಯ ಮಾರುಕಟ್ಟೆಯಲ್ಲಿ ಮಾತ್ರ ಜನಜಂಗುಳಿ ಕಡಮೆ ಆಗಿಲ್ಲ. ಇಂದು ಕೂಡ ಹೆಚ್ಚಿನ ಜನ ಸೋಷಿಯಲ್ ಡಿಸ್ಟೆನ್ಸ್ ಇಲ್ಲದೆ ತರಕಾರಿ ಖರೀದಿ ಮಾಡಿದ್ದಾರೆ.

MYS 1 4

Share This Article
Leave a Comment

Leave a Reply

Your email address will not be published. Required fields are marked *