– ಇನ್ನೂ 233 ಮಂದಿಯ ಪರೀಕ್ಷೆ ಬಾಕಿ
ಮೈಸೂರು: ನಂಜನಗೂಡು ಜುಬಿಲೆಂಟ್ಸ್ ಕಾರ್ಖಾನೆ ಕೊರೊನಾ ಪ್ರಕರಣದ ವಿಚಾರವಾಗಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಆತಂಕಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕಿತರ ಜೊತೆ ಸಂಪರ್ಕ ಹೊಂದಿದ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ಸದ್ಯ ಪ್ರೈಮರಿ ಸಂಪರ್ಕ ಹೊಂದಿದ 223 ಜನರ ಸ್ಯಾಂಪಲ್ ಪರೀಕ್ಷೆ ನಡೆಯಬೇಕಿದೆ. ಹೀಗಾಗಿ ಕೊರೊನಾ ಪೀಡಿತರ ಸಂಪರ್ಕ ಮಾಡಿದವರ ಸಂಖ್ಯೆ 100 ಆಗಬಹುದು, ಸಾವಿರವೂ ಆಗಬಹುದು ಎಂದು ಹೇಳುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಂಜನಗೂಡಿನ ಕೊರೊನಾ ಸೋಂಕಿತ ವ್ಯಕ್ತಿಗಳ ಜೊತೆ ಪ್ರೈಮರಿ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಹುಡುಕಾಟ ಕೂಡ ಮುಂದುವರಿದಿದೆ. ಎಲ್ಲ ಸ್ಯಾಂಪಲ್ ಪರೀಕ್ಷೆಗೆ 12 ದಿನ ಕಳೆಯಬೇಕು. ಇಲ್ಲವಾದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ. 12 ದಿನ ಕಳೆದ ಮೇಲೆಯೇ ಸೋಂಕಿನ ನಿಖರ ಮಾಹಿತಿ ತಿಳಿಯೋದು. ನಂಜನಗೂಡು ಪ್ರಕರಣದ ಇನ್ನು ನೂರಾರು ಸ್ಯಾಂಪಲ್ ಪರೀಕ್ಷೆ ಮಾಡಬೇಕಿದೆ. ಎಲ್ಲರ ವರದಿ ಬಂದ ನಂತರ ಮಾಹಿತಿ ನೀಡುತ್ತೇವೆ ಎಂದು ಡಿಸಿ ತಿಳಿಸಿದ್ದಾರೆ.
Advertisement
Advertisement
ನಂಜನಗೂಡಿನ ಹತ್ತಿರ ಇರುವ ಜುಬಿಲೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಕಂಡುಬಂದಿತ್ತು. ಆದರೆ ಇದಾದ ನಂತರ ಇದೇ ಕಾರ್ಖಾನೆಯ ಹಲವರಿಗೆ ಈ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಗುರುವಾರ ತಾನೇ ನಂಜನಗೂಡಿನಿಂದ ಬಳ್ಳಾರಿಗೆ ಬಂದಿದ್ದ 14 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದಿತ್ತು.