ಮೈಸೂರು: ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಬಳಿ ಸಾಮಾಜಿಕ ಕಾರ್ಯಕರ್ತರೊಬ್ಬರ ಮೇಲೆ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ
ಮೈಸೂರಿನ ಸುಬ್ಬರಾಯನ ಕೆರೆ ಬಳಿ ಸರ್ಕಾರೇತರ ಸಂಸ್ಥೆಯಿಂದ ‘ನೋ ಜಾಬ್ ನೋ ವೋಟ್’ ಅಭಿಯಾನ ನಡೆಯುತ್ತಿತ್ತು. ಈ ಮೂಲಕ ಸಿಎಂ ಅವರಿಗೆ ಪ್ರತಿಭಟನಾಕಾರರು ವರುಣಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದರು.
Advertisement
Advertisement
ಈ ಸಂದರ್ಭದಲ್ಲಿ ಚಂದ್ರ ಮಿಶ್ರಾ ಎಂಬವರು ಸಿಎಂ ಭಾವಚಿತ್ರ ಹಾಕಿಕೊಂಡು ಪ್ರತಿಭಟನೆಗೆ ಸಜ್ಜಾಗಿದ್ದರು. ಈ ವೇಳೆ ವಾರ್ಡ್ ನಂಬರ್ 36 ಪಾಲಿಕೆ ಸದಸ್ಯ ಪ್ರಶಾಂತ್‍ಗೌಡ ಈ ಪ್ರತಿಭಟನೆಗೆ ತಕಾರರು ತೆಗೆದು ಹೋರಾಟಗಾರ ಚಂದ್ರ ಮಿಶ್ರಾ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ.
Advertisement
ಈ ಬಗ್ಗೆ ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ಚಂದ್ರ ಮಿಶ್ರಾ ಅವರು ಪ್ರಶಾಂತ್ ಗೌಡರ ವಿರುದ್ಧ ದೂರು ದಾಖಲಿಸಿದ್ದಾರೆ. ಹೋರಾಟಗಾರನ ಮೇಲೆ ಹಲ್ಲೆ ಆರೋಪವನ್ನು ನಗರಪಾಲಿಕೆ ಸದಸ್ಯ ಪ್ರಶಾಂತಗೌಡ ನಿರಾಕರಿಸಿದ್ದಾರೆ. ಅನುಮತಿ ಪಡೆಯದೆ ನನ್ನ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿತ್ತು. ಈ ವೇಳೆ ಪಾಲಿಕೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದರು. ಫ್ಲೆಕ್ಸ್ ತೆರವುಗೊಳಿಸಲು ಪ್ರತಿಭಟನಾ ನಿರತರಿಂದ ವಿರೋಧ ವ್ಯಕ್ತವಾಯಿತು. ಈ ವೇಳೆ ನಾನು ವಿಚಾರಿಸಲು ಹೋಗಿದ್ದೆ. ಈ ವೇಳೆ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ ಚಂದ್ರ ಮಿಶ್ರ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ಸಾರ್ವಜನಿಕರೇ ಚಂದ್ರ ಮಿಶ್ರರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ವೇಳೆ ಹಲ್ಲೆ ನಡೆದಿರಬಹುದು ಎಂದು ಹೇಳಿದ್ದಾರೆ.
Advertisement
https://www.youtube.com/watch?v=7akX9PABrmk