ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಬೈಕ್ ಸ್ಟಂಟ್ ಪ್ರೇಕ್ಷಕರಿಗೆ ಫುಲ್ ಕಿಕ್ ನೀಡಿದೆ.
ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ 9ನೇ ವರ್ಷದ ತತ್ವಮ್ ಫೆಸ್ಟ್‍ನಲ್ಲಿ ಬೈಕ್ ಹಾಗೂ ಕಾರುಗಳ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ 15 ಸೂಪರ್ ಬೈಕ್‍ಗಳು, 15 ವಿನ್ಟೇಜ್ ಕಾರುಗಳನ್ನು ಪ್ರದರ್ಶನ ಮಾಡಲಾಯಿತು. ನಂತರ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಬೈಕ್ ಸ್ಟಂಟ್ ಮಾಡಿಸಲಾಯಿತು.
ಈ ವೇಳೆಯಲ್ಲಿ ಬಿಂದಾಸ್ ಬೈಕ್ ರೈಡ್‍ನಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಾಡಿದ ಬೈಕ್ ಸ್ಟಂಟ್ ಗೆ ಪ್ರೇಕ್ಷಕರು ಫುಲ್ ಫಿದಾ ಆದರು. ನೋಡುಗರಿಗೆ ಮೈ ಜುಮ್ ಅನ್ನುವಂತೆ ವಿದ್ಯಾರ್ಥಿಗಳು ರಸದೌತಣ ನೀಡಿದರು.
ಯುವಕರಿಗಿಂತ ನಾನೇನೂ ಕಡಿಮೆ ಇಲ್ಲವೆಂಬಂತೆ ಯುವತಿಯೂ ಕೂಡ ಬಿಂದಾಸ್ ಹಾಗೆ ಬೈಕ್ ಸ್ಟಂಟ್ ಮಾಡಿದರು. ಇವರು ಬೈಕ್ ಹೋಡೆಯೋ ಸ್ಟೈಲ್ ನೆರೆದಿದ್ದವರಿಗೆ ಬಾಯಿಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿತು. ಅಲ್ಲಿ ಇದ್ದಂತಹ ಜನರು ವಿದ್ಯಾರ್ಥಿಗಳು ದೊಡ್ಡವರು ಚಿಕ್ಕವರೆನ್ನದೆ ಈ ಯುವತಿಯ ಬೈಕ್ ರೈಡಿಂಗ್ ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಬೈಕ್ ಸ್ವಂಟ್ ಜೊತೆ ವಿನ್ಟೇಜ್ ಕಾರುಗಳ ಪ್ರದರ್ಶನವೂ ಕೂಡ ನೋಡುಗರ ಮನಸೂರೆಗೊಳಿಸಿತು.