ಮೈಸೂರು: ಮಹಾನಗರ ಪಾಲಿಕೆ ಎರಡನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಸರಕಾರ ಮೀಸಲಾತಿ ನಿಗದಿಪಡಿಸಿದ ಬೆನ್ನಲ್ಲೇ ಮೈಸೂರು ಪಾಲಿಕೆಯಲ್ಲಿ ರಾಜಕಾರಣ ಬಿರುಸು ಪಡೆದಿದೆ.
ಮೇಯರ್ ಸ್ಥಾನ ಬಿಸಿಎಂ (ಎ-ಮಹಿಳೆ) ಹಾಗೂ ಉಪಮೇಯರ್ ಸ್ಥಾನ ಎಸ್‍ಸಿ ಗೆ ಮೀಸಲಾಗಿದೆ. ಮೈಸೂರು ಪಾಲಿಕೆಯಲ್ಲಿ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧಿಕಾರದಲ್ಲಿದೆ. ಮೊದಲ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಪುಷ್ಪ ಅಮರನಾಥ್ ಮೇಯರ್ ಆಗಿದ್ದರು. ಜೆಡಿಎಸ್‍ನ ಷಫಿ ಮಹಮದ್ ಉಪಮೇಯರ್ ಆಗಿದ್ದರು. ಈ ಬಾರಿ ಇದೇ ಮೈತ್ರಿ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು ಕಾಂಗ್ರೆಸ್-ಜೆಡಿಎಸ್‍ನ ಒಪ್ಪಂದದಂತೆ ಎರಡನೇ ಅವಧಿಯಲ್ಲಿ ಮೇಯರ್ ಸ್ಥಾನ ಜೆಡಿಎಸ್‍ಗೆ ಹಾಗೂ ಉಪಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ಸಿಗಲಿದೆ.
Advertisement
Advertisement
ಜೆಡಿಎಸ್ ನಿಂದ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳ ದೊಡ್ಡ ಪಟ್ಟಿ ಇದೆ. ರೇಷ್ಮಾಬಾನು, ನಮ್ರತಾ ರಮೇಶ್, ತಸ್ನೀಂ ಮತ್ತು ನಿರ್ಮಲಾ ಹರೀಶ್ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಇನ್ನೂ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನಿಂದ ಪ್ರದೀಪ್ ಚಂದ್ರ, ಶ್ರೀಧರ್, ಸತ್ಯರಾಜ್ ಪ್ರಬಲ ಆಕಾಂಕ್ಷಿ ಗಳು. ಎರಡು ಪಕ್ಷದ ನಾಯಕರು ಸಭೆ ಸೇರಿ ಅಂತಿಮವಾಗಿ ಅಭ್ಯರ್ಥಿ ಹೆಸರು ಪ್ರಕಟಿಸಲಿದ್ದಾರೆ.
Advertisement
65 ಸದಸ್ಯ ಬಲದ ಪಾಲಿಕೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕೂಡ ಸಹ ಸದಸ್ಯರಾಗಿದ್ದಾರೆ. ಹೀಗಾಗಿ ಒಟ್ಟಾರೆ ಸದಸ್ಯ ಬಲ ಹೀಗಿದೆ, ಬಿಜೆಪಿ 25, ಜೆಡಿಎಸ್ 23, ಕಾಂಗ್ರೆಸ್ 21, ಬಿಎಸ್‍ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ. ಇಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಹೀಗಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತ ಇದೆ.