ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭೇಟಿಯಾಗಿದ್ದು, ಇತ್ತ ಗೌಡರು ಬರುತ್ತಿದ್ದಂತೆಯೇ ಮಾಜಿ ಸಚಿವ ಜಿ.ಟಿ.ದೇವೇಗೌಡ ಎಸ್ಕೇಪ್ ಆಗಿದ್ದಾರೆ.
ಹೌದು. ಇಂದು ಡಿಕೆಶಿ ಬೆಟ್ಟಕ್ಕೆ ಬಂದಾಗ ಅವರೊಂದಿಗೆ ಜಿಟಿಡಿ ಕೂಡ ದೇವಾಲಯಕ್ಕೆ ಬಂದಿದ್ದಾರೆ. ಅಲ್ಲದೆ ಡಿಕೆಶಿ ಜೊತೆಯಲ್ಲಿ ಪೂಜೆಯಲ್ಲಿಯೂ ಭಾಗಿಯಾಗಿದ್ದರು. ಆದರೆ ದೇವೇಗೌಡರು ಬರುತ್ತಿದ್ದಂತೆಯೇ ಜಿಟಿಡಿ ಬೆಟ್ಟದಿಂದ ವಾಪಸ್ ಆಗಿದ್ದಾರೆ ಎನ್ನಲಾಗಿದೆ.
Advertisement
ನಾನು ಪ್ರತಿ ಶುಕ್ರವಾರ ಬರುತ್ತೇನೆ. ಡಿಕೆಶಿಯವರು ಚಾಮುಂಡಿ ಭಕ್ತರು. ಕಳೆದ ಬಾರಿ ಬೆಳ್ಳಿ ಆನೆ ಕೊಟ್ಟಿದ್ದರು. ಹೀಗಾಗಿ ಈ ಬಾರಿಯೂ ಬಂದು ದರ್ಶನ ಮಾಡಿದ್ದಾರೆ. ನಾನು ಇದೇ ಸಂದರ್ಭದಲ್ಲಿ ಬಂದಿದ್ದು ಕಾಕತಾಳಿಯ ಅಷ್ಟೇ ಎಂದು ಚಾಮುಂಡಿಬೆಟ್ಟದಲ್ಲಿ ಜಿಟಿಡಿ ಮಾಧ್ಯಮಕ್ಕೆ ಪ್ರತಿಕ್ರಿಯಸಿದರು. ಇದನ್ನೂ ಓದಿ: ಡಿಕೆಶಿಗೆ ದೇವರು ಒಳ್ಳೆಯದು ಮಾಡಲಿ: ರಮೇಶ್ ಜಾರಕಿಹೊಳಿ
Advertisement
Advertisement
ಇತ್ತ ಡಿಕೆಶಿ ಹೆಗಲ ಮೇಲೆ ಕೈ ಇಟ್ಟು ದೇವೇಗೌಡರು ಮಾತನಾಡಿಸಿದ್ದಾರೆ. ಈ ವೇಳೆ ಡಿಕೆಶಿ ಗೌಡರ ಕಾಲು ಮುಟ್ಟಿ ನಮಸ್ಕಾರ ಮಾಡುವ ಮೂಲಕ ಮಾಜಿ ಪ್ರಧಾನಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಆದರೆ ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಜಿಟಿ ದೇವೇಗೌಡರು ಹೆಚ್‍ಡಿಡಿಯನ್ನು ಭೇಟಿಯಾಗದೆ ತೆರಳಿರುವುದು ಕುತೂಹಲ ಮೂಡಿಸಿದೆ.
Advertisement
ಹೆಚ್.ಡಿ ದೇವೇಗೌಡರು ಕೂಡ ಇಂದು ಪತ್ನಿ ಸಮೇತರವಾಗಿ ಬಂದು ಚಾಮುಂಡಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. 15 ನಿಮಿಷಕ್ಕೂ ಹೆಚ್ಚು ಕಾಲ ದೇಗುಲದ ಗರ್ಭಗುಡಿಯ ಎದುರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದೇ ವೇಳೆ ಜೆಡಿಎಸ್ ನಾಯಕರಾದ ಮಾಜಿ ಸಚಿವ ಡಿಸಿ ತಮ್ಮಣ್ಣ, ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರು ಡಿಕೆಶಿ ಮಾವನ ಮನೆಗೆ ಆಗಮಿಸಿ ಡಿಕೆಶಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.