ಮೈಸೂರು: ಚಾಮುಂಡಿ ತಾಯಿಗೆ (Chamundeshwari) ಹರಕೆಯಾಗಿ ಕೊಟ್ಟ ಸೀರೆಗಳು ಕಾಳಸಂತೆಯಲ್ಲಿ ಮಾರಾಟವಾಗ್ತಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ (Chamundibetta Development Authority Secretary Roopa) ಪ್ರತಿಕ್ರಿಯೆ ನೀಡಿದ್ದಾರೆ. ಉನ್ನತ ಅಧಿಕಾರಿಯಾಗಿ ನಾನೇಕೆ ಸೀರೆ ಕದಿಯಲಿ? ಅದು ಸೀರೆಯಲ್ಲ ಕಡತ ಎಂದು ಸ್ಪಷ್ಟನೆ ನೀಡಿದ್ದಾರೆ.
`ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ನಾನು ಕಾರಿನಲ್ಲಿ ತೆಗೆದುಕೊಂಡು ಹೋಗಿರುವುದು ಸೀರೆಯಲ್ಲ, ಸೀರೆಯಲ್ಲಿ ಕಟ್ಟಿದ ಕಡತಗಳು. ಕಡತಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದೇನೆ. ಅದಕ್ಕೆ ಅವಕಾಶವಿದೆ. ಇಲ್ಲಿ ಮಾತ್ರವಲ್ಲ. ಎಲ್ಲಾ ಇಲಾಖೆಯಲ್ಲಿಯೂ ಅವಕಾಶವಿರುತ್ತದೆ. ಅದೇ ರೀತಿ ನಾನು ಆ ಕಡತವನ್ನು ಮನೆಗೆ ತೆಗೆದುಕೊಂಡು ಹೋಗಿದ್ದೇನೆ ಎಂದು ಹೇಳಿದರು.ಇದನ್ನೂ ಓದಿ: ಪಾನಮತ್ತರಾಗಿ ನಶೆಯಲ್ಲೇ ಆಸ್ಪತ್ರೆಗೆ ಬರುತ್ತಿದ್ದ ತಾಲೂಕು ವೈದ್ಯಾಧಿಕಾರಿ ಅಮಾನತು
ನನ್ನ ಮೇಲೆ ಬಂದ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಒಬ್ಬ ಉನ್ನತ ಅಧಿಕಾರಿಯಾಗಿ ನಾನೇಕೆ ಸೀರೆ ಕದಿಯಲಿ? ಚಾಮುಂಡಿಬೆಟ್ಟದಲ್ಲಿ ನಾನು ಅಧಿಕಾರ ವಹಿಸಿಕೊಂಡಾಗಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ಕೂಡ ಅದರ ಒಂದು ಭಾಗ. ಕೇವಲ ಸೀರೆ ಕೌಂಟರ್ ಮಾತ್ರವಲ್ಲ, ಲಡ್ಡು ವಿಭಾಗ ಸೇರಿ ಮುಖ್ಯದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ನಾನು ಬಂದ ಆರಂಭದಿಂದಲು ನನ್ನನ್ನು ಹೊರಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಜಿಲ್ಲಾಧಿಕಾರಿ ಹಾಗೂ ಪೊಲೀಸರ ಜೊತೆ ಮಾತನಾಡಿ ಮುಂದಿನ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಏನಿದು ಪ್ರಕರಣ?
ಚಾಮುಂಡಿ ತಾಯಿಗೆ ಹರಕೆಯಾಗಿ ಕೊಟ್ಟ ಸೀರೆಗಳು ಕಾಳಸಂತೆಯಲ್ಲಿ ಮಾರಾಟ ಆಗ್ತಿದ್ಯಾ ಅನ್ನೋ ಅನುಮಾನ ಮೂಡಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ (Snehamayi Krishan) ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.
ವಿಡಿಯೋದಲ್ಲಿ ಚಾಮುಂಡಿ ದೇವಸ್ಥಾನದಲ್ಲಿನ ಸೀರೆಗಳನ್ನು ಅಲ್ಲಿನ ನೌಕರ ದೊಡ್ಡ ಮೂಟೆ ಕಟ್ಟಿ ದೇವಸ್ಥಾನದ ಕಾರ್ಯದರ್ಶಿ ರೂಪ ಕಾರಿನಲ್ಲಿ ಇಡುತ್ತಿದ್ದರು. ಹಾಗೇ ವೀಡಿಯೋ ಸಮೇತ ದೇವಸ್ಥಾನದ ಕಾರ್ಯದರ್ಶಿ ರೂಪ ಮೇಲೆ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದು, ಭಕ್ತರು ಕೊಟ್ಟ ಸ್ಟೀಕರ್ ಸಮೇತ ಸೀರೆಗಳನ್ನು ಸುಲಭವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.ಇದನ್ನೂ ಓದಿ: ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆ ಅನುಮೋದನೆಗೆ ಮನವಿ