‘ಮೈಸೂರು ಚಲೋ’ ಪಾದಯಾತ್ರೆ ಗೊಂದಲಕ್ಕೆ ತೆರೆ; ಆ.3 ರಂದು ಹೆಚ್‌ಡಿಕೆ, ಬಿಎಸ್‌ವೈರಿಂದ ಚಾಲನೆ

Public TV
1 Min Read
h.d.kumaraswamy with bjp leaders

– ಸಂಧಾನ ಸಭೆ ಬಳಿಕ ಬೆಂಬಲ ಕೊಟ್ಟ ಕುಮಾರಸ್ವಾಮಿ

ಬೆಂಗಳೂರು: ಆ.3ರಿಂದ ಆರಂಭವಾಗಬೇಕಿರುವ ಪಾದಯಾತ್ರೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೆಲವೊಂದು ಕಾರಣದಿಂದ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಜೊತೆ ಪ್ರಹ್ಲಾದ್ ಜೋಶಿ ಸಂಧಾನ ಸಭೆ ನಡೆಸಿ, ಗೊಂದಲ ಇಲ್ಲವಾಗಿಸಿದ್ದಾರೆ.

ಸಂಸತ್ ಭವನದ ಕುಮಾರಸ್ವಾಮಿ ಕಚೇರಿಯಲ್ಲಿ ನಡೆದ ಈ ಸಂಧಾನ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಂಡಿದ್ದರು. ಪ್ರೀತಂ ಗೌಡಗೆ ದೊಡ್ಡ ಜವಾಬ್ದಾರಿಗಳನ್ನು ನೀಡಿಲ್ಲ. ನೀವು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಬಿಜೆಪಿಗರು ಮನವೊಲಿಸಿದರು. ಇದಕ್ಕೆ ಕುಮಾರಸ್ವಾಮಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪಾದಯಾತ್ರೆಯನ್ನು ಕೇಂದ್ರ ಮಂತ್ರಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಸಭೆ ಬಳಿಕ ಪ್ರತ್ಯೇಕವಾಗಿ ಮಾತಾಡಿದ ಕುಮಾರಸ್ವಾಮಿ, ನಮಗೆ ಪ್ರೀತಂ ಗೌಡ ಸಮಸ್ಯೆಯಲ್ಲ. ಪಾದಯಾತ್ರೆಯನ್ನ ಬಿಜೆಪಿಯ ಕಾರ್ಯಕ್ರಮದ ರೀತಿಯಲ್ಲಿ ಬಿಂಬಿಸುವುದಕ್ಕೆ ಹೋಗಿದ್ದರು. ಇದನ್ನೆಲ್ಲ ಕುಳಿತು ಸರಿಪಡಿಸೋ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆಗೆ ಒಪ್ಪದ ರೆಬೆಲ್ ನಾಯಕರು ಸಭೆ ಸೇರಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್‌ಸಿಂಹ, ಕುಮಾರ ಬಂಗಾರಪ್ಪ ಸಭೆ ನಡೆಸಿದ್ದಾರೆ. ನಾಡಿದ್ದಿನಿಂದ (ಶನಿವಾರ) ಶುರುವಾಗಲಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ.

Share This Article