ಮೈಸೂರು| ಬೈಕ್, ಕಾರು ಮುಖಾಮುಖಿ ಡಿಕ್ಕಿ – ಗುದ್ದಿದ ರಭಸಕ್ಕೆ ನದಿಗೆ ಬಿದ್ದ ತಾಯಿ, ಮಗ ಸಾವು

Public TV
1 Min Read
Mysuru Accident

ಮೈಸೂರು: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ನದಿಪಾಲಾಗಿರುವ ಘಟನೆ ಮೈಸೂರು (Mysuru) ಜಿಲ್ಲೆಯ ತಿ.ನರಸೀಪುರ (T Narasipura) ತಾಲ್ಲೂಕಿನ ಬನ್ನೂರು ಸೇತುವೆ ಮೇಲೆ ನಡೆದಿದೆ.

ಮೈಸೂರಿನ (Mysuru) ಬಿಎಂಶ್ರೀ ನಗರದ ನಿವಾಸಿಯಾಗಿರುವ ಮೃತ ಮಗನನ್ನು ಶಂಕರ್ (21) ಹಾಗೂ ನಾಪತ್ತೆಯಾಗಿರುವ ತಾಯಿಯನ್ನು ಪಾರ್ವತಿ (48) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪತ್ನಿಯನ್ನು ಕೊಲೆಗೈದು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೈನಿಕ ಅರೆಸ್ಟ್‌

ಮನೆ ದೇವರಿಗೆ ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ತಾಯಿ ಮತ್ತು ಮಗ ತೆರಳುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಕಾರು ಗುದ್ದಿದ ರಭಸಕ್ಕೆ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ನದಿಪಾಲಾಗಿದ್ದಾರೆ.

ಸದ್ಯ ತಾಯಿಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದು, ಸ್ಥಳಕ್ಕೆ ಬನ್ನೂರು (Bannuru) ಪೋಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಕೇವಲ 26 ರನ್‌ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ

Share This Article