ಗದಗ: ಮೈಸೂರು-ಬೆಂಗಳೂರು ಹೈವೆ (Mysuru-Bengaluru Highway) ಯನ್ನು ಪ್ರಧಾನಮಂತ್ರಿಗಳೇ ಬಂದು ರಸ್ತೆ ಉದ್ಘಾಟನೆ ಮಾಡಿದ್ರು. ಆದರೆ ಆ ರಸ್ತೆ ಈಗಾಗಲೇ ಕಿತ್ತು ಹೋಗಿದೆ. ಇದು 40% ಸರ್ಕಾರವಲ್ಲ 60% ಆಗಿದೆ. ಕರ್ನಾಟಕದ ಹಣವನ್ನು ಎಷ್ಟು ಲೂಟಿ ಮಾಡಲು ಸಾಧ್ಯವೋ ಅಷ್ಟು ಮಾಡ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (B.K Hariprasad) ಆರೋಪಿಸಿದರು.
Advertisement
ನಗರದಲ್ಲಿ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆದ ಕೆ.ಎಚ್. ಪಾಟೀಲ್‍ರ 98ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಬೇಡ ಎಂದು ಹಿರಿಯ ಕಾಂಗ್ರೆಸ್ ನಾಯಕರು, ಎಐಸಿಸಿ ಅಧ್ಯಕ್ಷರ ಬಳಿ ಮನವಿ ಮಾಡಿರೋ ವಿಚಾರವಾಗಿ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು. ಬಿಜೆಪಿಯಲ್ಲಿ ಏನು ಮಾಡ್ತಾರೆ ಅದನ್ನ ನಾವೂ ಮಾಡಬೇಕು ಅಂತ ಏನಿಲ್ಲ. ಕಾಂಗ್ರೆಸ್ (Congress) ಪಕ್ಷ ಮಾಡಿದ್ದನ್ನು ಬಿಜೆಪಿನವರೇ ಕಾಪಿ ಮಾಡ್ತಿದೆ. ನಾವು ಮಾಡಿರೋ ಕೆಲಸಕ್ಕೆ ಬಿಜೆಪಿಯವರು ಲೇಬಲ್ ಹಾಕಿಕೊಳ್ತಿದ್ದಾರೆ ಎಂದರು.
Advertisement
Advertisement
ಎಚ್.ಕೆ.ಪಾಟೀಲ್, ಮುನಿಯಪ್ಪ ಹಾಗೂ ದಿನೇಶ್ ಗುಂಡುರಾವ್ ಭೇಟಿ ಮಾಡಿದ್ದಾರೆ. ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. ಕೆಲವು ಶಾಸಕರಿಗೆ ಟಿಕೆಟ್ ಬೇಡ ಅನ್ನೋ ವಿಚಾರ ಕೇವಲ ಊಹಾಪೋಹ. ಕಾಂಗ್ರೆಸ್ ಪಕ್ಷ ಒಂದು ಜಾತಿ, ಧರ್ಮ, ಭಾಷೆ ಅಂತ ಹೋಗೋದಿಲ್ಲ. ಎಲ್ಲರಿಗೂ ಅವರ ಅವರ ಶಕ್ತಿಯನುಸಾರವಾಗಿ ಟಿಕೆಟ್ ಸಿಗುತ್ತೆ ಎಂದರು. ಇದನ್ನೂ ಓದಿ: 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ
Advertisement
ಮಹಾರಾಷ್ಟ್ರ ಗಡಿ ಭಾಗದಲ್ಲಿ ಕರ್ನಾಟಕದವರಿಗೆ ಸೌಲಭ್ಯ ನೀಡಿರೋ ವಿಚಾರವಾಗಿ, ಇದು ರಾಷ್ಟ್ರದ ಒಕ್ಕೂಟದ ವಿರುದ್ಧ ಮಾಡುವ ಕೆಲಸವಿದು. ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ಇದಕ್ಕೆ ಪ್ರಧಾನ ಮಂತ್ರಿಗಳೇ ನೇರ ಹೊಣೆ. ಇದು ಸಂವಿಧಾನ ವಿರೋಧದ ಚಟುವಟಿಕೆಯಾಗಿದೆ. ಸರ್ಕಾರವನ್ನೇ ಬರ್ಕಾಸ್ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಸ್ತೆ ಮಧ್ಯೆಯೇ ಯಡಿಯೂರಪ್ಪರನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು
ವಿ. ಸೋಮಣ್ಣ (V Somanna) ಕಾಂಗ್ರೆಸ್ ಬರೋ ವಿಚಾರ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರಾದರೂ ಬರಬಹುದು ಎಂದು ಆಹ್ವಾನ ನೀಡಿದರು. ಈ ವೇಳೆ ಶಾಸಕ ಎಚ್.ಕೆ ಪಾಟೀಲ್, ಮಾಜಿ ಶಾಸಕ ಡಿ.ಆರ್ ಪಾಟೀಲ್, ಜಿ.ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ, ಬಿ.ಆರ್ ಯಾವಗಲ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.