ಮೈಸೂರು: ಆಕೆ ಬಿಸಿಎ ವಿದ್ಯಾರ್ಥಿನಿ, 15 ದಿನ ಕಳೆದಿದ್ರೆ ಪದವಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರುತ್ತಿದ್ದಳು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಸ್ನೇಹಿತನ ಜೊತೆ ಹೋಟೆಲ್ ಲಾಡ್ಜ್ಗೆ ಬಂದ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ಆಕೆಯ ಸಾವಿನ ಸುತ್ತಲೂ ಹಲವು ಅನುಮಾನಗಳು ಹುಟ್ಟುಕೊಂಡಿವೆ.
Advertisement
ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಅವರ ಪುತ್ರಿ ಅಪೂರ್ವ ಶೆಟ್ಟಿ (21) ನಿನ್ನೆ ರಾತ್ರಿ ಲಾಡ್ಜ್ ಒಂದರಲ್ಲಿ ಮೃತಪಟ್ಟಿದ್ದಾರೆ. ಈಕೆ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಾಂಗ ಮಾಡುತ್ತಿದ್ದಳು. ಇನ್ನೂ 15 ದಿನಗಳಲ್ಲಿ ಪದವಿ ಮುಗಿಸಿ ಊರಿಗೆ ಹೋಗೋದ್ರಲ್ಲಿದ್ದಳು, ದುರದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ
Advertisement
Advertisement
ಏನಿದು ಅಪೂರ್ವ ಸ್ಟೋರಿ?
ಅಪೂರ್ವ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಆಶಿಕ್ ಎಂಬ ಯುವಕನೊಂದಿಗೆ ಓಡಾಡುತ್ತಿದ್ದಳು. ಕಳೆದ ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಆಶಿಕ್ ಜೊತೆಗೆ ಬಂದು ರೂಂ ಬಾಡಿಗೆ ಪಡೆದು ವಾಸ್ತಾವ್ಯ ಹೂಡಿದ್ದರು. ಆಶಿಕ್ ಆಗಾಗ್ಗೆ ಹೊರಗೆ ಹೋಗಿ ಮತ್ತೆ ಹೋಟೆಲ್ಗೆ ವಾಪಸ್ ಬರುತ್ತಿದ್ದ. ನಿನ್ನೆ ಬೆಳಗ್ಗೆ ಹೋಟೆಲ್ ನಿಂದ ಹೊರಟ ಆಶಿಕ್ ಮತ್ತೆ ವಾಪಸ್ ಹೋಟೆಲ್ಗೆ ಬಂದಿಲ್ಲ. ಆಕೆಯೂ ಸಹ ಹೋಟೆಲ್ನಿಂದಲೇ ಹೊರಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ರೂಂನಲ್ಲಿದ್ದ ಇಂಟರ್ ಕಾಲ್ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದಾಗ ಆತಂಕಗೊಂಡು ತಕ್ಷಣ ದೇವರಾಜ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವರಾಜ ಠಾಣೆ ಪೊಲೀಸರು ಬಂದು ರೂಂ ತೆರೆದು ನೋಡಿದಾಗ ಅಪೂರ್ವ ಶೆಟ್ಟಿ ರೂಂನಲ್ಲಿ ಹೆಣವಾಗಿ ಬಿದ್ದಿದ್ದಾಳೆ. ಇದನ್ನೂ ಓದಿ: ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ
Advertisement
ಇನ್ನೂ ಅಪೂರ್ವ ಶೆಟ್ಟಿ ಸ್ನೇಹಿತರ ಮಾಹಿತಿ ಪ್ರಕಾರ ಆಶಿಕ್ ಮತ್ತು ಅಪೂರ್ವಶೆಟ್ಟಿ ಕಳೆದ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಮನೆಯವರಿಗೆ ವಿಚಾರ ತಿಳಿದು ಜಗಳವಾಗಿತ್ತು. ಇಬ್ಬರಿಗೂ ಬುದ್ಧಿಮಾತು ಹೇಳಿ ದೂರ ಆಗುವಂತೆ ಹೇಳಿದ್ದರು. ಇದಾದ ಬಳಿಕವೂ ಆಕೆ ಆ ಹುಡುಗನ ಜೊತೆ ಸ್ನೇಹ ಮುಂದುವರಿಸಿದ್ದಾಳೆ. ಆಗಾಗ ಆತನ ಜೊತೆ ಸುತ್ತಾಡುತ್ತಿದ್ದಳು ಎಂದು ತಿಳಿದು ಬಂದಿರುವುದಾಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಸದ್ಯ ಹೋಟೆಲ್ನಲ್ಲಿ ಒಟ್ಟಿಗೇ ಇದ್ದ ವೇಳೆ ಜಗಳ ನಡೆದು ಮಗಳು ಕೊಲೆಯಾಗಿರಬಹುದೆಂದು ಅಪೂರ್ವಶೆಟ್ಟಿ ತಂದೆ ದೇವರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಸ್ನೇಹಿತ ಆಶಿಕ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೇಮಿ ಆಶಿಕ್ ಸಹ ಘಟನೆ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದಾಗಿ ಪೊಲೀಸರ ತಿಳಿಸಿದ್ದಾರೆ.