ಮೈಸೂರು: ಮೈಸೂರು- ಚಾಮರಾಜನಗರ (Mysuru-Chamarajanagara) ಜಿಲ್ಲೆಗಳಿಂದ ಸಂಸತ್ ಸದಸ್ಯರಾಗೋಕೆ ಪ್ರಯತ್ನ ಪಟ್ಟು ರಾಜ್ಯ ರಾಜಕಾರಣದಲ್ಲೇ ಹೆಸರು ಮಾಡಿದವರ ದೊಡ್ಡ ಪಟ್ಟಿಯೆ ಇದೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲದಿದ್ದರೂ ರಾಜ್ಯ ರಾಜಕೀಯದಲ್ಲಿ ದೊಡ್ಡ ಸ್ಥಾನವೇ ಅವರಿಗೆ ಒಲಿದಿವೆ.
ಎಸ್. ಚಿಕ್ಕಮಾದು ಮೂರು ಬಾರಿ, ಸಿದ್ದರಾಮಯ್ಯ (Siddaramaiah), ಜಿ.ಟಿ.ದೇವೇಗೌಡ, ಎಂ.ಶಿವಣ್ಣ, ಎ.ಆರ್.ಕೃಷ್ಣಮೂರ್ತಿ ತಲಾ ಎರಡೆರಡು ಬಾರಿ, ಡಾ. ಹೆಚ್.ಸಿ.ಮಹದೇವಪ್ಪ (H.C.Mahadevappa) ಒಂದು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾಗಿದ್ದರು. ಇದನ್ನೂ ಓದಿ: Congress List: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾರಿಗೆ ಎಲ್ಲಿ ಟಿಕೆಟ್?
Advertisement
Advertisement
ಸಿದ್ದರಾಮಯ್ಯ ಅವರು 1980 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜನತಾಪಕ್ಷ (ಎಸ್) ಅಭ್ಯರ್ಥಿಯಾಗಿ, 1991 ರಲ್ಲಿ ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಡಾ. ಹೆಚ್.ಸಿ.ಮಹದೇವಪ್ಪ ಅವರು 1991 ರಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಹೋಗಲು ಯತ್ನಿಸಿದ್ದರು. ಆದರೆ ಜನತಾದಳ ಅಭ್ಯರ್ಥಿಯಾಗಿದ್ದ ಅವರು ಕಾಂಗ್ರೆಸ್‌ನ ವಿ.ಶ್ರೀನಿವಾಸಪ್ರಸಾದ್ ಎದುರು ಸೋಲು ಅನುಭವಿಸಿದ್ದರು.
Advertisement
ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಚಿಕ್ಕಮಾದು ಮೈಸೂರು ಲೋಕಸಭಾ ಕ್ಷೇತ್ರದಿಂದ 1977, 1980 ರಲ್ಲಿ ಪಕ್ಷೇತರ ಅಭ್ಯಥಿಯಾಗಿ ಹಾಗೂ 1998 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದನ್ನೂ ಓದಿ: ಸುದೀಪ್ ಬಿಜೆಪಿಗೆ ಬೆಂಬಲ – ಕಾಂಗ್ರೆಸ್‌ನವರಿಗೆ ಸಹಿಸೋಕಾಗ್ತಿಲ್ಲ: ಬಿಎಸ್‌ವೈ
Advertisement
ಜಿ.ಟಿ.ದೇವೇಗೌಡ 1996, 1998 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಮಾಜಿ ಮಂತ್ರಿ ಎಂ.ಶಿವಣ್ಣ, ಎ.ಆರ್.ಕೃಷ್ಣಮೂರ್ತಿ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಕ್ರಮವಾಗಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.