ಮೈಸೂರು: ಚಿಕ್ಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ವಿಚಾರ ದೇಶಾದ್ಯಂತ ತಲ್ಲಣ ಸೃಷ್ಟಿಸಿದ ಬೆನ್ನಲ್ಲೇ ಇದೀಗ 60 ವರ್ಷದ ಸ್ವಾಮೀಜಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ (Mysuru Swamiji Suicide) ನಡೆದಿದೆ.
ಸ್ವಾಮೀಜಿಯನ್ನು ಶಿವಪ್ಪ ದೇವರು (Shivappa Devaru) ಎಂದು ಗುರುತಿಸಲಾಗಿದ್ದು, ಇವರು ನಂಜನಗೂಡಿನ ದೇವನೂರು ಮಠದ ಸ್ವಾಮೀಜಿಗಳ ಶಿಷ್ಯ.
ಕಳೆದೆರಡು ದಿನದಿಂದ ಶಿವಪ್ಪ ದೇವರು ಸ್ವಾಮೀಜಿ ನಾಪತ್ತೆಯಾಗಿದ್ದರು. ಬಳಿಕ ಟಿ.ನರಸೀಪುರ (T narasipura) ತಾಲೂಕಿನ ಮೂಡುಕೊತೊರೆಯ ಬಳಿ ಕಾವೇರಿ ನದಿಗೆ (Cauvery River) ಹಾರಿ ಆತ್ಮಹತ್ಯೆ ಮಾಡಿಕೊಮಡಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದ ಸ್ವಾಮೀಜಿ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸೇವೆ ಮಾಡಿಕೊಂಡಿದ್ದ ಇವರು ಮಠ ಹಾಗೂ ಮಠದ ಭಕ್ತರಲ್ಲಿ ಉತ್ತಮ ಹೆಸರು ಹೊಂದಿದ್ದರು.
ಸ್ಥಳಕ್ಕೆ ತಲಕಾಡು ಪೊಲೀಸರು (Talakadu police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]