ಮಂಡ್ಯ: ಸರ್ಕಾರದ ಮೈಶುಗರ್ ಕಾರ್ಖಾನೆ (Mysugar Factory) ಸ್ಥಗಿತಗೊಂಡಿದ್ದು, ರೈತರು ಬೆಳೆದ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಪೂರೈಸಲು ಜಿಲ್ಲಾಡಳಿತ ಮುಂದಾಗಿದೆ.
ಕಾರ್ಖಾನೆ ಸ್ಥಗಿತಗೊಂಡಿ ಪರಿಣಾಮ, ಕಾರ್ಖಾನೆ ವ್ಯಾಪ್ತಿಯಲ್ಲಿ ಸಾವಿರಾರು ಹೆಕ್ಟೇರ್ ಕಬ್ಬು ಉಳಿದಿತ್ತು. ಇದರಿಂದ ಕಾರ್ಖಾನೆ ಹಾಗೂ ಸರ್ಕಾರದ ವಿರುದ್ಧ ರೈತರು (Farmers) ಆಕ್ರೋಶ ವ್ಯಕ್ತಪಡಿಸಿದದ್ದರು. ಈ ಕುರಿತು `ಪಬ್ಲಿಕ್ ಟಿವಿ’ಯಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
- Advertisement3
ಮೈಶುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟಾವು ಆಗದೇ ಉಳಿದಿರುವ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಪೂರೈಕೆಗೆ ನಿರ್ಧಾರ ಮಾಡಲಾಗಿದೆ. ಕಬ್ಬು ಬೆಳೆದ ರೈತರು ಬಂದು ಮನವಿ ಮಾಡಿದ್ರೆ ಬೇರೆ ಕಾರ್ಖಾನೆಗಳಿಗೂ ಪೂರೈಕೆಗೆ ಚಿಂತನೆ ಮಾಡಲಾಗುತ್ತದೆ ಎಂದು ಮೈಶುಗರ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.
- Advertisement
ನವೆಂಬರ್ 24 ರಂದು ಮೈಶುಗರ್ ಕಾರ್ಖಾನೆ ಕಬ್ಬು ಅರೆಯುವಿಕೆಯನ್ನು ಸ್ಥಗಿತ ಮಾಡಿತ್ತು. ಪ್ರಸಕ್ತ ವರ್ಷ 2.01 ಲಕ್ಷ ಟನ್ ಕಬ್ಬು ಅರೆದಿದ್ದ ಕಾರ್ಖಾನೆ, ತನ್ನ ವ್ಯಾಪ್ತಿಯಲ್ಲಿ ಕಬ್ಬು ಇದ್ದರೂ ಕಾರ್ಖಾನೆ ಸ್ಥಗಿತ ಮಾಡಲಾಗಿತ್ತು. ಇನ್ನೊಂದೆಡೆ ಇಳುವರಿ ಜೊತೆಗೆ ಕಬ್ಬಿಗೆ ಬೆಲೆಯೂ ಸಿಗದೆ ರೈತರು ಆತಂಕದಲ್ಲಿದ್ದರು. ಬೇರೆ ಖಾಸಗಿ ಕಾರ್ಖಾನೆಗಳು ಕೂಡ ಕಬ್ಬು ತೆಗೆದುಕೊಳ್ಳುವುದಿಲ್ಲ ಎಂಬ ಆತಂಕದಲ್ಲಿ ರೈತರು ಇದ್ದರು. ಇದೀಗ ರೈತರ ಆತಂಕವನ್ನು ಜಿಲ್ಲಾಡಳಿತ ದೂರ ಮಾಡಿದೆ.