ಮುಂಬೈ: ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟ ಪೂನಂ ಪಾಂಡೆ (Poonam’s Pandey) ಸಾವಿನ ಸುತ್ತ ಅನುಮಾನದ ಹುತ್ತ ದಟ್ಟವಾಗಿ ಬೆಳೆಯಲು ಆರಂಭವಾಗಿದೆ.
ಹೌದು. ಸಾಮಾಜಿಕ ಜಾಲತಾಣದಲ್ಲಿ (Social Media) ನಿಧನ ಸುದ್ದಿ ಪ್ರಕಟವಾದ ಬಳಿಕ ಇಲ್ಲಿಯವರೆಗೆ ಪೂನಂ ಪಾಂಡೆಯವರ ಯಾವುದೇ ಫೋಟೋ ಲಭ್ಯವಾಗಿಲ್ಲ. ಈ ಕಾರಣಕ್ಕೆ ಪ್ರಚಾರದ ಹುಚ್ಚಿಗೆ ಈ ಸುದ್ದಿಯನ್ನು ಹರಿಬಿಡಲಾಗಿದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಪೂನಂ ಪಾಂಡೆ ಅವರ ಮ್ಯಾನೇಜರ್ ಅವರನ್ನು ಕೇಳಿದರೆ ನಮಗೆ ಅವರ ಸಹೋದರಿ ಅವರಿಂದ ನಿಧನರಾದ ಸುದ್ದಿ ತಿಳಿದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಖಚಿತ ಪಡಿಸಲು ಸಹೋದರಿ ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. ಇದನ್ನೂ ಓದಿ: 2 ಮಕ್ಕಳ ತಂದೆಯನ್ನು ಮದುವೆಯಾಗಿ ನಂತರ ದೂರವಾಗಿದ್ದೇಕೆ ಪೂನಂ?
Advertisement
Advertisement
ಸಹೋದರಿ ಅಲ್ಲದೇ ಪೂನಂ ಪಾಂಡೆ ಅವರ ಕೆಲ ಸಂಬಂಧಿಗಳಿಗೆ ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಕೆಲವರ ಮೊಬೈಲಿಗೆ ಕಾಲ್ ಹೋಗತ್ತಲೇ ಇಲ್ಲ.
Advertisement
ಈ ಬಗ್ಗೆ ಪಾಂಡೆ ಅವರ ಪಿಆರ್ ಏಜೆನ್ಸಿ ಅವರನ್ನು ಸಂಪರ್ಕಿಸಿದಾಗ, ಬೆಳಗ್ಗೆ ಪೂನಂ ಪಾಂಡೆ ನಿಧನರಾಗಿರುವ ವಿಚಾರ ಗೊತ್ತಾಯಿತು. ನಂತರ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದರೆ ಅವರು ಯಾರ ಜೊತೆ ಮಾತನಾಡಿಲ್ಲ. ಕುಟುಂಬದ ಸದಸ್ಯರು ಅಧಿಕೃತವಾಗಿ ಯಾಕೆ ನಿಧನ ಸುದ್ದಿಯನ್ನು ತಿಳಿಸಿಲ್ಲ ಎಂದು ಪ್ರಶ್ನೆ ಮಾಡಿದೆ. ಇದನ್ನೂ ಓದಿ: ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲಾಗ್ತೀನಿ ಎಂದು ಚಾಲೆಂಜ್ ಹಾಕಿದ್ದ ಪೂನಂ
ಪೂನಂ ಪಾಂಡೆ ನಿಧನದ ಸುದ್ದಿಯನ್ನು ಮಾಧ್ಯಮಗಳಿಗೆ ಮ್ಯಾನೇಜರ್ ನಿಕಿತಾ ಶರ್ಮಾ ಇಮೇಲ್ ಮೂಲಕ ಕಳುಹಿಸಿದ್ದರು. ಈ ಇಮೇಲ್‌ನಲ್ಲಿ ನೀಡಲಾಗಿದ್ದ ಫೋನ್ ನಂಬರ್‌ಗೆ ಕರೆ ಮಾಡಿದಾಗ ಪಶ್ಚಿಮ ಬಂಗಾಳದ ವ್ಯಕ್ತಿಗೆ ಹೋಗಿತ್ತು. ಆ ವ್ಯಕ್ತಿಗೆ ಪೂನಂ ಪಾಂಡೆ ಯಾರು ಎನ್ನುವುದೇ ಗೊತ್ತಿರಲಿಲ್ಲ.
ಪೂನಂ ಪಾಂಡೆ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು ಸೆಕ್ಯೂರಿಟಿ ಗಾರ್ಡ್ ಅವರನ್ನು ಕೇಳಿದಾಗ ಎರಡು ದಿನದ ಹಿಂದೆ ನಾನು ಅವರನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಹೃದಯಾಘಾತವಾದರೆ ವ್ಯಕ್ತಿಗಳು ಕೂಡಲೇ ಸಾವನ್ನಪ್ಪುತ್ತಾರೆ. ಆದರೆ ಗರ್ಭಕಂಠದ ಕ್ಯಾನ್ಸರ್‌ನಿಂದ ವ್ಯಕ್ತಿಗಳು ಕೂಡಲೇ ಸಾವನ್ನಪ್ಪುವುದಿಲ್ಲ. ಕೊನೆಯ ಹಂತದಲ್ಲಿದ್ದಾಗ ರೋಗಿಗಳು ಅನಾರೋಗ್ಯಗೊಂಡು ತೆಳ್ಳಗಾಗುತ್ತಾರೆ. ಆದರೆ ಈ ಯಾವುದೇ ಲಕ್ಷಣ ಪೂನಂ ಪಾಂಡೆ ಅವರಲ್ಲಿ ಇರಲಿಲ್ಲ. ಕೆಲ ದಿನದ ಹಿಂದೆ ಪೂನಂ ಪಾಂಡೆ ಗೋವಾದಲ್ಲಿ ನಡೆದ ಪಾರ್ಟಿ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗಿಯಾಗಿದ್ದರು.
ಕೆಲ ಮಾಧ್ಯಮಗಳು ವಿಪರೀತ ಡ್ರಗ್ಸ್ ಸೇವಿಸಿ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ. ಆದರ ಇಲ್ಲಿಯವರೆಗೆ ಅಧಿಕೃತವಾಗಿ ಪೂನಂ ಪಾಂಡೆ ಮನೆಯವರು ನಿಧನ ಸುದ್ದಿ ಪ್ರಕಟಿಸಿಲ್ಲ ಮತ್ತು ಮೃತದೇಹದ ಯಾವುದೇ ಫೋಟೋ ಲಭ್ಯವಾಗಿಲ್ಲ.ಈ ಕಾರಣಕ್ಕೆ ಪೂನಂ ಪಾಂಡೆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯಲು ಆರಂಭವಾಗಿದೆ.