ಬೀಜಿಂಗ್: ಪ್ರಾಯೋಗಿಕ ಚೀನೀ ಬಾಹ್ಯಾಕಾಶ ನೌಕೆಯು (Mystery Chinese Spacecraft) 276 ದಿನಗಳ ಕಾಲ ಕಕ್ಷೆಯಲ್ಲಿ ಉಳಿದುಕೊಂಡ ಇಂದು (ಸೋಮವಾರ) ಭೂಮಿಗೆ ವಾಪಸ್ ಆಗಿದೆ ಎಂದು ಚೀನಾದ (China) ರಾಜ್ಯ ಮಾಧ್ಯಮ ವರದಿ ಮಾಡಿದೆ.
ನೌಕೆಯನ್ನು ಮರುಬಳಕೆ ಮಾಡಬಹುದೆ ಎಂಬುದನ್ನು ಪರಿಶೀಲಿಸುವ ಸಲುವಾಗಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಮಾನವರಹಿತ ಬಾಹ್ಯಾಕಾಶ ನೌಕೆಯು ಸೋಮವಾರ ವಾಯುವ್ಯ ಚೀನಾದ ಜಿಯುಕ್ವಾನ್ ಉಡಾವಣಾ ಕೇಂದ್ರಕ್ಕೆ ಮರಳಿದೆ. ಇದನ್ನೂ ಓದಿ: ಚಿನ್ನದ ಗಣಿಯಲ್ಲಿ ಬೆಂಕಿ ದುರಂತ – 27 ಕಾರ್ಮಿಕರು ಸಾವು
Advertisement
Advertisement
ಈ ಬಾಹ್ಯಾಕಾಶ ನೌಕೆ ಯಾವುದು, ಯಾವ ತಂತ್ರಜ್ಞಾನ ಬಳಸಲಾಗಿದೆ, ಅದು ಎಷ್ಟು ಎತ್ತರಕ್ಕೆ ಹಾರಿತು, ಆಗಸ್ಟ್ 2022 ರ ಆರಂಭದಲ್ಲಿ ಉಡಾವಣೆಯಾದಾಗಿನಿಂದ ಅದರ ಕಕ್ಷೆಗಳು ಅದನ್ನು ಎಲ್ಲಿಗೆ ಕೊಂಡೊಯ್ದಿವೆ ಎಂಬುದರ ಕುರಿತು ಯಾವುದೇ ವಿವರಗಳನ್ನು ವಿಜ್ಞಾನಿಗಳು ನೀಡಿಲ್ಲ. ನೌಕೆಯ ಚಿತ್ರಗಳನ್ನು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.
Advertisement
Advertisement
2021 ರಲ್ಲಿ, ಇದೇ ಮಾದರಿಯ ನೌಕೆಯು ಬಾಹ್ಯಾಕಾಶದ ಅಂಚಿಗೆ ಹಾರಿ ಅದೇ ದಿನ ಭೂಮಿಗೆ ಮರಳಿತ್ತು. ಬೀಜಿಂಗ್ ಯುಎಸ್ ಏರ್ ಫೋರ್ಸ್‌ನ X-37B ನಂತಹ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸ್ವಾಯತ್ತ ಬಾಹ್ಯಾಕಾಶ ನೌಕೆಯು ವರ್ಷಗಳವರೆಗೆ ಕಕ್ಷೆಯಲ್ಲಿ ಉಳಿಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ ಹಿಮಪಾತ – ಮೂವರು ಸಾವು, 9 ಮಂದಿಗೆ ಗಾಯ
ಮಾನವರಹಿತ ಮತ್ತು ಮರುಬಳಕೆ ಮಾಡಬಹುದಾದ X-37B, 900ಕ್ಕಿಂತ ಹೆಚ್ಚು ದಿನ ಕಕ್ಷೆಯಲ್ಲಿದ್ದು ಕಳೆದ ವರ್ಷ ನವೆಂಬರ್‌ನಲ್ಲಿ ಭೂಮಿಗೆ ವಾಪಸ್ ಆಗಿತ್ತು.