ನವದೆಹಲಿ: ವಿಧಾನಸಭೆಯಿಂದ ಚಾಂದಿನಿ ಚೌಕದಲ್ಲಿರುವ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗವೊಂದು ದೆಹಲಿಯಲ್ಲಿ ಪತ್ತೆಯಾಗಿದೆ.
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಸುರಂಗ ಮಾರ್ಗವು ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಸುರಂಗವನ್ನು ಬಳಸುತ್ತಿದ್ದರು ಎಂದು ಮಾಹಿತಿ ಹಂಚಿಕೊಂಡರು.ಇದನ್ನೂ ಓದಿ: ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್
Advertisement
Advertisement
ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಹೋಗುವ ಸುರಂಗ ಮಾರ್ಗದ ಬಗ್ಗೆ ಕೇಳಿದ್ದೆ. ಅದಲ್ಲದೆ ನಾನು ಅದರ ಇತಿಹಾಸವನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಈ ಬಗ್ಗೆ ಇನ್ನು ಕೂಡ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲವೆಂದು ಗೋಯೆಲ್ ತಿಳಿಸಿದ್ದಾರೆ.
Advertisement
ಪ್ರಸ್ತುತ ಈ ಸುರಂಗ ಮಾರ್ಗವನ್ನು ನಾವು ಪತ್ತೆ ಹಚ್ಚಿದ್ದೇವೆ. ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಕಾಮಗಾರಿಯ ಸಂದರ್ಭ ಈ ಸುರಂಗದ ಮಾರ್ಗಗಳು ನಾಶವಾಗಿದೆ. ಹಾಗಾಗಿ ನಾವು ಅದನ್ನು ಮತ್ತಷ್ಟು ಅಗೆಯಲು ಮುಂದಾಗಿಲ್ಲ. ಶೀಘ್ರದಲ್ಲೇ ನಾವು ಅದನ್ನು ನವೀಕರಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತೇವೆ. ಮುಂದಿನ ವರ್ಷ ಆಗಸ್ಟ್ 15 ರೊಳಗೆ ನವೀಕರಣ ಕಾರ್ಯ ಮುಗಿಯುವ ನಿರೀಕ್ಷೆಯಿದೆ ಎಂದರು. ಇದನ್ನೂ ಓದಿ: ವಾಹನ ಟೋಯಿಂಗ್ ಈ ನಿಯಮ ಪಾಲಿಸಲೇಬೇಕು – ಪೊಲೀಸರಿಗೆ ಗೃಹ ಸಚಿವರ ಖಡಕ್ ಸೂಚನೆ
A tunnel-like structure, that was discovered at Delhi Assembly in 2016, is being renovated.
"It connects to Red Fort. There's no clarity over its history, but it was used by Britishers to avoid reprisal while moving freedom fighters," said Assembly Speaker Ram Niwas Goel (2.09) pic.twitter.com/O78PBnfxIU
— ANI (@ANI) September 3, 2021
1912ರಲ್ಲಿ ಬ್ರಿಟಿಷರು ಕೋಲ್ಕತ್ತಾದಿಂದ ಕೇಂದ್ರ ಶಾಸಕಾಂಗ ಕಚೇರಿಯನ್ನು ದೆಹಲಿ ವಿಧಾನ ಸಭೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದರು. ನಂತರ 1962ರಲ್ಲಿ ಈ ಕಟ್ಟಡವನ್ನು ಕೋರ್ಟ್ ಆಗಿ ಪರಿವರ್ತಿಸಲಾಗಿತ್ತು. ಅದಲ್ಲದೆ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟ್‍ಗೆ ಹಾಜರುಪಡಿಸಲು ಬ್ರಿಟಿಷರು ಈ ರಹಸ್ಯ ಸುರಂಗ ಮಾರ್ಗವನ್ನು ಬಳಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇದೆ.