ಬೆಂಗಳೂರು: ಜೆಪಿ ನಗರ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿನ ಬ್ರೂಕ್ಸ್ ಲ್ಯಾಂಡ್ ಪ್ರೀ ಸ್ಕೂಲ್ ಬಳಿ ಪತ್ತೆಯಾದ ವಸ್ತು ಬಾಂಬ್ ಅಲ್ಲ ಪವರ್ ಬ್ಯಾಂಕ್ ರೀತಿಯ ವಸ್ತು ಎನ್ನುವುದು ಬಾಂಬ್ ನಿಷ್ಕ್ರಿಯ ದಳ ನಡೆಸಿದ ತನಿಖೆಯಿಂದ ಗೊತ್ತಾಗಿದೆ.
ಇಂದು ಬೆಳಿಗ್ಗೆ ಪ್ರೀ ಸ್ಕೂಲ್ ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಗಿತ್ತು. ಸ್ಕೂಲ್ ಬಳಿ ಇರಿಸಲಾದ ಮಣ್ಣಿನ ಚೀಲಗಳ ಬಳಿ ಪ್ಲಾಸ್ಟಿಕ್ ಕವರ್‍ನಲ್ಲಿ ಆ ವಸ್ತು ಪತ್ತೆಯಾಗಿತ್ತು. ಪ್ಲಾಸ್ಟಿಕ್ ಕವರ್‍ನಲ್ಲಿ ವೈರ್‍ಗಳು ಮತ್ತು ಮೊಬೈಲ್ ಇರೋದು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಜೆಪಿನಗರದ ಐದನೇ ಹಂತದ 20 ನೇ ಮುಖ್ಯರಸ್ತೆಯ, 17 ನೇ ಕ್ರಾಸ್‍ನಲ್ಲಿರೊ ಸ್ಕೂಲ್ ಗೆ ಪುಟ್ಟೇನಹಳ್ಳಿ ಪೊಲೀಸರು ದೌಡಾಯಿಸಿದ್ರು.
Advertisement
Advertisement
ನಂತರ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಲಾಯ್ತು. ಸ್ಕೂಲ್ ಒಳಗೆ ಹಾಗು ಸುತ್ತಮುತ್ತ ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸಿದ್ರು. ರಾತ್ರಿ ಒಬ್ಬ ವ್ಯಕ್ತಿ ಬಂದು ಅನುಮಾನಾಸ್ಪದ ವಸ್ತು ಇಟ್ಟಿರೋದು ಗೊತ್ತಾಗಿದೆ. ಸಿಸಿಟಿವಿಯಲ್ಲಿ ಅನುಮಾನಾಸ್ಪದ ವ್ಯಕ್ತಿಯ ಚಲನವಲನ ದಾಖಲಾಗಿದೆ.
Advertisement
Advertisement
ಇದೊಂದು ಪವರ್ ಬ್ಯಾಂಕ್ ರೀತಿಯ ವಸ್ತು. ಬ್ಯಾಟರಿ ಕಟ್ ಮಾಡಿ ವೈರ್ ಜೋಡಿಸಿದ್ದಾರೆ. ಯಾರೋ ಬೇಕು ಅಂತಾನೇ ಹುಡುಗಾಟಿಕೆಗಾಗಿ ಇದನ್ನ ತಂದು ಇಟ್ಟಿರೋ ಅನುಮಾನ ಕಾಣ್ತಿದೆ. ಅನುಮಾನಾಸ್ಪದವಾಗಿ ಬಂದ ವ್ಯಕ್ತಿಯ ಚಹರೆ ಕೆಲ ಸಿಸಿಟಿವಿಗಳಲಿ ಪತ್ತೆಯಾಗಿದೆ. ಜನರು ಯಾವುದೇ ಭಯ ಪಡುವ ಅವಶ್ಯಕತೆಯಿಲ್ಲ. ಕಂಟ್ರೋಲ್ ರೂಮಿಗೆ ಕರೆ ಮಾಡಿ ವಿಷಯ ತಿಳಿಸಿದವರಿಗೆ ಅಭಿನಂದನೆ ತಿಳಿಸ್ತೇನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹೇಳಿದ್ದಾರೆ.
ಪ್ರೀ ಸ್ಕೂಲ್‍ನ ಎದುರಿಗೆ ಸಂವೇದ್ ಸ್ಕೂಲ್ ಇದ್ದು, ಅಲ್ಲಿನ ಮಕ್ಕಳಿಗೆ ಇಂದು ಪರೀಕ್ಷೆ ಇತ್ತು. ಆದ್ರೆ ಮುಂಜಾಗ್ರತಾ ಕ್ರಮವಾಗಿ ಆ ಶಾಲೆಯ ಮಕ್ಕಳಿಗೆ ಇಂದು ರಜೆ ನೀಡಲಾಗಿದೆ.