ನಿನ್ನೆ ರಾತ್ರಿ ಕರ್ನಾಟಕದ ಹಲವೆಡೆ ಆಗಸದಲ್ಲಿ ಅಚ್ಚರಿ ಕಾಣಿಸಿತ್ತು. ಉಡುಪಿ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಗೋಚರಿಸಿದ ಈ ವಿಚಿತ್ರ ಏನು ಎಂಬುದರ ಬಗ್ಗೆ ಹಲವರು ಗೊಂದಲಕ್ಕೊಳಗಾಗಿದ್ದಾರೆ.
ಇದು ನಕ್ಷತ್ರ ಸಾಲುಗಳಲ್ಲ. ಬದಲಿಗೆ ಅಮೆರಿಕ ಉಡಾಯಿಸಿದ ಉಪಗ್ರಹಗಳ ಸಾಲು. ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಉಡಾಯಿಸಿದ್ದ ಉಪಗ್ರಹಗಳು ಭಾರತದಲ್ಲಿ ಹಲವೆಡೆ ಕಣ್ಣಿಗೆ ಕಾಣಿಸಿದ್ದು, ಜನರು ಆಶ್ಚರ್ಯಪಟ್ಟಿದ್ದಾರೆ.
Advertisement
ಏನು ಈ ನಕ್ಷತ್ರ ಸಾಲುಗಳು?
ಇದು ಡಿಸೆಂಬರ್ 18ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಈ ಉಪಗ್ರಹಗಳನ್ನು ಉಡವಾಣೆ ಮಾಡಲಾಗಿತ್ತು. ಸ್ಪೇಸ್ ಎಕ್ಸ್‌ನ 34ನೇ ಉಡಾವಣೆಯಲ್ಲಿ ಒಟ್ಟು 57 ಉಪಗ್ರಹಗಳು ಹಾರಿಸಲಾಗಿತ್ತು. ಇದನ್ನೂ ಓದಿ: ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು
Advertisement
Advertisement
ಏನು ಇದರ ಉದ್ದೇಶ?
ಇಂಟರ್‌ನೆಟ್ ಸೇವೆ ಒದಗಿಸುವ ಉದ್ದೇಶದಿಂದ ಸ್ಪೇಸ್ ಎಕ್ಸ್ ಕಂಪನಿ ಈ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಒಟ್ಟು 12 ಸಾವಿರ ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವಾದ್ಯಂತ ಇಂಟರ್‌ನೆಟ್ ಅನ್ನು ಕಡಿಮೆ ಬೆಲೆಗೆ ನೀಡುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಈಗಾಗಲೇ 1,465 ಉಪಗ್ರಹಗಳನ್ನು ಹಾರಿಸಿದ್ದಾರೆ.
Advertisement
ಎಷ್ಟು ದೂರದಲ್ಲಿ ಈ ಉಪಗ್ರಹಗಳು ಹಾರಾಡುತ್ತಿದೆ?
ಈ ಉಪಗ್ರಹಗಳು ಭೂಮಿಯಿಂದ ಬಹಳ ಎತ್ತರದ ಕಕ್ಷೆಯಲ್ಲಿಲ್ಲ. ಸ್ಟಾರ್ ಲಿಂಕ್ ನಕ್ಷತ್ರಗಳು ಭೂಮಿಯಿಂದ 540 ಕಿ.ಮೀ. ದೂರದಲ್ಲಿ ಹಾದು ಹೋಗುತ್ತಿದೆ. ಹೀಗಾಗಿ ಇದು ನಕ್ಷತ್ರ ರೀತಿಯಲ್ಲಿ ಗೋಚರಿಸುತ್ತಿದೆ. ಇದನ್ನೂ ಓದಿ: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಕ್ಸಸ್
ಇವುಗಳಲ್ಲಿ ಬೆಳಕು ಹೇಗೆ?
ಭೂಮಿಯಿಂದ ಎತ್ತರದಲ್ಲಿರುವ ಉಪಗ್ರಹಗಳ ಮೇಲೆ ಅಳವಡಿಸಲಾಗಿರುವ ಸೌರ ಫಲಕಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದು ಪ್ರತಿಫಲನಗೊಂಡು ನಕ್ಷತ್ರದಂತೆ ಕಾಣಿಸುತ್ತಿವೆ.
ಬೇರೆ ಬೇರೆ ಸಮಯದಲ್ಲಿ ಯಾಕೆ ಕಾಣಿಸಿಕೊಳ್ಳುತ್ತದೆ?
ಇದು ಕರ್ನಾಟಕದ ಮೇಲೆ ಸೋಮವಾರ ಸಂಜೆ ಹಾದು ಹೋಗಿದ್ದರಿಂದ ನಮಗೆ ಗೋಚರವಾಗಿದೆ. ಸೋಮವಾರ ಇದು ಅರಬ್ಬಿ ಸಮುದ್ರದ ಮೇಲೆ ಹಾದು ಹೋಗಿದ್ದರಿಂದ ಪಶ್ಚಿಮ ಭಾಗದಲ್ಲಿ ಕಾಣಿಸಿದೆ. ಎರಡು ದಿನಗಳ ಹಿಂದೆ ದಕ್ಷಿಣ ಭಾರತದಲ್ಲಿ ಕಾಣಿಸಿದರ ಬಗ್ಗೆ ವರದಿಗಳಾಗಿವೆ. ಹೀಗಾಗಿ ಅದು ಕೆಲವೊಂದು ನಿರ್ಧಿಷ್ಟ ಪ್ರದೇಶದಲ್ಲಿ ಮಾತ್ರವೇ ಕಾಣಿಸುತ್ತದೆ.
ಕೆಲವೆಡೆ ಸ್ಪಷ್ಟವಾಗಿ ಹಾಗೂ ಕೆಲವೆಡೆ ಅಸ್ಪಷ್ಟವಾಗಿ ಕಾಣಿಸಲು ಕಾರಣ ಏನು?
ವಾತಾವರಣ ಶುದ್ಧವಾಗಿದ್ದರೆ, ಆಕಾಶದಲ್ಲಿ ಮೋಡ ಇಲ್ಲವಾದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಯೇ ಸೂರ್ಯನ ಪ್ರತಿಫಲನದಿಂದಾಗಿ ಅದು ನಮಗೆ ಗೋಚರವಾಗುವುದರಿಂದ ವ್ಯತ್ಯಾಸಗಳು ಕಂಡುಬರುತ್ತದೆ.
ಉಪಗ್ರಹಗಳು ಸರದಿ ಸಾಲಿನಲ್ಲಿ ಹೋಗಲು ಕಾರಣವೇನು?
ಸ್ಟಾರ್‌ಲಿಂಕ್ ಸಂಸ್ಥೆ ಉಪಗ್ರಹಗಳನ್ನು ಗುಂಪಿನಲ್ಲಿ ಬಿಡುಗಡೆ ಮಾಡುತ್ತಿದೆ. ಇದು ಒಂದೆರಡು ದಿನಗಳ ವರೆಗೆ ನಮಗೆ ಸಾಲಿನಲ್ಲಿಯೇ ತೋರುತ್ತದೆ. ನಂತರದಲ್ಲಿ ಇವುಗಳಿಗೆ ಒದಗಿಸಿದ ಕೋಡ್‍ಗಳ ಪ್ರಕಾರ ಅವುಗಳ ಜಾಗವನ್ನು ಸೇರಿಕೊಂಡು ಕಕ್ಷೆಯಲ್ಲಿ ಸುತ್ತುತ್ತಿರುತ್ತದೆ. ಇದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ
ಇಂದು ಆಕಾಶದ ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ?
ಸೋಮವಾರ ಇದು ಪಶ್ಚಿಮ ದಿಗಂತಕ್ಕಿತಂಲೂ ಸ್ವಲ್ಪ ಮೇಲೆ ಕಾಣಿಸಿಕೊಂಡಿತ್ತು. ಮಂಗಳವಾರ ಪಶ್ಚಿಮ ದಿಗಂತದ ಬಳಿಯಲ್ಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ ಶುಕ್ರ ಗ್ರಹದ ಬಳಿಯಲ್ಲೇ ಹಾದು ಹೋಗುವ ಸಾಧ್ಯತೆ ಇದೆ. ಇಂದು ಇದು ಕೊನೆಯದಾಗಿ ಕಾಣಿಸಿಕೊಳ್ಳಲಿದ್ದು, ನಾಳೆ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.
ಕಡಿಮೆ ಬೆಲೆಗೆ ಇಂಟರ್‌ನೆಟ್ ಸಿಗುತ್ತಾ?
ಭಾರತದಲ್ಲಿ ಇನ್ನೂ ಈ ಸೇವೆಗೆ ಭಾರತ ಸರ್ಕಾರ ಅನುಮತಿ ನೀಡಿಲ್ಲ. ಈಗ ಪ್ರಯೋಗಗಳು ನಡೆಯುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ಪ್ರಕಾರ ತಿಂಗಳಿಗೆ 7,425 ರೂ. ದರ ನಿಗದಿಯಾಗುವ ಸಾಧ್ಯತೆಯಿದೆ. ಈಗ ಮೊಬೈಲ್ ಟವರ್, ಸಮುದ್ರದ ಆಳದಲ್ಲಿ ಹಾಕಲಾದ ಕೇಬಲ್ ಮೂಲಕ ಇಂಟರ್‌ನೆಟ್ ಸಂಪರ್ಕ ಸಿಗುತ್ತದೆ. ಆದರೆ ದೂರದ ಪ್ರದೇಶ, ಬೆಟ್ಟಗುಡ್ಡಗಳಲ್ಲಿ ಇಂಟರ್‌ನೆಟ್ ಸಂಪರ್ಕ ಈಗಲೂ ಅಲಭ್ಯವಾಗಿದೆ. ಉಪಗ್ರಹ ಆಧಾರಿತ ಈ ಇಂಟರ್‌ನೆಟ್ ಸಂಪರ್ಕ ಪಡೆದರೆ ಈ ಪ್ರದೇಶದಲ್ಲೂ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು. ಇದನ್ನೂ ಓದಿ: ಪಿ. ವಿ ಸಿಂಧುಗೆ BWF ಗೌರವ
ಮನೆಗೆ ಹೇಗೆ ಇಂಟರ್‌ನೆಟ್ ಬರುತ್ತೆ?
ಡಿಟಿಎಚ್ ಮೂಲಕ ಹೇಗೆ ವಾಹನಿಗಳನ್ನು ವೀಕ್ಷಿಸಲಾಗುತ್ತದೋ ಅದೇ ರೀತಿಯ ಸ್ಟಾರ್ ಲಿಂಕ್ ಇಂಟರ್‌ನೆಟ್ ಪಡೆಯಲು ಮನೆಯ ಹೊರ ಭಾಗದಲ್ಲಿ ಒಂದು ಡಿಶ್ ಆಳವಡಿಸಬೇಕಾಗುತ್ತದೆ. ಈ ಡಿಶ್ ಜೊತೆಗೆ ವೈಫ್ ರೂಟರ್ ಸಹ ಬರುತ್ತದೆ. ಈ ಮೂಲಕ ಇಂಟರ್‌ನೆಟ್ ಸಂಪರ್ಕ ಪಡೆಯಬಹುದು. ಈಗಾಗಲೇ ಅಮೆರಿಕ, ಕೆನಡಾದಲ್ಲಿ ಜನ ಈ ಸೇವೆಯನ್ನು ಬಳಸುತ್ತಿದ್ದಾರೆ.