ಹಾಸನ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಜೆಡಿಎಸ್ ಮುಖಂಡರೊಬ್ಬರ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗುತ್ತಿದೆ.
ಮೃತರನ್ನು ಕನ್ನಂಬಾಡಿ ರವಿ(47) ಎಂದು ಗುರುತಿಸಲಾಗಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಬ್ಬಳಿ ದೇವಸ್ಥಾನದ ಬಳಿಯ ಮರದಲ್ಲಿ ಶವ ಪತ್ತೆಯಾಗಿದೆ. ಜೆಡಿಎಸ್ ಮುಖಂಡರಾಗಿರೋ ರವಿ ಅಕ್ಕನಹಳ್ಳಿ ಗ್ರಾಮದ ಪಿಎಸಿಸಿ ಸೊಸೈಟಿ ಸದಸ್ಯರಾಗಿಯೂ ಇದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಚಿರಪರಿಚಿತಾಗಿದ್ದರು.
ರವಿ ನೇಣುಬಿಗಿದ ಪಕ್ಕದಲ್ಲೇ ಬೈಕ್ ಕೂಡ ಮಗುಚಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದೊಂದು ಕೊಲೆ ಅಂತ ಪೊಲೀಸರು ಶಂಕಿಸಿದ್ದಾರೆ. ಸದ್ಯ ನುಗ್ಗೆಹಳ್ಳಿ ಪೊಲೀಸರು ಸ್ಥಳ ಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.