Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕಾಂಗೋದಲ್ಲಿ ನಿಗೂಢ `ಅಳುವ ರೋಗ’ಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ – 400 ಮಂದಿಗೆ ಸೋಂಕು

Public TV
Last updated: February 27, 2025 3:41 pm
Public TV
Share
3 Min Read
Mysterious Crying Disease Kills Over 50 In Congo What We Know So Far 1
SHARE

ಕಿನ್ಶಾಸಾ: ವಾಯುವ್ಯ ಕಾಂಗೋದ ಈಕ್ವೆಟರ್ ಪ್ರಾಂತ್ಯದಲ್ಲಿ ನಿಗೂಢ ರೋಗವೊಂದು ಪತ್ತೆಯಾಗಿದ್ದು, ಇದುವರೆಗೂ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸಾವಿಗೀಡಾದ 50 ಮಂದಿಯಲ್ಲಿ 25 ಜನ ಅನಾರೋಗ್ಯಕ್ಕೆ ಗುರಿಯಾದ ಕೆಲವೇ ಗಂಟೆಗಳಲ್ಲಿ ಸಾವಿಗೀಡಾಗಿದ್ದಾರೆ. ರೋಗ ಪತ್ತೆಯಾದ ಜನರಲ್ಲಿ ಅಳುವುದು ಪ್ರಮುಖ ಲಕ್ಷಣವಾಗಿದೆ ಎಂದು ವರದಿಯಾಗಿದೆ.

ಈಕ್ವೆಟರ್‌ ಪ್ರಾತ್ಯದ ಹಳ್ಳಿಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಆರೋಗ್ಯ ಅಧಿಕಾರಿಗಳು 419 ಪ್ರಕರಣಗಳು ಮತ್ತು 53 ಸಾವುಗಳನ್ನು ವರದಿ ಮಾಡಿದ್ದಾರೆ. ಮಾನವ ಪ್ರಸರಣ ಸೇರಿದಂತೆ ರೋಗಗಳು ಹೇಗೆ ಹರಡುತ್ತಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Mysterious Crying Disease Kills Over 50 In Congo What We Know So Far

ಬೊಲೊಕೊದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಅಲ್ಲಿ ಬಾವಲಿ ತಿಂದ 48 ಗಂಟೆಗಳ ಒಳಗೆ ಮೂರು ಮಕ್ಕಳು ಸಾವನ್ನಪ್ಪಿದ್ದರು. ಬೊಮೊಟೆಯಲ್ಲಿ, 400 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಮಲೇರಿಯಾ ಪತ್ತೆಯಾಗಿದೆ.

ಕಿನ್ಶಾಸಾದಿಂದ 640 ಕಿಲೋಮೀಟರ್ ದೂರದಲ್ಲಿರುವ ಈಕ್ವೆಟರ್ ಪ್ರಾಂತ್ಯದ ಎರಡು ದೂರದ ಹಳ್ಳಿಗಳಲ್ಲಿ ರೋಗಗಳು ಕಾಣಿಸಿಕೊಂಡಿದೆ. ಈ ಹಳ್ಳಿಗಳ ನಡುವಿನ ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಿಲ್ಲ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಬಿಕೊರೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಸರ್ಕಾರಿ ಪ್ರತಿಕ್ರಿಯೆ ತಂಡದ ಸದಸ್ಯರಾದ ಡಾ. ಸೆರ್ಗೆ ನ್ಗಾಲೆಬಾಟೊ ಈ ಬಗ್ಗೆ ಪ್ರತಿಕ್ರಿಯಿಸಿ, ಮೊದಲನೆಯದಾಗಿ ಬಹಳಷ್ಟು ಸಾವುಗಳು ಸಂಭವಿಸಿದ್ದು, ನಾವು ತನಿಖೆ ಮುಂದುವರಿಸುತ್ತಿದ್ದೇವೆ. ಎರಡನೇ ಕಂತಿನಲ್ಲಿ ಜನರಲ್ಲಿ ಮಲೇರಿಯಾದ ಲಕ್ಷಣಗಳು ಕಾಣಿಸಿವೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 80% ರೋಗಿಗಳು ಜ್ವರ, ಶೀತ, ಮೈಕೈ ನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಕಾಂಗೋದ ಆರೋಗ್ಯ ಸಚಿವಾಲಯ ತಿಳಿಸಿದೆ. ರೋಗಿಗಳು ಕುತ್ತಿಗೆ ಮತ್ತು ಕೀಲು ನೋವು, ಬೆವರು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿವೆ. 59 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತೀವ್ರ ಬಾಯಾರಿಕೆ, ಮಕ್ಕಳಲ್ಲಿ ನಿರಂತರ ಅಳುವ ಲಕ್ಷಣಗಳು ಕಾಣಿಸಿಕೊಂಡಿವೆ.

ಆರಂಭದಲ್ಲಿ ಎಬೋಲಾದಂತಹ ರಕ್ತಸ್ರಾವದ ಜ್ವರದ ಸಾಧ್ಯತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಲಾಯಿತು. ಹಲವರ ರಕ್ತ ಪರೀಕ್ಷಿಸಿದ ನಂತರ ಎಬೋಲಾ ಮತ್ತು ಮಾರ್ಬರ್ಗ್‌ನಂತಹ ರೀತಿಯ ರೋಗಗಳನ್ನು ತಳ್ಳಿಹಾಕಲಾಗಿದೆ. ಮಲೇರಿಯಾ, ವೈರಲ್ ಹೆಮರಾಜಿಕ್ ಜ್ವರ, ಆಹಾರ ಅಥವಾ ಕಲುಷಿತ ನೀರು, ಟೈಫಾಯಿಡ್ ಜ್ವರ ಮತ್ತು ಮೆನಿಂಜೈಟಿಸ್ ಸೇರಿದಂತೆ ಇತರ ಸಂಭಾವ್ಯ ಕಾರಣಗಳನ್ನು WHO ಈಗ ತನಿಖೆ ಮಾಡುತ್ತಿದೆ.

ಕಾಂಗೋ ಸರ್ಕಾರವು ಫೆಬ್ರವರಿ 14 ರಂದು ಸಾಂಕ್ರಾಮಿಕ ರೋಗಗಳ ತನಿಖೆ ಮತ್ತು ಹರಡುವಿಕೆಯನ್ನು ನಿಯಂತ್ರಿಸಲು ಆರೋಗ್ಯ ತಜ್ಞರನ್ನು ರೋಗ ಪೀಡಿತ ಹಳ್ಳಿಗಳಿಗೆ ಕಳುಹಿಸಿತ್ತು. ದೂರದ ಸ್ಥಳಗಳು ಮತ್ತು ಆರೋಗ್ಯ ಮೂಲಸೌಕರ್ಯದ ಕೊರತೆ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ.

ಕಾಂಗೋದ ಕಾಡುಗಳಿಗೂ ಇದಕ್ಕೂ ಸಂಬಂಧವಿದೆಯೇ?
ಬಾವಲಿ ಸೇವನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಜ್ಞರು, ಇಂತಹ ಆಹಾರ ಸೇವನೆಯಿಂದ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಸಾಧ್ಯತೆ ಇದೆ ಶಂಕಿಸಿದ್ದಾರೆ. ಜನರು ಕಾಡು ಪ್ರಾಣಿಗಳನ್ನು ತಿನ್ನುವುದು, ಅರಣ್ಯದಿಂದ ಮನುಷ್ಯರಿಗೆ ಬರುವ ರೋಗಗಳ ಬಗ್ಗೆ ಬಹಳ ಹಿಂದಿನಿಂದಲೂ ಕಳವಳಗಳಿವೆ. ಕಳೆದ ದಶಕದಲ್ಲಿ ಆಫ್ರಿಕಾದಲ್ಲಿ ಇಂತಹ ಏಕಾಏಕಿ ಸಂಭವಿಸುವ ಸಂಖ್ಯೆ 60% ಕ್ಕಿಂತ ಹೆಚ್ಚಾಗಿದೆ ಎಂದು WHO 2022 ರಲ್ಲಿ ಹೇಳಿತ್ತು.

ಕಾಂಗೋ ಜಲಾನಯನ ಪ್ರದೇಶದ ಸುಮಾರು 60% ಕಾಡುಗಳಿಗೆ ನೆಲೆಯಾಗಿದೆ ಮತ್ತು ಭೂಮಿಯ ಮೇಲಿನ ಅತಿದೊಡ್ಡ ಉಷ್ಣವಲಯದ ಅರಣ್ಯ ಇಲ್ಲಿದೆ. ಕಾಂಗೋದಲ್ಲಿ ಸಹ ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ತಗುಲಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.

ಕಾಂಗೋದ ಆರೋಗ್ಯ ವಲಯಕ್ಕೆ ಅತಿದೊಡ್ಡ ಸಹಾಯ ಹಸ್ತವಾಗಿರುವ ಅಮೆರಿಕ, ರೋಗ ಹರಡುವಿಕೆಯನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಸಹಾಯ ಮಾಡಲು ಕ್ಷೇತ್ರ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ತರಬೇತಿಯನ್ನು ಬೆಂಬಲಿಸಿದೆ. ಆದಾಗ್ಯೂ, ಟ್ರಂಪ್ ಆಡಳಿತವು ಇತ್ತೀಚೆಗೆ 90 ದಿನಗಳ ಪರಿಶೀಲನೆಯ ಸಮಯದಲ್ಲಿ ವಿದೇಶಿ ನೆರವನ್ನು ಸ್ಥಗಿತಗೊಳಿಸಿತ್ತು. ಇದು ಕಾಂಗೋದ ಮೇಲೆ ಪರಿಣಾಮ ಬೀರಬಹುದು.

Share This Article
Facebook Whatsapp Whatsapp Telegram

Cinema Updates

Shankar Mahadevan
IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?
8 hours ago
anant nag
ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ
5 hours ago
shine shetty
ಯಶಸ್ಸಿಗಾಗಿ ‘ವಿಲನ್’ ಆದ ‘ಬಿಗ್ ಬಾಸ್’ ಶೈನ್ ಶೆಟ್ಟಿ
10 hours ago
Kamal Haasan
ತಮಿಳಿನಿಂದ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶ
11 hours ago

You Might Also Like

RCB 1
Cricket

9 ವರ್ಷಗಳ ಬಳಿಕ ಕ್ವಾಲಿಫೈಯರ್‌ 1ಗೆ ಲಗ್ಗೆಯಿಟ್ಟ ಆರ್‌ಸಿಬಿ

Public TV
By Public TV
4 hours ago
Jitesh Sharma 2
Cricket

IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

Public TV
By Public TV
4 hours ago
padma awards
Latest

ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

Public TV
By Public TV
4 hours ago
Jitesh Sharma
Cricket

IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳಿಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

Public TV
By Public TV
4 hours ago
mangaluru murder
Crime

ಮಂಗಳೂರು| ತಲ್ವಾರ್‌ನಿಂದ ದಾಳಿ ನಡೆಸಿ ಯುವಕನ ಬರ್ಬರ ಹತ್ಯೆ

Public TV
By Public TV
5 hours ago
Amandeep Kaur
Crime

ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?