ಬೆಂಗಳೂರು: ಮೈಸೂರು ಬೆಂಗಳೂರು ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಗೊಂಡಿರುವ ವಿಷಯವನ್ನು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ನಿತ್ಯವೂ ಸಂಜೆ 5.20ಕ್ಕೆ ರೈಲು ಸೇವೆ ಆರಂಭವಾಗಲಿದೆ. ಮೈಸೂರಿನಿಂದ ಅದೇ ರೈಲು 8.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳಸಲಿದೆ. 2.40 ನಿಮಿಷದ ಪ್ರಯಾಣಕ್ಕೆ 30 ರೂ.ನಿಗದಿ ಮಾಡಲಾಗಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನ ರೈಲು ಸಂಚರಿಸಲಿದೆ.
Advertisement
Advertisement
ಪ್ರತಾಪ್ ಸಿಂಹ್ ಟ್ವೀಟ್:
ನಿನ್ನೆಯೇ ಘೋಷಿಸಬೇಕೆಂದು ಯೋಚಿಸಿದ್ದೆ, ಆರ್ಡರ್ ಕಾಪಿ ಸಿಗೋದು ಲೇಟ್ ಆಯಿತು. ಇನ್ನು ಮುಂದೆ ಮೆಮು ರೈಲು ಬೆಂಗಳೂರಿಂದ ಸಂಜೆ 5.20ಕ್ಕೆ ಹೊರಟು ಮೈಸೂರಿಗೆ ರಾತ್ರಿ 8 ಗಂಟೆಗೆ ಬರುತ್ತದೆ. ಪುನಃ 8.30ಕ್ಕೆ ಹೊರಟು ರಾತ್ರಿ 11ಕ್ಕೆ ಬೆಂಗಳೂರು ತಲುಪಲಿದೆ. ಸೋಮವಾರದಿಂದ ಶನಿವಾರದವರೆಗೆ ಈ ಸೇವೆ ಲಭ್ಯ. ಬರೀ 30 ರೂಪಾಯಿ! ಇನ್ನೊಂದು ಘೋಷಣೆಯಿದೆ, ವಾರ ಕಾಯಿರಿ! ಎಂದು ಪ್ರತಾಪ್ ಸಿಂಹ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
ನಿನ್ನೆಯೇ ಘೋಷಿಸಬೇಕೆಂದು ಯೋಚಿಸಿದ್ದೆ, ಆರ್ಡರ್ ಕಾಪಿ ಸಿಗೋದು ಲೇಟ್ ಆಯಿತು. ಇನ್ನು ಮುಂದೆ ಮೆಮು ರೈಲು ಬೆಂಗಳೂರಿಂದ ಸಂಜೆ 5.20 ಕ್ಕೆ ಹೊರಟು ಮೈಸೂರಿಗೆ 8ಕ್ಕೆ ಬರುತ್ತದೆ, ಪುನಃ 8.30ಕ್ಕೆ ಹೊರಟು ರಾತ್ರಿ 11ಕ್ಕೆ ತಲುಪಲಿದೆ. ಸೋಮವಾರದಿಂದ ಶನಿವಾರದವರೆಗೆ ಈ ಸೇವೆ ಲಭ್ಯ! ಬರೀ 30 ರೂಪಾಯಿ!! ಇನ್ನೊಂದು ಘೋಷಣೆಯಿದೆ, ವಾರ ಕಾಯಿರಿ!! pic.twitter.com/dVwxPAkJLz
— Pratap Simha (@mepratap) July 20, 2019