ಮೈಸೂರು: ಮಕ್ಕಳ ಪಾಸ್‍ಪೋರ್ಟ್ ಮಾಡಿಸಲು ಹೋದ ತಂದೆಯೊಬ್ಬರು ಬೆಂಗಳೂರು ಪಾಸ್‍ಪೋರ್ಟ್ ಕಚೇರಿಯಲ್ಲಿರುವ ಮಧ್ಯಮರ್ತಿಗಳ ದಂಧೆಯನ್ನು ಬಯಲು ಮಾಡಿದ್ದಾರೆ.
ಪ್ರತಿಭಾನ್ವಿತ ಮಕ್ಕಳನ್ನು ಸ್ಪರ್ಧೆಗೆ ವಿದೇಶಕ್ಕೆ ಕಳುಹಿಸಲು ಹಣಕ್ಕಾಗಿ ಪರದಾಡುತ್ತಿದ್ದ ತಂದೆ, ತನ್ನ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿನ ಮಧ್ಯವರ್ತಿಗಳು ಸೃಷ್ಟಿ ಮಾಡಿರುವ ವ್ಯವಸ್ಥೆಯನ್ನು ರೆಕಾರ್ಡ್ ಮಾಡಿದ್ದಾರೆ.
Advertisement
ಮೈಸೂರಿನ ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ನ ಯರಳ್ಳಿ ಗ್ರಾಮದ ಮಂಜು ರಾವ್ ಬೀದಿ ಬೀದಿಯಲ್ಲಿ ಪಾತ್ರೆ ಮಾರಿ ಜೀವನ ಸಾಗಿಸುತ್ತಿದ್ದರು. ಇವರ ಇಬ್ಬರು ಮಕ್ಕಳಾ ಐಶ್ವರ್ಯ ಹಾಗೂ ನಿಖಿಲ್ ಮಲೇಷಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಬಾಕ್ಸಿಂಗ್ ಗೆ ಆಯ್ಕೆಯಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಮಲೇಷಿಯಾಗೆ ಮಕ್ಕಳನ್ನು ಕಳಿಸಲು ಸಾಧ್ಯವಾಗುತ್ತೋ ಇಲ್ವೋ ಅಂತಾ ಮಂಜು ರಾವ್ ಚಿಂತೆಯಲ್ಲಿದ್ದಾರೆ.
Advertisement
ಈ ನಡುವೆ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿ ಸಂಪರ್ಕಕ್ಕೆ ಬಂದ ಮಧ್ಯವರ್ತಿ ತುರ್ತಾಗಿ ಮಕ್ಕಳ ಪಾಸ್ ಪೋರ್ಟ್ ಮಾಡಿಸಿ ಕೊಡಲು ಲಂಚ ಕೇಳಿದ್ದಾನೆ. ಐದು ಸಾವಿರ ಹಣ ಕೇಳುವ ಮಧ್ಯವರ್ತಿ ಕೊನೆಗೆ ಪಾಸ್ ಪೋರ್ಟ್ ಅಧಿಕಾರಿಗಳಿಗೆ ಎರಡು ಸಾವಿರ ಕೊಡಬೇಕು ನನಗೆ ಒಂದು ಸಾವಿರ ಎಂದು ಹೇಳಿ ಮೂರು ಸಾವಿರ ರೂಪಾಯಿ ಪಡೆದಿದ್ದಾನೆ. ಅಧಿಕಾರಿ ಲಂಚ ಪಡೆದ ವಿಡಿಯೋ ಮಾಡಿದ್ದು, ಅವರ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ.
Advertisement