ಮೈಸೂರು: ಅರಮನೆಯ ಆನೆಗಳು ಗುಜರಾತ್‌ಗೆ ಶಿಪ್ಟ್ ಆಗಿವೆ. ಆನೆಗಳ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಗುಜರಾತ್‌ಗೆ ರವಾನಿಸಲಾಗಿದೆ.
Advertisement
ರಾಜವಂಶಸ್ಥರಿಗೆ ಸೇರಿದ ಈ ಆನೆಗಳ ನಿರ್ವಹಣೆ ಕಷ್ಟವಾಗಿತ್ತು. ಪ್ರತಿ ತಿಂಗಳು ಆನೆಗಳ ನಿರ್ವಹಣೆಗೆ ಲಕ್ಷ ಲಕ್ಷ ಖರ್ಚಾಗುತ್ತಿತ್ತು. ಹೀಗಾಗಿ ಗುಜರಾತ್‌ನ ಆನೆಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಆನೆ ವೈದ್ಯರಿಂದ ತಪಾಸಣೆ ನಡೆಸಿದ್ದ ಅರಣ್ಯ ಇಲಾಖೆಯು ತಪಾಸಣೆ ಬಳಿಕ ಆನೆಗಳನ್ನು ಕಳುಹಿಸಿತು. ಇದನ್ನೂ ಓದಿ: ಶೌರ್ಯ, ಶೌರ್ಯೇತರ ಪ್ರಶಸ್ತಿ ಪಡೆದ ಯೋಧರ ಅನುದಾನ ಹೆಚ್ಚಳಕ್ಕೆ ಸಿಎಂ ಅಸ್ತು
Advertisement
Advertisement
ಮೂರು ದಿನಗಳ ಕಾಲ ಪ್ರಯಾಣ ಮಾಡಲಿದ್ದು, ಆನೆಗಳು ಮೂರು ದಿನದ ಬಳಿಕ ಗುಜರಾತ್ ತಲುಪಲಿವೆ. ದೊಡ್ಡ ಟ್ರಕ್ ಮೂಲಕ ಗುಜರಾತ್‌ಗೆ ಆನೆಗಳನ್ನು ರವಾನಿಸಲಾಗಿದೆ. ಇದನ್ನೂ ಓದಿ: ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ನಿರ್ಮಿಸಿದ ಹೊಸೂರು ಗ್ರಾಮಸ್ಥರು